ಕರ್ನಾಟಕ

karnataka

ETV Bharat / entertainment

ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸುತ್ತಿವೆ ಬ್ಲಾಕ್​ಬಸ್ಟರ್​ ಸೀಕ್ವೆಲ್​ಗಳು: OMG 2 vs Gadar 2 ಕಲೆಕ್ಷನ್ ಹೀಗಿದೆ​ ನೋಡಿ.. - ಈಟಿವಿ ಭಾರತ ಕನ್ನಡ

OMG 2 vs Gadar 2: ಆಗಸ್ಟ್​ 11 ರಂದು ಓಎಂಜಿ 2 ಮತ್ತು ಗದರ್ 2 ಚಿತ್ರಗಳು ಬಿಡುಗಡೆಯಾಗಿದ್ದು, ಬಾಕ್ಸ್​ ಆಫೀಸ್​ನಲ್ಲಿ ಫೈಟ್​ ನೀಡಿದೆ. ಉತ್ತಮ ಕಲೆಕ್ಷನ್​ ಕೂಡ ಮಾಡಿಕೊಂಡಿವೆ.

OMG 2 vs Gadar 2
OMG 2 vs Gadar 2

By

Published : Aug 12, 2023, 1:04 PM IST

ಬಾಲಿವುಡ್​ನ ಬಹುನಿರೀಕ್ಷಿತ ಸಿನಿಮಾಗಳು ಓಎಂಜಿ 2 ಮತ್ತು ಗದರ್ 2. ಈ ಚಿತ್ರಗಳು ಆಗಸ್ಟ್​ 11 ರಂದು ಒಮ್ಮೆಲೆ ತೆರೆ ಕಂಡಿದ್ದು, ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸುತ್ತಿವೆ. ವಿಭಿನ್ನ ಪ್ರಕಾರದ ಈ ಎರಡು ಚಿತ್ರಗಳು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಆದರೆ ಸನ್ನಿ ಡಿಯೋಲ್ ಮತ್ತು ಅಮಿಷಾ ಪಟೇಲ್ ನಟನೆಯ ಗದರ್​ 2 ಕಲೆಕ್ಷನ್​ ವಿಚಾರದಲ್ಲಿ ವೇಗದ ಓಟ ಮುಂದುವರೆಸಿದರೆ, ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್ ನಟನೆಯ ಓಎಂಜಿ 2 ಕೊಂಚ ಹಿನ್ನಡೆ ಕಂಡಿದೆ.

ಹಿಂದಿ ಸೂಪರ್​ ಹಿಟ್​ ಚಿತ್ರ 'ಗದರ್​: ಏಕ್​ ಪ್ರೇಮ್​​ ಕಥಾ'ದ ಸೀಕ್ವೆಲ್​ ಗದರ್​ 2. ಬಿಡುಗಡೆಗೂ ಮುನ್ನವೇ ಮುಂಗಡ ಬುಕ್ಕಿಂಗ್​ಗೂ ನಿರೀಕ್ಷೆಗೂ ಮೀರಿ ಉತ್ತಮ ರೆಸ್ಪಾನ್ಸ್​ ಸಿಕ್ಕಿತ್ತು. ರಿಲೀಸ್​ ಆದ ಮೊದಲ ದಿನ ಕೂಡ ಉತ್ತಮ ಕಲೆಕ್ಷನ್​ ಮಾಡಿದೆ. ಗದರ್​ 1 ಚಿತ್ರ ಅನಿಲ್​ ಶರ್ಮಾ ನಿರ್ದೇಶನದಲ್ಲಿ ಮೂಡಿಬಂದಿತ್ತು. ಗದರ್​ 2 ಚಿತ್ರಕ್ಕೂ ಅನಿಲ್​ ಶರ್ಮಾ ಅವರೇ ಆ್ಯಕ್ಷನ್ ಕಟ್​ ಹೇಳಿದ್ದಾರೆ. ಮೊದಲ ಭಾಗದಲ್ಲಿದ್ದ ​ಸನ್ನಿ ಡಿಯೋಲ್​ ಮತ್ತು ಅಮಿಷಾ ಪಟೇಲ್ ಅವರೇ ಸೀಕ್ವೆಲ್​ನಲ್ಲಿ ಮುಂದುವರಿದಿದ್ದಾರೆ. 20 ವರ್ಷಗಳ ಬಳಿಕ ಬಂದಿರುವ ಈ ಸೀಕ್ವೆಲ್​ ಸಿನಿ ಪ್ರೇಮಿಗಳನ್ನು ಸೆಳೆಯುತ್ತಿದೆ.

ಓಎಂಜಿ 2 ಹಿಂದಿ ಚಿತ್ರರಂಗದ ಮತ್ತೊಂದು ಸೂಪರ್​ ಹಿಟ್​ ಚಿತ್ರದ ಸೀಕ್ವೆಲ್. ಅಕ್ಷಯ್​ ಕುಮಾರ್​​ ಮುಖ್ಯಭೂಮಿಕೆಯ ಓಎಂಜಿ 2 ಸಿನಿಮಾ ನಿನ್ನೆಯಷ್ಟೇ ತೆರೆ ಕಂಡಿದೆ. ಅಕ್ಷಯ್​ ಕುಮಾರ್‌ರೊಂದಿಗೆ​ ಪ್ರಮುಖ ಪಾತ್ರದಲ್ಲಿ ಪಂಕಜ್​ ತ್ರಿಪಾಠಿ ಮತ್ತು ಯಾಮಿ ಗೌತಮ್​ ನಟಿಸಿದ್ದು, ಬಾಕ್ಸ್​ ಆಫೀಸ್​ನಲ್ಲಿ ಗದರ್​ 2 ಜೊತೆ ಗುದ್ದಾಟ ನಡೆಸಿದೆ. ಕಲೆಕ್ಷನ್​ ವಿಚಾರದಲ್ಲಿ ಭಾರೀ ಪೈಪೋಟಿ ನೀಡಿದೆ.

ಇದನ್ನೂ ಓದಿ:OMG 2 trailer: ಅಕ್ಷಯ್​ ಕುಮಾರ್​ ನಟನೆಯ 'ಓಎಂಜಿ 2' ಟ್ರೇಲರ್​ ರಿಲೀಸ್​; ನೀವೂ ನೋಡಿ..

ಬ್ಲಾಕ್​ಬಸ್ಟರ್​ ಸೀಕ್ವೆಲ್​ಗಳ ಕಲೆಕ್ಷನ್​ ಹೀಗಿದೆ..: ಗದರ್​ 2 ಚಿತ್ರವು ಮೊದಲ ದಿನದಂದು ಉತ್ತಮ ಕಲೆಕ್ಷನ್​ ಮಾಡಿದೆ. ಅಂದಾಜಿನ ಪ್ರಕಾರ, ದೇಶಿಯ ಗಲ್ಲಾಪೆಟ್ಟಿಗೆಯಲ್ಲಿ 35 ಕೋಟಿ ರೂಪಾಯಿ ಗಳಿಸುವುದರೊಂದಿಗೆ 40 ಕೋಟಿ ರೂಪಾಯಿಗಳನ್ನು ಮೀರಿದೆ ಎನ್ನಲಾಗಿದೆ. 2001 ರಲ್ಲಿ ಚಿತ್ರದ ಮೊದಲ ಭಾಗ ಬಿಡುಗಡೆ ಆದಾಗ ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿತ್ತು. ಅಲ್ಲದೇ ಅಮೀರ್ ಖಾನ್ ಅವರ ಆಸ್ಕರ್ ನಾಮ ನಿರ್ದೇಶಿತ 'ಲಗಾನ್' ಚಿತ್ರಕ್ಕೆ ಪೈಪೋಟಿ ಕೊಟ್ಟು ದೊಡ್ಡ ಹೆಸರು ಮಾಡಿತ್ತು.

ಇನ್ನೂ ಅಮಿತ್​ ರೈ ಆ್ಯಕ್ಷನ್​ ಕಟ್​ ಹೇಳಿರುವ 'ಓಎಂಜಿ 2' ಸಿನಿಮಾ ನಿರೀಕ್ಷೆಗಿಂತಲೂ ಕಡಿಮೆ ಕಲೆಕ್ಷನ್​ ಮಾಡಿದೆ. ಮೊದಲ ದಿನ ಕೇವಲ 9 ಕೋಟಿ ರೂಪಾಯಿ ಗಳಿಸಿದೆ. ಬಾಲಿವುಡ್​​ ಕಿಲಾಡಿ ಅಕ್ಷಯ್​ ಕುಮಾರ್​ಗೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಈ ಸಿನಿಮಾಗೆ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಆದರೆ ಬಾಕ್ಸ್​ ಆಫೀಸ್​ನ ರೇಸ್​ನಲ್ಲಿ ಮಾತ್ರ ಹಿನ್ನಡೆ ಕಂಡಿದೆ.

ಇದನ್ನೂ ಓದಿ:ಬಹುನಿರೀಕ್ಷೆಯಿಂದ ತೆರೆ ಕಂಡ 'ಗದರ್ 2': ಸಿನಿ ಪ್ರೇಮಿಗಳಿಂದ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದ ಬ್ಲಾಕ್​ಬಸ್ಟರ್​ ಸೀಕ್ವೆಲ್​

ABOUT THE AUTHOR

...view details