ಬಾಲಿವುಡ್ ಬಹುಬೇಡಿಕೆ ಕಲಾವಿದರಾದ ರಣ್ವೀರ್ ಸಿಂಗ್ ಹಾಗೂ ಆಲಿಯಾ ಭಟ್ ಅಭಿನಯದ ಇತ್ತೀಚಿನ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾ ಸೂಪರ್ ಹಿಟ್ ಆಗಿದೆ. ಬಾಲಿವುಡ್ನ ಖ್ಯಾತ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ನಿರ್ದೇಶಿಸಿ, ನಿರ್ಮಾಣ ಮಾಡಿರುವ ಈ ಸಿನಿಮಾ ಹಲವು ವಿಷಯಗಳಿಂದ ಸುದ್ದಿ ಮಾಡಿತ್ತು.
ಸಿನಿಮಾ ಹೆಡ್ಲೈನ್ ಆಗಲು ಹಿರಿಯ ನಟರಾದ ಧರ್ಮೇಂದ್ರ ಮತ್ತು ಶಬಾನಾ ಅಜ್ಮಿ ಅವರ ಲಿಪ್ ಲಾಕ್ ಸೀನ್ ಕೂಡ ಒಂದು. ಈ ಚುಂಬನದ ದೃಶ್ಯ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿತ್ತು. ಕರಣ್ ಜೋಹರ್ ನಿರ್ದೇಶನದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾದಲ್ಲಿ ಇಬ್ಬರು ಅನುಭವಿ ನಟರು ಡೀಪ್ ಕಿಸ್ಸಿಂಗ್ ಸೀನ್ ಮಾಡಲು ಒಪ್ಪಿಕೊಂಡ ದಿಟ್ಟ ನಿರ್ಧಾರಕ್ಕೆ ಹೆಚ್ಚಿನ ಸಂಖ್ಯೆಯ ಸಿನಿಪ್ರಿಯರು ಪ್ರಶಂಸಿಸಿದ್ದರು. ಇದೀಗ ಹಿರಿಯ ನಟ ಧರ್ಮೇಂದ್ರ ಅವರ ಪತ್ನಿ ಹೇಮಾ ಮಾಲಿನಿ ಈ ದೃಶ್ಯದ ಬಗ್ಗೆ ಮಾತನಾಡಿದ್ದಾರೆ. ಚಿತ್ರದ ಕಥಾವಸ್ತು ಉತ್ತಮವಾಗಿ ಕಾರ್ಯ ನಿರ್ವಹಿಸಿದರೆ ನಾನು ತೆರೆ ಮೇಲೆ ಚುಂಬನದಂತಹ ದೃಶ್ಯಗಳಲ್ಲಿ ನಟಿಸಲು ಸಿದ್ಧ ಎಂದು ತಿಳಿಸಿದ್ದಾರೆ.
ಹಿರಿಯ ನಟಿ ಹೇಮಾ ಮಾಲಿನಿ ಅವರಿಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಚುಂಬನದ ಕುರಿತಾಗಿ ಪ್ರಶ್ನೆ ಎದುರಾಗಿತ್ತು. ಸಿನಿಮಾದಲ್ಲಿ ಕಿಸ್ಸಿಂಗ್ ಸೀನ್ ಮಾಡಲು ಒಪ್ಪಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ನಟಿ 'ಹೌದು' ಎಂಬ ಉತ್ತರ ಕೊಟ್ಟಿದ್ದಾರೆ. ''ನಾನೇಕೆ ಮಾಡುವುದಿಲ್ಲ, ಖಂಡಿತ ಅಭಿನಯಿಸುತ್ತೇನೆ. ಒಂದು ವೇಳೆ ಸೀನ್ ಬಹಳ ಉತ್ತಮವಾಗಿದ್ದರೆ, ಚಿತ್ರಕ್ಕೆ ಸಂಬಂಧಿಸಿದ್ದರೆ ಬಹುಶಃ ನಾನು ಈ ಸೀನ್ ಮಾಡಬಹುದು'' ಎಂದು ತಿಳಿಸಿದ್ದಾರೆ. ಇದೇ ಸಂದರ್ಶನದಲ್ಲಿ, ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾವನ್ನು ನಾನಿನ್ನೂ ವೀಕ್ಷಿಸಿಲ್ಲ ಎಂಬುದನ್ನು ಬಹಿರಂಗಪಡಿಸಿದರು.