ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅದ್ಭುತ ಫ್ಯಾಷನ್ ಸೆನ್ಸ್ಗೆ ಹೆಸರುವಾಸಿಯಾಗಿದ್ದಾರೆ. ಒಳ್ಳೆ ಹೈಟ್ ಇರುವ ನಟಿ ತೊಡುವ ಬಟ್ಟೆಗಳು ಸಿಂಪ್ಲೀ ಅಟ್ರ್ಯಾಕ್ಟೀವ್. ಫ್ಯಾಶನ್ ವಿಷಯಕ್ಕೆ ಬಂದಾಗ ಅನೇಕರು ನಟಿಯನ್ನು ಫಾಲೋ ಮಾಡುತ್ತಾರೆ. ಆದ್ರೆ ಇತ್ತೀಚಿನ ವಿಡಿಯೋದಲ್ಲಿ ಪಠಾಣ್ ನಟಿ ಧರಿಸಿದ್ದ ಬಟ್ಟೆ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ. ಎರಡು ದಿನಗಳ ಹಿಂದೆ ನಟಿ ಸೋನಾಕ್ಷಿ ಸಿನ್ಹಾ ಧರಿಸಿದ್ದ ಮಾದರಿಯ ಉಡುಪನ್ನು ದೀಪಿಕಾ ಪಡುಕೋಣೆ ಧರಿಸಿದ್ದಾರೆಂದು ಕೆಲ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಇತ್ತೀಚೆಗೆ ಪಾಪರಾಜಿಯೋರ್ವರು ತಮ್ಮ ಖಾತೆಯಿಂದ ಪಠಾಣ್ ನಟಿ ದೀಪಿಕಾ ಪಡುಕೋಣೆ ಅವರ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಪಾಪರಾಜಿ ಹಂಚಿಕೊಂಡ ವಿಡಿಯೋದಲ್ಲಿ, ನಟಿ ದೀಪಿಕಾ ಪಡುಕೋಣೆ ಪ್ರಿಂಟೆಡ್ ಆರೆಂಜ್ ಬ್ಲ್ಯೂ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ಲಾಝೋ ಪ್ಯಾಂಟ್‌ಗೆ ಉದ್ದವಾದ, ಓವರ್ ಸೈಜ್ ಶರ್ಟ್ ಅನ್ನು ಧರಿಸಿದ್ದರು. ಅದಕ್ಕೆ ಮ್ಯಾಚ್ ಆಗುವ ಸ್ಟೈಲಿಶ್ ಬ್ಯಾಗ್ ಅನ್ನು ಹಿಡಿದಿದ್ದರು. ಕೂದಲನ್ನು ಅಚ್ಚುಕಟ್ಟಾಗಿ ಬನ್ ಶೈಲಿಯಲ್ಲಿ ಕಟ್ಟಿದ್ದರು. ತಮ್ಮ ನೋಟವನ್ನು ಪೂರ್ಣಗೊಳಿಸಲು ಲೈಟ್ ಮೇಕ್ಅಪ್ ಹಾಕಿದ್ದರು. ವರದಿಗಳ ಪ್ರಕಾರ, ದೀಪಿಕಾ ಅವರ ಈ ವಿಶಿಷ್ಟ ವೇಷಭೂಷಣವನ್ನು ಸಿಲ್ ಸಿಲಾ ವಿನ್ಯಾಸಗೊಳಿಸಿದೆ.
ನಟಿ ದೀಪಿಕಾ ಪಡುಕೋಣೆ ನೋಟಕ್ಕೆ ಪ್ರತಿಕ್ರಿಯಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರೋರ್ವರು "ಅವರ ಉಡುಗೆ ಇಷ್ಟವಾಯಿತು" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಸೋಷಿಯಲ್ ಮೀಡಿಯಾ ಬಳಕೆದಾರರು ಪ್ರತಿಕ್ರಿಯಿಸಿ, "ಅತ್ಯಂತ ಸುಂದರ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಈ ಪ್ರಿಂಟೆಡ್ ಡ್ರೆಸ್ ಈ ದಿನಗಳಲ್ಲಿ ಟ್ರೆಂಡಿಂಗ್‌ನಲ್ಲಿವೆ" ಎಂದು ಕಾಮೆಂಟ್ ಮಾಡಿದ್ದಾರೆ. ಅಭಿಮಾನಿಯೊಬ್ಬರು "ಬಹಳ ಸುಂದರ" ಎಂದು ಬರೆದಿದ್ದರೆ, ಇನ್ನೋರ್ವರು "ಬೆಸ್ಟ್ ಔಟ್ಫಿಟ್" ಎಂದು ಬರೆದಿದ್ದಾರೆ. ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ರೆಡ್ ಹಾರ್ಟ್ ಎಮೋಜಿಗಳೊಂದಿಗೆ ಕಾಮೆಂಟ್ ವಿಭಾಗದಲ್ಲಿ ಬ್ಯುಸಿಯಾದರು.