ಕನ್ನಡ ಚಿತ್ರರಂಗದ ಅಲ್ಲದೇ ಇವತ್ತಿಗೂ ಭಾರತೀಯ ಸಿನಿಮಾ ರಂಗದಲ್ಲಿ ಹೆಜ್ಜೆ ಗುರುತುಗಳ ಹೊಂದಿರುವ ಮೇರುನಟ ಡಾ. ರಾಜ್ಕುಮಾರ್. ಕನ್ನಡ ಕುಲಕೋಟಿ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಅಚ್ಚಳಿಯದೆ ಉಳಿದಿರುವ ಡಾ ರಾಜ್ ಕುಮಾರ್ ಅವರ 17ನೇ ಪುಣ್ಯತಿಥಿ.
ಈ ಹಿನ್ನೆಲೆಯಲ್ಲಿ ರಾಜ್ ಕುಮಾರ್ ಕುಟುಂಬದಿಂದ, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್‍ಕುಮಾರ್, ಹೆಣ್ಣು ಮಕ್ಕಳಾದ ಲಕ್ಷ್ಮೀ ಹಾಗೂ ಪೂರ್ಣಿಮಾ ಸೇರಿದಂತೆ ಇಡೀ ರಾಜ್ ಕುಮಾರ್ ಕುಟುಂಬ ಅಣ್ಣಾವ್ರ 17ನೇ ಪುಣ್ಯತಿಥಿ ಕಾರ್ಯ ನಡೆಸಿದರು. ಇನ್ನು ಅಣ್ಣಾವ್ರಿಗೆ ತುಂಬಾ ಇಷ್ಟವಾದ ಮುದ್ದೆ, ನಾಟಿ ಕೋಟಿ ಸಾಂಬರ್ ಹಾಗೂ ಚಿಕನ್ ಬಿರಿಯಾನಿ, ಹಲವು ಸಿಹಿ ತಿಂಡಿಸುಗಳನ್ನ ಇಡುವ ಮೂಲಕ ಶಿವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್, ರಾಘವೇಂದ್ರ ರಾಜ್ ಕುಮಾರ್ ಪತ್ನಿ, ಮಂಗಳ, ಅಶ್ವಿನಿ ಪುನೀತ್ ರಾಜ್‍ಕುಮಾರ್, ಹೆಣ್ಣು ಮಕ್ಕಳಾದ ಲಕ್ಷ್ಮೀ ಹಾಗೂ ಪೂರ್ಣಿಮಾ ಸೇರಿದಂತೆ ಇಡೀ ಕುಟುಂಬದ ವರನಟ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಇದರ ಜೊತೆಗೆ ಪಾರ್ವತಮ್ಮ ರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್ ಸಮಾಧಿ ಕುಟುಂಬ ವರ್ಗ ಪೂಜೆ ಸಲ್ಲಿಸಿದರು.
ಕನ್ನಡದ ಮೇರು ನಟ: ಇನ್ನು ಭಾರತೀಯ ಚಿತ್ರರಂಗದಲ್ಲಿ ಡಾ. ರಾಜ್ಕುಮಾರ್ ಅತಂಹ ಮತ್ತೋರ್ವ ನಟ ಇರಲು ಸಾಧ್ಯವಿಲ್ಲ. ಯಾಕೆಂದರೆ ಅಷ್ಟರಮಟ್ಟಿಗೆ ತಮ್ಮದೇ ಆದಂತಹ ಛಾಪು ಮೂಡಿಸಿದವರು ಅಣ್ಣಾವ್ರು. ಸಿನಿಮಾಗಳ ಆಯ್ಕೆ ಮತ್ತು ಪಾತ್ರ ಪೋಷಣೆ ಇರಲಿ ಅವರಿಗೆ ಸರಿಸಾಟಿ ಯಾರೂ ಇಲ್ಲ. ಸಿನಿಮಾ ಜರ್ನಿಯ ಆರಂಭದಿಂದ ಕೊನೆಯವರೆಗೂ ಬಹುಬೇಡಿಕೆ ನಟನಾಗಿಯೇ ಡಾ ರಾಜ್ ಕುಮಾರ್ ಅವರು ತಮ್ಮ ಚಾರ್ಮ್ ಉಳಿಸಿಕೊಂಡಿದ್ದರು. 1954ರಲ್ಲಿ ಬಂದ ಬೇಡರ ಕಣ್ಣಪ್ಪ ಸಿನಿಮಾದಿಂದ 2000ನೇ ಇಸವಿಯಲ್ಲಿ ತೆರೆಕಂಡ ಶಬ್ದವೇಧಿ ಚಿತ್ರದವರೆಗೆ ನೂರಾರು ಬಗೆಯ ಪಾತ್ರಗಳಲ್ಲಿ ಅವರ ಅಭಿನಯವನ್ನು ನೋಡುವುದೇ ಚೆಂದ. ಕನ್ನಡ ಎಂದರೆ ಡಾ. ರಾಜ್ಕುಮಾರ್, ಡಾ. ರಾಜ್ಕುಮಾರ್ ಎಂದರೆ ಕನ್ನಡ ಎಂಬಷ್ಟರ ಮಟ್ಟಿಗೆ ಸ್ಪಷ್ಟವಾಗಿ ಮಾತೃಭಾಷೆ ಮಾತನಾಡುತ್ತಿದ್ದ ಅವರು ಎಲ್ಲರಿಗೂ ಮಾದರಿ.