ಕರ್ನಾಟಕ

karnataka

ETV Bharat / entertainment

ಬಾಕ್ಸ್​ ಆಫೀಸ್​ನಲ್ಲಿ Gadar 2 vs OMG 2 ಫೈಟ್​: 7ನೇ ದಿನದ ಕಲೆಕ್ಷನ್​ ಎಷ್ಟು? - ಈಟಿವಿ ಭಾರತ ಕನ್ನಡ

Gadar 2 vs OMG 2- Collection Day 7: ಬಿಡುಗಡೆಯಾದ ಏಳನೇ ದಿನದಂದು ಗದರ್​ 2 ಮತ್ತು ಓಎಂಜಿ 2 ಸಿನಿಮಾಗಳು ಗಳಿಸಿದೆಷ್ಟು?

Gadar 2 vs OMG 2
ಗದರ್​ 2 ಮತ್ತು ಓಎಂಜಿ 2

By

Published : Aug 18, 2023, 5:09 PM IST

ಆಗಸ್ಟ್​ 11ರಂದು ಬಿಡುಗಡೆಯಾದ ಬ್ಲಾಕ್​ಬಸ್ಟರ್​ ಸೀಕ್ವೆಲ್​ಗಳು ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿವೆ. ಸೂಪರ್​ಸ್ಟಾರ್​ ಸನ್ನಿ ಡಿಯೋಲ್​ ಅಭಿನಯದ ಗದರ್​ 2 ಮತ್ತು ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್​ ನಟನೆಯ ಓಎಂಜಿ 2 ಸಿನಿಮಾಗೆ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್​ ಸಿಕ್ಕಿದೆ. ವಾರದ ದಿನಗಳಲ್ಲಿಯೂ ಸಿನಿ ಪ್ರೇಮಿಗಳನ್ನು ಥಿಯೇಟರ್​ಗೆ ಸೆಳೆಯುವಲ್ಲಿ ಈ ಚಿತ್ರಗಳು ಯಶಸ್ವಿಯಾಗಿದೆ.

ಗದರ್ 2 vs ಓಎಂಜಿ 2: ಕಳೆದ ಶುಕ್ರವಾರ ಅಕ್ಷಯ್​​ ಕುಮಾರ್​ ಮತ್ತು ಸನ್ನಿ ಡಿಯೋಲ್​​ ಮುಖ್ಯಭೂಮಿಕೆಯ ಓಎಂಜಿ 2 ಮತ್ತು ಗದರ್​ 2 ಚಿತ್ರಗಳು ತೆರೆಕಂಡಿವೆ. ಇವರೆಡೂ ಕೂಡ ಸೂಪರ್​ ಹಿಟ್​ ಸಿನಿಮಾಗಳ ಸೀಕ್ವೆಲ್ಸ್. ಸನ್ನಿ ಡಿಯೋಲ್​ ಮತ್ತು ಅಮಿಷಾ ಪಟೇಲ್​​ ನಟನೆಯ ಗದರ್​ 2 ಮೇಲೆ ಭಾರಿ ನಿರೀಕ್ಷೆ ಹೊಂದಲಾಗಿತ್ತು. 20 ವರ್ಷಗಳ ಬಳಿಕ ಬಂದ ಸೀಕ್ವೆಲ್‌ಗೆ ವಿಮರ್ಶಕರು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇನ್ನು, ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್​, ಪಂಕಜ್​ ತ್ರಿಪಾಠಿ, ಯಾಮಿ ಗೌತಮ್​ ಸಿನಿಮಾ ಕಥೆಗೂ ವಿಮರ್ಷಕರು, ಪ್ರೇಕ್ಷಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕಲೆಕ್ಷನ್​ ಅಂಕಿ ಅಂಶ ಉತ್ತಮವಾಗಿದೆ.

ಇದನ್ನೂ ಓದಿ:OMG 2 box office collection: ₹50 ಕೋಟಿ ದಾಟಿದ ಬಾಲಿವುಡ್​ ಕಿಲಾಡಿಯ​ 'ಓಎಂಜಿ 2' ಕಲೆಕ್ಷನ್​

ಗದರ್ 2 ಬಾಕ್ಸ್ ಆಫೀಸ್​ ಕಲೆಕ್ಷನ್​: ಅನಿಲ್​ ಶರ್ಮಾ ನಿರ್ದೇಶನದ ಗದರ್​ 2 ಬಾಕ್ಸ್​ ಆಫೀಸ್​ ಕಲೆಕ್ಷನ್​ ಸಂಖ್ಯೆಗೆ ಸಾಟಿ ಮತ್ತೊಂದಿಲ್ಲ. ಸಿನಿ ಇಂಡಸ್ಟ್ರಿ ಟ್ರ್ಯಾಕರ್​ ಸ್ಯಾಕ್ನಿಲ್​ ಪ್ರಕಾರ, ಗದರ್​ 2 ಬಿಡುಗಡೆಯಾದ ಏಳನೇ ದಿನದಂದು 22 ಕೋಟಿ ರೂಪಾಯಿ ಗಳಿಸಿದೆ. ಜೈಲರ್​ಗಿಂತಲೂ ಉತ್ತಮ ಮಟ್ಟದಲ್ಲಿ ಕಲೆಕ್ಷನ್​ ಮಾಡಿದೆ. ಈ ಮೂಲಕ ಗದರ್​ 2ನ ಒಟ್ಟು ದೇಶೀಯ ಗಳಿಕೆ 283.35 ಕೋಟಿ ರೂಪಾಯಿ ತಲುಪಿದೆ. ಶುಕ್ರವಾರವಾದ ಇಂದು ಸರಿಸುಮಾರು 17 ಕೋಟಿ ರೂ. ಗಳಿಸಲಿದೆ ಎನ್ನಲಾಗಿದೆ. ಈ ಮೂಲಕ ಎಂಟನೇ ದಿನ 300 ಕೋಟಿ ರೂಪಾಯಿ ದಾಟುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಓಎಂಜಿ 2 ಕಲೆಕ್ಷನ್​:ಅಕ್ಷಯ್​ ಕುಮಾರ್​ ನಟನೆಯ ಓ ಮೈ ಗಾಡ್​ ಸಿನಿಮಾ ಕೂಡ ಬಹು ನಿರೀಕ್ಷೆಗಳೊಂದಿಗೆ ತೆರೆ ಕಂಡಿತು. ಈ ಸಿನಿಮಾ ತಕ್ಕಮಟ್ಟಿಗೆ ಪ್ರದರ್ಶನ ಕಾಣುತ್ತಿದೆ. ಸಿನಿ ಇಂಡಸ್ಟ್ರಿ ಟ್ರ್ಯಾಕರ್​ ಸ್ಯಾಕ್ನಿಲ್​ ಪ್ರಕಾರ, ಚಿತ್ರವು ಏಳನೇ ದಿನ 5.25 ಕೋಟಿ ಗಳಿಸಿದೆ. ಈ ಮೂಲಕ ಚಿತ್ರವು ಭಾರತದಲ್ಲಿ ಒಟ್ಟು 84.75 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ವಿಶ್ವದಾದ್ಯಂತ ಪ್ರಸ್ತುತ ಗಳಿಕೆಯು 111.8 ಕೋಟಿ ರೂ. ಆಗಿದೆ. ಸಾಗರೋತ್ತರ ಮಾರುಕಟ್ಟೆಯಲ್ಲಿ 18 ಕೋಟಿ ರೂ. ಕಲೆಕ್ಷನ್​ ಮಾಡಿದೆ.

ಇದನ್ನೂ ಓದಿ:Gadar 2: ಹುಬ್ಬೇರಿಸುವಂತಿದೆ ಗದರ್​ 2 ಕಲೆಕ್ಷನ್ -​ ಸೂಪರ್​ಹಿಟ್​ ಸಿನಿಮಾ ವೀಕ್ಷಿಸಿದ ಕಾರ್ತಿಕ್​ ಆರ್ಯನ್​

ABOUT THE AUTHOR

...view details