ಕರ್ನಾಟಕ

karnataka

ETV Bharat / entertainment

ಬಹುನಿರೀಕ್ಷೆಯಿಂದ ತೆರೆ ಕಂಡ 'ಗದರ್ 2': ಸಿನಿ ಪ್ರೇಮಿಗಳಿಂದ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದ ಬ್ಲಾಕ್​ಬಸ್ಟರ್​ ಸೀಕ್ವೆಲ್​

ಬಾಲಿವುಡ್​ ನಟ ಸನ್ನಿ ಡಿಯೋಲ್ ಮತ್ತು ನಟಿ ಅಮಿಷಾ ಪಟೇಲ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಗದರ್ 2' ಚಿತ್ರ ಇಂದು ಬಿಡುಗಡೆಯಾಗಿದೆ.

Gadar 2
'ಗದರ್ 2'

By

Published : Aug 11, 2023, 11:35 AM IST

22 ವರ್ಷಗಳ ಹಿಂದಿನ 'ಗದರ್'​ ಸಿನಿಮಾ ಸೀಕ್ವೆಲ್​ ಇಂದು ಅದ್ದೂರಿಯಾಗಿ ತೆರೆ ಕಂಡಿದೆ. ಬಾಲಿವುಡ್​ ನಟ ಸನ್ನಿ ಡಿಯೋಲ್ ಮತ್ತು ನಟಿ ಅಮಿಷಾ ಪಟೇಲ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದ ಮೇಲೆ ಪ್ರೇಕ್ಷಕರಿಗೆ ಅಪಾರ ನಿರೀಕ್ಷೆಯಿದೆ. 2001ರಲ್ಲಿ ಅನಿಲ್ ಶರ್ಮಾ ಆ್ಯಕ್ಷನ್​ ಕಟ್ ಹೇಳಿರುವ ಈ ಚಿತ್ರವು ರೊಮ್ಯಾಂಟಿಕ್ ಅಂಡ್​ ಆ್ಯಕ್ಷನ್ ಚಿತ್ರವಾಗಿದ್ದು, 'ಗದರ್ 2' ಕೂಡ ಅನಿಲ್ ಶರ್ಮಾ ನಿರ್ದೇಶನದಲ್ಲಿ ಮೂಡಿಬಂದಿದೆ.

2001 ರಲ್ಲಿ ಚಿತ್ರದ ಮೊದಲ ಭಾಗ ಬಿಡುಗಡೆ ಆದಾಗ ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿತ್ತು. ಅಲ್ಲದೇ ಅಮೀರ್ ಖಾನ್ ಅವರ ಆಸ್ಕರ್ ನಾಮ ನಿರ್ದೇಶಿತ 'ಲಗಾನ್' ಚಿತ್ರಕ್ಕೆ ಪೈಪೋಟಿ ಕೊಟ್ಟು ದೊಡ್ಡ ಹೆಸರು ಮಾಡಿತ್ತು. ಇದೀಗ ಗದರ್ 2ನಲ್ಲಿ ಸನ್ನಿ ಡಿಯೋಲ್​ ಅವರನ್ನು ಆ್ಯಕ್ಷನ್​ ಅವತಾರದಲ್ಲಿ ಪರಿಚಯಿಸಲಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್​ಗಳು, ಹಾಡುಗಳು ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿಸಿದೆ. ಮುಂಗಡ ಬುಕ್ಕಿಂಗ್​ಗೂ ಈಗಾಗಲೇ ಉತ್ತಮ ರೆಸ್ಪಾನ್ಸ್​ ಸಿಕ್ಕಿದೆ.

ಇದೀಗ ಥಿಯೇಟರ್​ನಲ್ಲಿ ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ಟ್ವಿಟರ್​ನಲ್ಲಿ ತಮ್ಮ ಅನಿಸಿಕೆ, ಅಭಿಪ್ರಾಯ ಹಂಚಿಕೊಂಡಿದ್ದಾರೆ. 'ಗದರ್ 2'ಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಸನ್ನಿ ಡಿಯೋಲ್​ ಅವರ ಆ್ಯಕ್ಷನ್​ ದೃಶ್ಯಗಳು ಮತ್ತು ಇಡೀ ಸಿನಿಮಾದಲ್ಲಿ ಸಖತ್​ ಮನರಂಜನೆ ನೀಡುತ್ತದೆ ಎಂದು ನೋಡುಗರು ಪ್ರಶಂಸಿಸಿದ್ದಾರೆ. ಚಿತ್ರಕ್ಕೆ ಪ್ರೇಕ್ಷಕರು ಉತ್ಸಾಹದಿಂದ ಪ್ರತಿಕ್ರಿಯಿಸಿದ್ದಾರೆ. ಆದರೂ ಕೆಲವೊಂದು ವಿಮರ್ಶೆಗಳು ಚಿತ್ರದ ಬಗ್ಗೆ ನೆಗೆಟಿವ್​ ಆಗಿಯೂ ಮಾತನಾಡಿವೆ. ಹೀಗಾಗಿ ಸಿನಿಮಾ ಪಾಸಿಟಿವ್​ ಜೊತೆಗೆ ನಕಾರಾತ್ಮಕ ಕಮೆಂಟ್​ಗಳನ್ನು ಪಡೆದುಕೊಂಡಿದೆ.

ಟ್ವಿಟರ್​ನಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆ:'ಗದರ್ 2' ವೀಕ್ಷಿಸಿದ ಪ್ರೇಕ್ಷಕರೊಬ್ಬರು, ಸಿನಿಮಾಗೆ 4.5 ಸ್ಟಾರ್​ ನೀಡುವುದರೊಂದಿಗೆ ಬ್ಲಾಕ್​ಬಸ್ಟರ್​ ಎಂದು ಘೋಷಿಸಿದ್ದಾರೆ. "#ಒನ್​ವರ್ಡ್​ರಿವ್ಯೂವ್​ ಗದರ್​ 2: ಬ್ಲಾಕ್​ಬಸ್ಟರ್​. ರೇಟಿಂಗ್​ 4.5 ಸ್ಟಾರ್​. ಸನ್ನಿಡಿಯೋಲ್​ ಮತ್ತು ಅನಿಲ್​ ಶರ್ಮಾ ಅತ್ಯುತ್ತಮ ನಿರ್ದೇಶನ ಮತ್ತು ಸೀಕ್ವೆಲ್​ನ ಬರವಣಿಗೆ ತುಂಬಾ ಚೆನ್ನಾಗಿದೆ. ನೋಡಲೇಬೇಕು" ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಮತ್ತೊಂದೆಡೆ ಈ ಸಿನಿಮಾದಿಂದ ನಿರಾಶೆಗೊಂಡ ಸಿನಿ ಪ್ರೇಮಿಯೊಬ್ಬರು, ಈ ಸಿನಿಮಾ ಒಂದು ತಮಾಷೆಯಾಗಿದೆ ಎಂದಿದ್ದಾರೆ. "ಇದು 90ರ ದಶಕದ ಸಿನಿಮಾದಂತೆ ಅನುಭವ ನೀಡುತ್ತದೆ. ಈ ಚಲನಚಿತ್ರವು ತಮಾಷೆಯಾಗಿದೆ. ಉತ್ಕರ್ಷ್​ ಶರ್ಮಾ ಅವರನ್ನು ತೋರಿಸುವಲ್ಲಿ ಮತ್ತೊಮ್ಮೆ ವಿಫಲವಾಗಿದೆ. ಸನ್ನಿ ಡಿಯೋಲ್​ ಅವರ ದೃಶ್ಯಗಳು ತುಂಬಾ ಕಡಿಮೆ ಹಾಗೂ ಕೊಂಚ ಭಯಂಕರವಾಗಿದೆ. ಡೈಲಾಲ್​ಗಳು ಚೆನ್ನಾಗಿವೆ" ಎಂದು ಹೇಳಿದ್ದಾರೆ.

ಗದರ್ ಚಿತ್ರಕಥೆ:1947ರ ಭಾರತ ಮತ್ತು ಪಾಕ್​ ವಿಭಜನೆಯ ಸಂದರ್ಭ ಹಾಗೂ ತಾರಾ ಸಿಂಗ್ ಜೀವನವನ್ನು ಆಧರಿಸಿ ಗದರ್​​ 1 ಚಿತ್ರ ಮಾಡಲಾಗಿತ್ತು. 400 ಹುಡುಗಿಯರ ಪೈಕಿ ಓರ್ವ ನಾಯಕಿಯನ್ನು ನಿರ್ದೇಶಕ ಅನಿಲ್ ಶರ್ಮಾ ಆಯ್ಕೆ ಮಾಡಿದ್ದು ಚಿತ್ರದ ವಿಶೇಷತೆಗಳಲ್ಲೊಂದು. ಇನ್ನೂ ಹಿಮಾಚಲ ಪ್ರದೇಶದ ಪರ್ವತಗಳಲ್ಲಿ 'ಗದರ್ 2' ಚಿತ್ರದ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.

ಅನಿಲ್ ಶರ್ಮಾ ನಿರ್ದೇಶನದ ಈ ಚಿತ್ರವನ್ನು ಝೀ ಸ್ಟುಡಿಯೋಸ್ ನಿರ್ಮಾಣ ಮಾಡಿದೆ. ಚಿತ್ರದಲ್ಲಿ ಸನ್ನಿ ಡಿಯೋಲ್, ಅಮೀಷಾ ಪಟೇಲ್ ಮತ್ತು ಉತ್ಕರ್ಷ್ ಶರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದ 'ಜೈಲರ್​': ಮೊದಲ ದಿನವೇ 50 ಕೋಟಿ ರೂ. ಬಾಚಿದ ರಜಿನಿ ಸಿನಿಮಾ

ABOUT THE AUTHOR

...view details