ಕನ್ನಡದ ಜನಪ್ರಿಯ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್'ನಲ್ಲಿ ಸ್ಯಾಂಡಲ್ವುಡ್ ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್ ಭಾಗಿಯಾಗಿ ತಮ್ಮ ಜೀವನದ ಪಯಣವನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟರು. ಹೌದು, ನಾಲ್ಕನೇ ಅತಿಥಿಯಾಗಿ ಕನ್ನಡ ಚಿತ್ರರಂಗದ ಬಹುಬೇಡಿಕೆ ನಟ ಡಾಲಿ ಧನಂಜಯ್ ಆಗಮಿಸಿ ತಮ್ಮ ಸಾಧನೆಯ ಕಥೆಯನ್ನು ವಿವರಿಸಿದರು. ಬಾಲ್ಯ, ಶಿಕ್ಷಣ, ಕುಟುಂಬ, ಸಿನಿ ಪಯಣ ಹೀಗೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದು, ಕಾರ್ಯಕ್ರಮ ಜನರ ಮೆಚ್ಚುಗೆ ಸಂಪಾದಿಸಿದೆ. ಜೊತೆಗೆ ಹಲವು ವಿಚಾರಗಳ ಹಿನ್ನೆಲೆ ಭಾವುಕರಾಗಿದ್ದಾರೆ.
'ವೀಕೆಂಡ್ ವಿತ್ ರಮೇಶ್' ಸೀಸನ್ 5ರ ಐದನೇ ಅತಿಥಿಯಾಗಿ ಕನ್ನಡ ಚಿತ್ರರಂಗದ ಬಹುಬೇಡಿಕೆ ನಟ ಡಾಲಿ ಧನಂಜಯ್ ಆಗಮಿಸಿದ್ದು, ಅವರ ಹುಟ್ಟಿನ ಬಗ್ಗೆ ಮಹತ್ವಹರ ಸಂಗತಿಯೊಂದು ಬೆಳಕಿಗೆ ಬಂದಿದೆ. ತಮ್ಮಗೆ ಜೀವನ ಕೊಟ್ಟ 'ಎರಡನೇ ತಾಯಿ'ಯನ್ನು ಮೊದಲ ಬಾರಿ ಇದೇ ಕಾರ್ಯಕ್ರಮದಲ್ಲಿ ಭೇಟಿ ಆದರು. ಈ ಶೋ ಮೂಲಕ ಕೋಟ್ಯಂತರ ಕನ್ನಡಿಗರ ಎದುರು ತಮ್ಮ 'ಎರಡನೇ ತಾಯಿಗೆ ಧನ್ಯವಾದ ಅರ್ಪಿಸಿದರು.
ಧನಂಜಯ್ ಅವರ ಪೋಷಕರಿಗೆ ಒಟ್ಟು ನಾಲ್ಕು ಮಕ್ಕಳು. ಧನಂಜಯ್ಗೂ ಮೊದಲು ಇಬ್ಬರು ಹೆಣ್ಣು ಮಕ್ಕಳು, ಮೂರನೇದ್ದು ಮಗು ಗಂಡು. ಬಳಿಕ ಅವರ ತಾಯಿ ಗರ್ಭ ಧರಿಸಿದಾಗ, ಗರ್ಭಪಾತ ಮಾಡಿಸಲು ಮುಂದಾಗಿದ್ದರು. ಈಗಾಗಲೇ ಮೂರು ಮಕ್ಕಳಿದ್ದಾರೆ. ಹೆಚ್ಚು ಮಕ್ಕಳಾದರೆ ಅವರಿಗೆ ಬೇಕಾದ ಸೌಲಭ್ಯ ತಲುಪಿಸಲು ಕಷ್ಟವಾಗಲಿದೆ ಎಂದು ಈ ನಿರ್ಧಾರ ಕೈಗೊಂಡಿದ್ದರು. ಆಸ್ಪತ್ರೆಗೆ ತೆರಳಿದಾಗ ವೈದ್ಯೆ ಮಣಿಕರ್ಣಿಕಾ ಎಂಬುವವರು ಧನಂಜಯ್ ಅವರ ಪೋಷಕರಿಗೆ, ಮಗು ಜನಿಸಲು ಬುದ್ಧಿ ಹೇಳಿ ಕಳುಹಿಸಿದರು. ವೈದ್ಯರ ಮಾತಿನಿಂದ ಪ್ರಭಾವಿತರಾಗಿ ಗರ್ಭಪಾತ ಮಾಡಿಸುವ ಯೋಚನೆ ಕೈಬಿಟ್ಟು, ಮಗು ಮಾಡಿಕೊಳ್ಳಲು ಮುಂದಾದರು. ನಾಲ್ಕನೇ ಮಗುವಾಗಿ ಧನಂಜಯ್ ಜನಿಸಿದರು. ತಾಯಿಯ ಹೆರಿಗೆ ಮಾಡಿಸಿದ್ದು ಕೂಡ ಅದೇ ವೈದ್ಯರು.