ಚಿತ್ರರಂಗದ ತಾರೆಯರು ಪ್ರಯಾಣ ಬೆಳೆಸುವ ಸಂದರ್ಭ ವಿಮಾನ ನಿಲ್ದಾಣಗಳಲ್ಲಿ ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾಗುತ್ತಿರುತ್ತಾರೆ. ಅವರ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಅಭಿಮಾನಿಗಳ ಕಣ್ಮನ ಸೆಳೆಯುತ್ತವೆ. ವಿಮಾನ ಪ್ರಯಾಣದ ಸಂದರ್ಭಕ್ಕೆಂದೇ ಹೇಳಿ ಮಾಡಿಸುವ ಆಕರ್ಷಕ ಉಡುಗೆಗಳನ್ನು ತೊಡುವ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಾರೆ. ಈ ಪೈಕಿ ಬಾಲಿವುಡ್ ಬಹುಬೇಡಿಕೆಯ ನಟಿ ದೀಪಿಕಾ ಪಡುಕೋಣೆ ವೈಯ್ಯಾರ ತುಸು ಹೆಚ್ಚೇ. ಫ್ಯಾಶನ್ ಲೋಕದ ರಾಣಿ ಇವರು. ಇದೀಗ ಇಬ್ಬರು ಬಾಲಿವುಡ್ ನಟಿಮಣಿಯರ ನೋಟ ಅಭಿಮಾನಿಗಳ ದಿಲ್ ಗೆದ್ದಿದೆ.
ದೀಪಿಕಾ ಪಡುಕೋಣೆ ಏರ್ಪೋರ್ಟ್ ಲುಕ್:ಬಹುನಿರೀಕ್ಷಿತ ಪ್ರಾಜೆಕ್ಟ್ನಲ್ಲಿ ಫ್ಯಾಶನ್ ಐಕಾನ್ ದೀಪಿಕಾ ಪಡುಕೋಣೆ ಕೆಲಸ ಮಾಡುತ್ತಿದ್ದು, ಇಂದು ಮುಂಜಾನೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಎಂದಿನಂತೆ ಕ್ಯಾಶುವಲ್, ಕಂಫರ್ಟೆಬಲ್ ಪ್ಲಸ್ ಸ್ಟೈಲಿಶ್ ಡ್ರೆಸ್ ಧರಿಸಿದ್ದರು. ಏರ್ಪೋರ್ಟ್ ಲುಕ್ಗಾಗಿ ವೈಟ್ ಟಾಪ್, ಬ್ಲ್ಯೂ ಜೀನ್ಸ್ ಆರಿಸಿಕೊಂಡಿದ್ದರು.
ಪಠಾಣ್ ಸಿನಿಮಾ ನಟಿ ಏರ್ಪೋರ್ಟ್ ಲುಕ್ಗೆ ಹೆಸರುವಾಸಿ. ಪ್ರತಿ ಬಾರಿ ಡಿಫ್ರೆಂಟ್ ಸ್ಟೈಲ್ನ ಡ್ರೆಸ್ ಧರಿಸಿ ಅಭಿಮಾನಿಗಳ ಗಮನ ಸೆಳೆಯುತ್ತಾರೆ. ನಟಿಯ ಡ್ರೆಸ್ಸಿಂಗ್ ಸ್ಟೈಲನ್ನು ಹಲವರು ಫಾಲೋ ಮಾಡುತ್ತಾರೆ. ರಣ್ವೀರ್ ಸಿಂಗ್ ಪತ್ನಿಯಾದ ಇವರು ಟರ್ಮಿನಲ್ ಪ್ರವೇಶಿಸುತ್ತಿದ್ದಂತೆ, ಪಾಪರಾಜಿಗಳನ್ನು ಕಂಡು ಮುಗುಳ್ನಗೆ ಬೀರಿ, ಅವರತ್ತ ಕೈಬೀಸಿ ಮುನ್ನಡೆದರು. ದೀಪಿಕಾ ಪಡುಕೋಣೆ ಏರ್ಪೋರ್ಟ್ ವಿಡಿಯೋವನ್ನು ಪಾಪರಾಜಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿವೆ. ಮೆಚ್ಚಿನ ನಟಿಗೆ ಅಭಿಮಾನಿಗಳು ಪ್ರೀತಿಯ ಧಾರೆಯೆರೆದಿದ್ದಾರೆ.
ಕತ್ರಿನಾ ಕೈಫ್ಏರ್ಪೋರ್ಟ್ ಲುಕ್: ಮತ್ತೊಂದು ವಿಡಿಯೋದಲ್ಲಿ, ಕತ್ರಿನಾ ಕೈಫ್ ಪ್ರವಾಸದಿಂದ ಹಿಂದಿರುಗಿರುವುದನ್ನು ಕಾಣಬಹುದು. ನಟಿಯನ್ನು ಮುಂಬೈ ವಿಮಾನ ನಿಲ್ದಾಣದ ಹೊರಗೆ ಪಾಪರಾಜಿಗಳು ಗುರುತಿಸಿದ್ದಾರೆ. ಕಂಪ್ಲೀಟ್ ಬ್ಲ್ಯಾಕ್ ಡ್ರೆಸ್ನಲ್ಲಿ ಕಂಗೊಳಿಸಿದ್ದು, ಕ್ಯಾಶುವಲ್ ನೋಟಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. ಟೈಗರ್ ಸಿನಿಮಾ ನಟಿ ಹೆಚ್ಚಾಗಿ ಸ್ಟೈಲಿಶ್ ನೋಟಕ್ಕಿಂತ ಆರಾಮದಾಯಕ ಉಡುಪಿಗೆ ಆದ್ಯತೆ ನೀಡುತ್ತಾರೆ. ಇದು ಅವರ ಅಭಿಮಾನಿಗಳ ಮೆಚ್ಚುಗೆ ಗಳಿಸುತ್ತವೆ.