ಗಣೇಶ್, ಯೋಗರಾಜ್ ಭಟ್ ಕಾಂಬಿನೇಷನ್ನ ಗಾಳಿಪಟ 2 ಸಿನಿಮಾ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಚಿತ್ರತಂಡ ಖಾಸಗಿ ಹೋಟೆಲ್ನಲ್ಲಿ ಚಿತ್ರದ ಜರ್ನಿ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದೆ.
ಗಾಳಿಪಟ ನಟಿ ವೈಭವಿ ಶಾಂಡಿಲ್ಯ ಮಾತನಾಡಿ, ಕನ್ನಡ ಸಿನಿಮಾಗಳನ್ನು ಮುಂಬೈನಲ್ಲಿ ನೋಡುವ ಪ್ರೇಕ್ಷಕರು ಇದ್ದಾರೆ. ನನ್ನ ಸ್ನೇಹಿತರಿಗೆ ಕನ್ನಡ ಅರ್ಥವಾಗದಿದ್ರೂ ಇಂಗ್ಲೀಷ್ ಸಬ್ ಟೈಟಲ್ ಮೂಲಕ ಸಿನಿಮಾ ನೋಡಿ ಮೆಚ್ಚಿಕೊಂಡರು. ಅದರಲ್ಲೂ ಆಸ್ಪತ್ರೆಯಲ್ಲಿ ಗಣೇಶ್ ಹಾಗು ತಾಯಿ ಸೆಂಟಿಮೆಂಟ್ ಸೀನ್ ನಿಜಕ್ಕೂ ಎಲ್ಲರ ಮನ ಮುಟ್ಟಿದೆ. ಗಣೇಶ್ ಸರ್ ಆ್ಯಕ್ಟಿಂಗ್ ಸೂಪರ್. ಅಷ್ಟೇ ಅಲ್ಲ, ಗಾಳಿಪಟ 2 ಸಿನಿಮಾ ನೋಡಿದ ಬಾಂಬೆ ಜನರು ನನ್ನನ್ನು ಶ್ವೇತಾ ಅಂತಾ ಗುರುತಿಸಿದ್ದು ತುಂಬಾನೇ ಖುಷಿಯಾಗಿದೆ. ಮುಂಬೈನಲ್ಲಿ ಕನ್ನಡ ಸಿನಿಮಾಗಳು ಹೆಚ್ಚಾಗಿ ಸದ್ದು ಮಾಡುತ್ತಿವೆ ಅಂತಾ ಮುಂಬೈ ಬೆಡಗಿ ವೈಭವಿ ಶಾಂಡಿಲ್ಯ ಹರ್ಷ ವ್ಯಕ್ತಪಡಿಸಿದರು.