ಕರ್ನಾಟಕ

karnataka

ETV Bharat / entertainment

ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ಪ್ರಕರಣ: ಆರೋಪಿಗಳ ವಿರುದ್ಧ ಎಫ್ಐಆರ್​ - Rashmika Mandanna ai video

Rashmika Mandanna's deepfake video case: ನಟಿ ರಶ್ಮಿಕಾ ಮಂದಣ್ಣ ನಕಲಿ ವೈರಲ್​ ವಿಡಿಯೋಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

Rashmika Mandanna's deepfake video
ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ಪ್ರಕರಣ

By ETV Bharat Karnataka Team

Published : Nov 11, 2023, 10:30 AM IST

Updated : Nov 11, 2023, 10:46 AM IST

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋ ಪ್ರಕರಣ ದಿನೇ ದಿನೇ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಭವಿಷ್ಯವನ್ನು ರಕ್ಷಿಸಲು ಮುಂದಾಗಿದೆ. ಚಿತ್ರರಂಗದ ಗಣ್ಯರು ಈ ಬಗ್ಗೆ ಪ್ರತಿಕ್ರಿಯಿಸಿ, ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದರು. ನಟಿ ಕೂಡ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದು, ಸರ್ಕಾರ ಕೂಡ ಸೂಕ್ತ ಕ್ರಮದ ಭರವಸೆ ನೀಡಿತ್ತು.

ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್: ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ಎಐ ಜನರೇಟೆಡ್​​ ವೈರಲ್ ವಿಡಿಯೋ ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸರು ಪ್ರಾರಂಭಿಸಿದ್ದು, ಶುಕ್ರವಾರ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೆಹಲಿ ಸ್ಪೆಷಲ್​ ಸೆಲ್​​ ಪೊಲೀಸ್​ ಸ್ಟೇಷನ್​ನಲ್ಲಿ ಐಪಿಸಿ ಸೆಕ್ಷನ್ಸ್ 465 (ಫೋರ್ಜರಿಗೆ ಶಿಕ್ಷೆ), 469 (ಪ್ರತಿಷ್ಠೆಗೆ ಹಾನಿ ಮಾಡುವ ಉದ್ದೇಶದಿಂದ ನಕಲಿ ರಚನೆ), ಐಟಿ ಕಾಯ್ದೆಯ ಸೆಕ್ಷನ್ 66ಸಿ ಮತ್ತು 66ಇ ಅಡಿಯಲ್ಲಿ ಐಐಆರ್​​ ದಾಖಲಿಸಲಾಗಿದೆ.

ದೆಹಲಿ ಮಹಿಳಾ ಆಯೋಗ ಕ್ರಮ:ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯೂ) ನಕಲಿ ವಿಡಿಯೋ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೆಲವೇ ಗಂಟೆಗಳ ನಂತರ ಎಫ್‌ಐಆರ್ ದಾಖಲಾಗಿದೆ. ಜೊತೆಗೆ ತನಿಖೆ ನಡೆಸುವಂತೆ, ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸರಿಗೆ ನೋಟಿಸ್ ಕೂಡ ಕಳುಹಿಸಿದೆ. ನಟಿಯ ಚಿತ್ರವನ್ನು ಯಾರೋ ಅಕ್ರಮವಾಗಿ ಮಾರ್ಫಿಂಗ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎಂದು ದೆಹಲಿ ಮಹಿಳಾ ಆಯೋಗ ತನ್ನ ಹೇಳಿಕೆಯಲ್ಲಿ ಕಳವಳ ವ್ಯಕ್ತಪಡಿಸಿದೆ.

ಇದನ್ನೂ ಓದಿ:ವಿಜಯ್​ ದೇವರಕೊಂಡ ಮಾತು 'ಸಂಪೂರ್ಣವಾಗಿ ಒಪ್ಪಿದೆ' ಎಂದ ರಶ್ಮಿಕಾ ಮಂದಣ್ಣ

ಇದೊಂದು ಗಂಭೀರ ವಿಷಯ. ಆದರೆ ಡೀಪ್‌ಫೇಕ್ ವಿಡಿಯೋ ಪ್ರಕರಣದಲ್ಲಿ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಡಿಸಿಡಬ್ಲ್ಯೂ ತಿಳಿಸಿದೆ. ಆಯೋಗವು, ಎಫ್‌ಐಆರ್‌ನ ಪ್ರತಿ ಮತ್ತು ಕೈಗೊಂಡಿರುವ ಕ್ರಮಗಳ ವರದಿಯನ್ನು ನವೆಂಬರ್ 17 ರೊಳಗೆ ನೀಡುವಂತೆ ದೆಹಲಿ ಪೊಲೀಸರಿಗೆ ಸೂಚಿಸಿದೆ. ಡೀಪ್‌ಫೇಕ್ ವಿಡಿಯೋ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಹರಡಿದ ವ್ಯಕ್ತಿಗಳ ವಿವರಗಳನ್ನೂ ಸಹ ಆಯೋಗ ಕೇಳಿದೆ. ದೆಹಲಿ ಸ್ಪೆಷಲ್​ ಸೆಲ್​​ ಪೊಲೀಸ್​ನ ಇಂಟೆಲಿಜೆನ್ಸ್ ಯೂನಿಟ್ ಮತ್ತು ಸ್ಟ್ರ್ಯಾಟಜಿಕ್ ಆಪರೇಷನ್ಸ್​​ ಯೂನಿಟ್​​​ ಈ ಪ್ರಕರಣವನ್ನು ಪರಿಶೀಲಿಸುತ್ತಿದೆ ಮತ್ತು ತನಿಖೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ.

ಇದನ್ನೂ ಓದಿ:ಡೀಪ್​​ಫೇಕ್ ಕಂಟೆಂಟ್​ ವಿರುದ್ಧ ಕ್ರಮ: ​ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ರಶ್ಮಿಕಾ ಮಂದಣ್ಣ

ಕಳೆದ ತಿಂಗಳು ಅಕ್ಟೋಬರ್​ 8 ರಂದು ಆಂಗ್ಲೋ ಇಂಡಿಯನ್​ ಯುವತಿ ಝರಾ ಪಟೇಲ್​ ಎಂಬುವವರು ವಿಡಿಯೋವೊಂದನ್ನು ಶೇರ್ ಮಾಡಿದ್ದರು. ಈ ದೃಶ್ಯಕ್ಕೆ ಎಐ ತಂತ್ರಜ್ಞಾನ ಬಳಸಿ ರಶ್ಮಿಕಾ ಮಂದಣ್ಣರಂತೆ ಕಾಣುವ ಹಾಗೆ ಮಾಡಿ ಸಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ವೈರಲ್​​ ಮಾಡಿದ್ರು. ನಕಲಿ ದೃಶ್ಯ ವೈರಲ್​ ಆಗಿ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿತ್ತು. ಫ್ಯಾಕ್ಟ್​ ಚೆಕ್​ ಬಳಿಕ ಇದು ನಕಲಿ ಎಂಬುದು ಸಾಬೀತಾಗಿತ್ತು. ಝರಾ ಪಟೇಲ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದರು. ರಶ್ಮಿಕಾ, ಅಮಿತಾಭ್​ ಬಚ್ಚನ್​​, ವಿಜಯ್​ ದೇವರಕೊಂಡ ಸೇರಿದಂತೆ ಹಲವರು ಪ್ರತಿಕ್ರಿಯಿಸಿದ್ದು, ಕಳೆದ ಕೆಲ ದಿನಗಳಿಂದ ಈ ವಿಷಯ ವ್ಯಾಪಕ ಚರ್ಚೆಗೊಳಗಾಗಿದೆ.

Last Updated : Nov 11, 2023, 10:46 AM IST

ABOUT THE AUTHOR

...view details