ಬಾಲಿವುಡ್ ನಟಿ ಡೈಸಿ ಶಾ ಯಾವಾಗಲೂ ನೃತ್ಯದ ಬಗ್ಗೆ ಹೆಚ್ಚು ಒಲವು ಹೊಂದಿದವರು. ಜೈ ಹೋ ಮತ್ತು ಹೇಟ್ ಸ್ಟೋರಿ 3 ಸಿನೆಮಾಗಳಿಂದ ಖ್ಯಾತಿ ಪಡೆದ ನಟಿ, ಇದೀಗ ದಗಾಡಿ ಚಾಲ್ 2 ಸಿನೆಮಾದ ರಘು ಪಿಂಜ್ರಿಯಾತ್ ಅಲಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಹಾಡಿನ ಚಿತ್ರೀಕರಣ ನನಗೆ ತುಂಬಾ ಖುಷಿ ತಂದಿದೆ ಎಂದು ಡೈಸಿ ಶಾ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ನನಗೆ ನೃತ್ಯ ಎಂದರೆ ತುಂಬಾ ಇಷ್ಟ. ಈ ಹಾಡಿಗೆ ನೃತ್ಯ ಮಾಡಿರುವುದು ಒಂದು ವಿಭಿನ್ನ ಅನುಭವ. ಈ ಹಾಡಿಗೆ ಹೆಚ್ಚಿನ ಎನರ್ಜಿ ಬೇಕಿತ್ತು. ಹಾಡಿನ ಚಿತ್ರೀಕರಣವನ್ನು ಆನಂದಿಸಿದ್ದಾಗಿ ಹೇಳಿದರು.