ಕರ್ನಾಟಕ

karnataka

ETV Bharat / entertainment

'ಮಾನ್ಸೂನ್ ರಾಗ' ಪ್ರಮೋಷನಲ್ ಸಾಂಗ್​ಗೆ ಡಾಲಿ-ರಚಿತಾ ಮಸ್ತ್ ಡ್ಯಾನ್ಸ್ - etv bharat kannada

ಡಾಲಿ ಧನಂಜಯ್ ಹಾಗು ರಚಿತಾ ರಾಮ್ ಅಭಿನಯದ 'ಮಾನ್ಸೂನ್ ರಾಗ' ಸಿನೆಮಾದ ಮತ್ತೊಂದು ಬೊಂಬಾಟ್ ಪ್ರಮೋಷನಲ್ ಹಾಡಿನ ಚಿತ್ರೀಕರಣ ನಡೆಯುತ್ತಿದೆ.

daali-dhananjay-and-rachita-ram-dance-for-monsoon-raga-movie
'ಮಾನ್ಸೂನ್ ರಾಗ' ಪ್ರಮೋಷನಲ್ ಸಾಂಗ್​ಗೆ ಡಾಲಿ-ರಚಿತಾ ಮಸ್ತ್ ಡ್ಯಾನ್ಸ್

By

Published : Aug 10, 2022, 10:34 PM IST

ಡಾಲಿ ಧನಂಜಯ್ ಹಾಗು ರಚಿತಾ ರಾಮ್ ಅಭಿನಯದ 'ಮಾನ್ಸೂನ್ ರಾಗ' ಚಿತ್ರವು ಆಗಸ್ಟ್ 19ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಚಿತ್ರತಂಡವು ಮತ್ತೊಂದು ಬೊಂಬಾಟ್ ಪ್ರಮೋಷನಲ್ ಹಾಡನ್ನು ಚಿತ್ರೀಕರಣ ಮಾಡುತ್ತಿದೆ. ಕಂಠೀರವ ಸ್ಟುಡಿಯೋದಲ್ಲಿನ ಅದ್ಧೂರಿ ಸೆಟ್​​ನಲ್ಲಿ ಧನಂಜಯ್ ಹಾಗು ರಚಿತಾ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ.

'ಮಾನ್ಸೂನ್ ರಾಗ' ಪ್ರಮೋಷನಲ್ ಸಾಂಗ್​ಗೆ ಡಾಲಿ ಧನಂಜಯ್-ರಚಿತಾ ರಾಮ್​ ಮಸ್ತ್ ಡ್ಯಾನ್ಸ್

ಮಾನ್ಸೂನ್ ರಾಗ ಚಿತ್ರವು 70-80ರ ದಶಕದಲ್ಲಿನ ಕಥೆಯೊಂದಿಗೆ ಲವ್ ಸ್ಟೋರಿ ಹಾಗೂ ಸಂಬಂಧಗಳ ಮೌಲ್ಯ ಹೊಂದಿದೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ರಚಿತಾ ರಾಮ್ ವೇಶ್ಯೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವೇಶ್ಯೆಯನ್ನು ಪ್ರೀತಿಸುವ ಪ್ರೇಮಿಯಾಗಿ ಧನಂಜಯ್ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಅಚ್ಯುತ್ ಕುಮಾರ್, ಸುಹಾಸಿನಿ ಮತ್ತು ಯಶಾ ಶಿವಕುಮಾರ್ ಸೇರಿ ಬಹುದೊಡ್ಡ ತಾರಾಬಳಗವಿದೆ.

ಚಿತ್ರಕ್ಕೆ ಎಸ್.ಕೆ ರಾವ್ ಕ್ಯಾಮರಾ ಕೈಚಳಕ, ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ವೀರೆಂದ್ರನಾಥ್ ನಿರ್ದೇಶನವಿದ್ದು, ಗುರುಕಶ್ಯಪ್ ಸಂಭಾಷಣೆ ಬರೆದಿದ್ದಾರೆ. 'ಪುಷ್ಪಕ ವಿಮಾನ' ಬಳಿಕ ಎ.ಆರ್. ವಿಖ್ಯಾತ್ ಭಾರಿ ವೆಚ್ಚದಲ್ಲಿ ಸಿನೆಮಾ ನಿರ್ಮಿಸಿದ್ದಾರೆ.

ಇದನ್ನೂ ಓದಿ:ಟ್ರೈಲರ್ ವಿಚಾರದಲ್ಲಿ ದಾಖಲೆ ಬರೆದ ರವಿಚಂದ್ರನ್​ ಅಭಿನಯದ ರವಿ ಬೋಪಣ್ಣ ಸಿನಿಮಾ

ABOUT THE AUTHOR

...view details