ಕರ್ನಾಟಕ

karnataka

ರಾಜ್ಯಾದ್ಯಂತ 'ಕಾಟೇರ' ಅಬ್ಬರ; ಚಾಲೆಂಜಿಂಗ್​ ಸ್ಟಾರ್​ ಅಭಿಮಾನಿಗಳ ಸಂಭ್ರಮ

By ETV Bharat Karnataka Team

Published : Dec 29, 2023, 11:59 AM IST

Kaatera release: ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ಕಾಟೇರ ಚಿತ್ರ ಇಂದು ತೆರೆಗಪ್ಪಳಿಸಿದೆ.

Darshan Thoogudeepa starrer Kaatera release
ದರ್ಶನ್ ಅಭಿನಯದ ಕಾಟೇರ ಬಿಡುಗಡೆ

ದರ್ಶನ್​ ಅಭಿಮಾನಿಗಳ ಸಂಭ್ರಮ

ಕೊನೆಗೂ ಅಭಿಮಾನಿಗಳ ಕಾಯುವಿಕೆಗೆ ಫುಲ್​ ಸ್ಟಾಪ್​​​ ಬಿದ್ದಿದೆ. ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ತೂಗುದೀಪ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಸಿನಿಮಾ 'ಕಾಟೇರ' ರಾಜ್ಯಾದ್ಯಂತ ಬಿಡುಗಡೆ ಆಗಿ ಉತ್ತಮ ಪ್ರತಿಕ್ರಿಯೆಗೆ ಪಾತ್ರವಾಗಿದೆ. ಬಿಗ್​ ಸ್ಕ್ರೀನ್​​ನಲ್ಲಿ 'ದರ್ಶನ್' ದರ್ಶನ ಆಗಿದ್ದು, ಮೆಚ್ಚಿನ ನಟನನ್ನು​ ಕಣ್ತುಂಬಿಕೊಂಡ ಅಭಿಮಾನಿಗಳು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.

ರಾಜ್ಯಾದ್ಯಂತ ದರ್ಶನ್ ಅಭಿನಯದ ಕಾಟೇರ ಅಬ್ಬರಿಸುತ್ತಿದೆ. ನಿನ್ನೆ ಮಧ್ಯರಾತ್ರಿಯಿಂದಲೇ ಕಾಟೇರ ಸಿನಿಮಾದ ಸ್ಪೆಷಲ್ ಶೋ ನಡೆದಿದೆ. ಸುಮಾರು 21 ಥಿಯೇಟರ್​ಗಳಲ್ಲಿ ಮಿಡ್ ನೈಟ್ ಶೋ ಆಯೋಜಿಸಲಾಗಿತ್ತು. ಸಿನಿಮಾ ಎಲ್ಲೆಡೆ ಅತ್ಯುತ್ತಮ ಓಪನಿಂಗ್ ಪಡೆದುಕೊಂಡಿದೆ. ಅಲ್ಲದೇ ಮುಂಜಾನೆ 3, 4, 5 ಮತ್ತು 6 ಗಂಟೆಗೆ ಸುಮಾರು 220 ಕಡೆಗಳಲ್ಲಿ ಫ್ಯಾನ್ ಶೋಗಳು ಕೂಡ ಇದ್ದವು.

ಅಭಿಮಾನಿಗಳಿಗೆ 'ಕಾಟೇರ' ಮನರಂಜನೆಯ ರಸದೌತಣ ಉಣಬಡಿಸಿದೆ. ಒಂದೊಳ್ಳೆ ಸಂದೇಶದ ಜೊತೆಗೆ ಕಮರ್ಷಿಯಲ್ ಆಗಿಯೂ ಇದೆ ಅಂತಾರೆ ಪ್ರೇಕ್ಷಕರು. ಹಲವೆಡೆ ಚಿತ್ರತಂಡ ವೀಕ್ಷಕರೊಟ್ಟಿಗೆ ಸಮಯ ಕಳೆದಿದೆ. ರಾಜ್ಯಾದ್ಯಂತ ಸುಮಾರು 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ದರ್ಶನ್​​ ಸಿನಿಮಾ ಬಿಡುಗಡೆ ಆಗಿದೆ. ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್ ಸೇರಿದಂತೆ ಬರೋಬ್ಬರಿ 1,500 ಹೆಚ್ಚು ಶೋಗಳು ಪ್ರದರ್ಶನವಾಗುತ್ತಿದೆ.

ತರುಣ್​ ಸುಧೀರ್​ ಆ್ಯಕ್ಷನ್​ ಕಟ್​ ಹೇಳಿರುವ ಕಾಟೇರ ಚಿತ್ರದಲ್ಲಿ ಹಿರಿಯ ನಟಿ ಮಾಲಾಶ್ರೀ ಪುತ್ರಿ ಆರಾಧನಾ ಕಾಣಿಸಿಕೊಂಡಿದ್ದಾರೆ. ತರುಣ್​ ಸುಧೀರ್ ಈ ಹಿಂದೆ ದರ್ಶನ್ ಜೊತೆ ರಾಬರ್ಟ್ ಸಿನಿಮಾ ಮಾಡಿದ್ದರು. ಈ ಸಿನಿಮಾ ಆರಾಧನಾ ಅವರಿಗೆ ಉತ್ತಮ ಭವಿಷ್ಯ ರೂಪಿಸಿಕೊಡಲಿದೆ ಅನ್ನೋದು ಹಲವರ ವಿಶ್ವಾಸ. ದರ್ಶನ್​, ಆರಾಧನಾ ಜೊತೆಗೆ ವೈಜನಾಥ್ ಬಿರಾದಾರ, ಜಗಪತಿ ಬಾಬು, ವಿನೋದ್ ಆಳ್ವಾ, ಕುಮಾರ್ ಗೋವಿಂದ್, ಹಿರಿಯ ನಟಿ ಶ್ರುತಿ ಸೇರಿದಂತೆ ಹಲವರು ನಟಿಸಿದ್ದಾರೆ. ಸುಧಾಕರ್ ಅವರ ಛಾಯಾಗ್ರಹಣ, ಮಾಸ್ತಿ ಅವರ ಸಂಭಾಷಣೆ ಚಿತ್ರಕ್ಕಿದ್ದು, ಜಡೇಶ್ ಕಥೆ ಬರೆದಿದ್ದಾರೆ. ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ:'ಸಲಾರ್'​​ ಕಲೆಕ್ಷನ್​​: ಭಾರತದಲ್ಲೇ 300 ಕೋಟಿ ದಾಟಿದ ಪ್ರಭಾಸ್ ಸಿನಿಮಾ!

ಬಹುತೇಕ ಚಿತ್ರಮಂದಿರಗಳು ಡಿ ಬಾಸ್ ಫ್ಯಾನ್ಸ್​ಗಳಿಂದ ತುಂಬಿ ತುಳುಕುತ್ತಿದೆ. ಮೆಚ್ಚಿನ ನಟನ ಸಿನಿಮಾವನ್ನು ಅಪಾರ ಸಂಖ್ಯೆಯ ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಥಿಯೇಟರ್​ ಬಳಿಯ ಸೆಲೆಬ್ರೇಶನ್​ ವಿಡಿಯೋ ಹಂಚಿಕೊಳ್ಳುತ್ತಿರುವ ಅಭಿಮಾನಿಗಳು ಸಿನಿಮಾ ಬ್ಲಾಕ್​ಬಸ್ಟರ್ ಹಿಟ್​ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ನೆಟ್ಟಿಗರಿಂದ ಬಹುತೇಕ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ.

ಇದನ್ನೂ ಓದಿ:300 ಕೋಟಿ ಸಂಪಾದಿಸಿದ ಶಾರುಖ್ ಅಭಿನಯದ 'ಡಂಕಿ'

ABOUT THE AUTHOR

...view details