ಕರ್ನಾಟಕ

karnataka

ETV Bharat / entertainment

ಹೆಡ್ ಬುಶ್ ಪ್ರೀ ರಿಲೀಸ್ ಇವೆಂಟ್.. ಮೋಹಕ ತಾರೆ, ಡಿಂಪಲ್ ಕ್ವೀನ್ ಸಾಥ್

ದಾವಣಗೆರೆಯಲ್ಲಿ ಇದೇ 16ರಂದು ಹೆಡ್ ಬುಶ್ ಪ್ರೀ ರಿಲೀಸ್ ಇವೆಂಟ್ ನಡೆಯಲಿದೆ.

Head Bush Pre Release Event
ಹೆಡ್ ಬುಶ್ ಪ್ರೀ ರಿಲೀಸ್ ಇವೆಂಟ್

By

Published : Oct 13, 2022, 3:23 PM IST

ಬೆಂಗಳೂರು ಅಂಡರ್ ವರ್ಲ್ಡ್‌ ಡಾನ್ ಆಗಿ ಮರೆದ ಜಯರಾಜ್ ಕುರಿತ ಸಿನಿಮಾ ಹೆಡ್ ಬುಷ್‌. ಡಾಲಿ ಧನಂಜಯ್ ಜಯರಾಜ್ ಪಾತ್ರದಲ್ಲಿ ಅಭಿನಯಿಸಿದ್ದು, ಹೆಡ್ ಬುಷ್ ಸಿನಿಮಾ ಬಿಡುಗಡೆಗೂ ಮುನ್ನ ಸ್ಯಾಂಡಲ್​ವುಡ್​ನಲ್ಲಿ ಸಖತ್​ ಸೌಂಡ್ ಮಾಡುತ್ತಿದೆ. ಡಾಲಿ ಧನಂಜಯ್ ರೆಟ್ರೋ ಶೈಲಿಯ ಬೆಲ್ ಬಾಟಮ್ ಕಾಸ್ಟೂಮ್ ತೊಟ್ಟು ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ದಾವಣಗೆರೆಯಲ್ಲಿ ಇದೇ 16ರಂದು ಹೆಡ್ ಬುಶ್ ಪ್ರೀ ರಿಲೀಸ್ ಇವೆಂಟ್ ನಡೆಯಲಿದ್ದು, ನಟಿಯರಾದ ರಮ್ಯಾ ಮತ್ತು ರಚಿತಾ ರಾಮ್​ ಡಾಲಿಗೆ ಸಾಥ್ ನೀಡಲಿದ್ದಾರೆ.

ಕೆಲ ದಿನಗಳಲ್ಲಿ ಹಿಂದೆ ಧನಂಜಯ್ ಬೆಲ್ ಬಾಟಮ್ ಕಾಸ್ಟೂಮ್ ತೊಟ್ಟು ದುಬೈ ಹಾಗೂ ಯುರೋಪ್ ದೇಶಗಳಿಗೆ ಹೋಗಿ ಚಿತ್ರದ ಪ್ರಚಾರ ಮಾಡಿದ್ದರು. ದುಬೈನಿಂದ ವಾಪಸ್ ಬೆಂಗಳೂರಿಗೆ ಬಂದ‌ ವೇಳೆ ಡಾಲಿಗೆ ಅದ್ಧೂರಿ ಸ್ವಾಗತ ಸಿಕ್ಕಿತ್ತು. ಧನಂಜಯ್ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಅಲ್ಲಿ ಹೆಡ್ ಬುಷ್ ಸಿನಿಮಾ ಪ್ರಚಾರ ಮಾಡುತ್ತಿದ್ದು, ಈಗ ಕನ್ನಡ ಚಿತ್ರರಂಗದ ಇಬ್ಬರು ಬ್ಯೂಟಿಫುಲ್ ಹೀರೋಯಿನ್‌ಗಳ ಸಾಥ್ ಸಿಕ್ಕಿದೆ.

ಹೆಡ್ ಬುಶ್

ಹೆಡ್ ಬುಶ್ ಪ್ರೀ ರಿಲೀಸ್ ಕಾರ್ಯಕ್ರಮವನ್ನು ದಾವಣಗೆರೆಯ ಎಂಬಿಎ ಕಾಲೇಜ್ ಆವರಣದಲ್ಲಿ ಇದೇ 16ರಂದು ಸಂಜೆ 5.30ಕ್ಕೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಬರುವ ಮೂಲಕ ಡಾಲಿ ಸಿನಿಮಾಗೆ ದೊಡ್ಡ ಸಾಥ್ ಸಿಕ್ಕಿದೆ. ಜೊತೆಗೆ ವಸಿಷ್ಠ ಸಿಂಹ, ಲೂಸ್ ಮಾದ ಯೋಗಿ, ನಿರಂಜನ್, ರೋಷನ್, ಶ್ರುತಿ ಹರಿಹರನ್ ಭಾಗವಹಿಸಲಿದ್ದಾರೆ‌.

ರಚಿತಾ ರಾಮ್ ಮತ್ತು ರಮ್ಯಾ

ಈ ಬಗ್ಗೆ ನಟಿ ರಮ್ಯಾ ಟ್ವೀಟ್ ಮಾಡಿದ್ದು, ದಾವಣಗೆರೆಯ ಎಂಬಿಎ ಕಾಲೇಜು ಆವರಣದಲ್ಲಿ ಅಕ್ಟೋಬರ್ 16ರ ಸಂಜೆ 5.30ಕ್ಕೆ ನಡೆಯಲಿರುವ ಹೆಡ್ ಬುಷ್ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಚಿತ್ರತಂಡದ ಜೊತೆ ನಾನು ಸಹ ಆಗಮಿಸುತ್ತಿದ್ದೇನೆ. ಅಲ್ಲಿಯೇ ನಾವೆಲ್ಲರೂ ಸಿಗೋಣ್ವಾ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಅಂಬಾಸಿಡರ್ ಕಾರಿನಲ್ಲಿ ಸಂಚರಿಸಿ ಹೆಡ್ ಬುಷ್ ಸಿನಿಮಾ ಪ್ರಚಾರ ಮಾಡಿದ ಡಾಲಿ

ಇನ್ನೂ ಹೆಡ್ ಬುಷ್ ಸಿನಿಮಾ ಇದೇ ತಿಂಗಳ 21ಕ್ಕೆ ತೆರೆಗೆ ಬರಲಿದೆ. ಡಾಲಿ ಧನಂಜಯ್ ಜಯರಾಜ್ ಆಗಿ ಪ್ರೇಕ್ಷಕರ ಮುಂದೆ ರೆಟ್ರೋ ಸ್ಟೈಲ್​ನಲ್ಲಿ ಎಂಟ್ರಿ ಕೊಡಲಿದ್ದಾರೆ. ಅಗ್ನಿ ಶ್ರೀಧರ್ ಕಥೆ, ಶೂನ್ಯ ನಿರ್ದೇಶನ ಸಿನಿಮಾವನ್ನು ಸೋಮಣ್ಣ ಟಾಕೀಸ್ ಹಾಗೂ ಡಾಲಿ ಪಿಚ್ಚರ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಝೀ ಸ್ಟುಡಿಯೋಸ್ ಸಿನಿಮಾವನ್ನು ವಿತರಣೆ ಮಾಡಲಿದೆ.

ಇದನ್ನೂ ಓದಿ:ಯಕ್ಷಗಾನ ವೇಷಭೂಷಣ ತೊಟ್ಟ ಎವರ್​ಗ್ರೀನ್ ಹೀರೋ ರಮೇಶ್ ಅರವಿಂದ್​

ABOUT THE AUTHOR

...view details