ಕರ್ನಾಟಕ

karnataka

ETV Bharat / entertainment

Jawan song Chaley: ಶಾರುಖ್​ ಸಿನಿಮಾದ ಮತ್ತೊಂದು ಹಾಡು ಶೀಘ್ರದಲ್ಲೇ ನಿಮ್ಮ ಮುಂದೆ

Jawan song Chaley: ಬಹುನಿರೀಕ್ಷಿತ ಜವಾನ್​ ಚಿತ್ರದ ಎರಡನೇ ಹಾಡು ಶೀಘ್ರದಲ್ಲೇ ತೆರೆಕಾಣಲಿದೆ.

Jawan song Chaley
ಜವಾನ್​ ಸಿನಿಮಾದ ಚಲೇ ಹಾಡು

By

Published : Aug 12, 2023, 12:31 PM IST

ಎಸ್​ಆರ್​ಕೆ ಗೌರಿ ದಂಪತಿಯ ರೆಡ್​ ಚಿಲ್ಲೀಸ್​ ಎಂಟರ್​​ಟೈನ್​ಮೆಂಟ್​ ನಿರ್ಮಾಣದ 'ಜವಾನ್​' ಸಿನಿಮಾ ವಿಭಿನ್ನ ಪ್ರಚಾರದ ಮೂಲಕ ಸುದ್ದಿಯಲ್ಲಿದೆ. ಮೂರು ತಿಂಗಳ ಪ್ರಚಾರ ಯೋಜನೆ ಕಾರ್ಯಗತಗೊಳಿಸುತ್ತಿದೆ. ಜುಲೈ 10 ರಂದು 2.13 ನಿಮಿಷಗಳ ಪ್ರಿವ್ಯೂ ರಿವೀಲ್​ ಮಾಡುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟುಹಾಕಿದ ಚಿತ್ರತಂಡ ಇದೀಗ ಎರಡನೇ ಹಾಡು ಅನಾವರಣಗೊಳಿಸುವ ಯೋಜನೆಯಲ್ಲಿದೆ.

ಜವಾನ್​ ಪ್ರಮೋಶನ್​: ಜುಲೈ 31 ರಂದು ಸಿನಿಮಾದ ಮೊದಲ ಟ್ರ್ಯಾಕ್​ ಜಿಂದಾ ಬಂದಾ ವನ್ನು ಬಿಡುಗಡೆ ಮಾಡುವ ಮೂಲಕ ಸಿನಿಮಾ ಕುರಿತ ನಿರೀಕ್ಷೆ ಹೆಚ್ಚಿಸಿದೆ. ಸಾಂಗ್​​ ಅನ್ನು ಸಿನಿಪ್ರಿಯರು ಸ್ವೀಕರಿಸಿದ್ದಾರೆ. ಹಾಡು ಯಶಸ್ಸು ಗಳಿಸಿ, ಸಿನಿಪ್ರೇಮಿ ಮತ್ತು ಅಭಿಮಾನಿಗಳ ಉತ್ಸಾಹ ಹೆಚ್ಚಿಸಿದೆ. ಬಳಿಕ ಸಿನಿಮಾದ ಆಕರ್ಷಕ ಪೋಸ್ಟರ್ ಅನ್ನು ಎಸ್​ಆರ್​ಕೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ನಿನ್ನೆಯಷ್ಟೇ ​ಜಿಂದಾ ಬಂದಾ ಹಾಡಿನ ಮೇಕಿಂಗ್​ ವಿಡಿಯೋ ರಿವೀಲ್​​ ಮಾಡಿದ್ದರು. ಸೆಪ್ಟೆಂಬರ್​ 7ರಂದು ತೆರೆಕಾಣಲು ಸಜ್ಜಾಗಿರುವ ಈ ಸಿನಿಮಾದ ಮತ್ತೊಂದು ಹಾಡು ಬಿಡುಗಡೆ ಆಗಲು ಸಜ್ಜಾಗಿದೆ. ಈ ಮೂಲಕ ಸಿನಿಪ್ರಿಯರ ಸಂಪೂರ್ಣ ಗಮನವನ್ನು ತಮ್ಮತ್ತ ಕೇಂದ್ರೀಕರಿಸಲು ಚಿತ್ರತಂಡ ತಯಾರಿ ನಡೆಸಿದೆ.

ವರದಿಗಳ ಪ್ರಕಾರ, ಸೂಪರ್​ ಸ್ಟಾರ್ ಶಾರುಖ್​ ಖಾನ್​ ಮುಂದಿನ ವಾರ ಚಿತ್ರದ ಎರಡನೇ ಹಾಡನ್ನು ಅನಾವರಣಗೊಳಿಸಲಿದ್ದಾರೆ. ಇದೊಂದು ಮೆಲೋಡಿ ಹಾಡಾಗಿದ್ದು, ಚಲೇ (Jawan song Chaley) ಎಂಬ ಟೈಟಲ್​ ಹೊಂದಿರಲಿದೆ. ರೊಮ್ಯಾಂಟಿಕ್​ ಚಲೇ ಟ್ರ್ಯಾಕ್​ನಲ್ಲಿ ಎಸ್​ಆರ್​ಕೆ ನಯನತಾರಾ ಕಾಣಿಸಿಕೊಳ್ಳಲಿದ್ದಾರೆ. ಜನಪ್ರಿಯ ಗಾಯಕ ಅರಿಜಿತ್​ ಸಿಂಗ್​​ ಈ ಟ್ರ್ಯಾಕ್​ನಲ್ಲಿ ಕೆಲಸ ಮಾಡಿದ್ದಾರೆ. ಶಿಲ್ಪಾ ರಾವ್​ ಸಾಥ್​ ನೀಡಿದ್ದಾರೆ.

ರೊಮ್ಯಾಂಟಿಕ್​ ಸಾಂಗ್​ನ ಶೂಟಿಂಗ್​ ಅನ್ನು ಕೆಲ ತಿಂಗಳ ಹಿಂದೆಯೇ ನಡೆಸಲಾಗಿದೆ. ಫರಾ ಖಾನ್​ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಲೇ ಸಾಂಗ್​ ಜವಾನ್​​ ಚಿತ್ರದ ಅದ್ಭುತ, ರೊಮ್ಯಾಂಟಿಕ್​ ಹಾಡು ಎಂದು ಪರಿಗಣಿಸಲಾಗಿದೆ. ಹಾಡಿನ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲವಾದರೂ, ಸೋಮವಾರ (ಆಗಸ್ಟ್ 14) ಅಥವಾ ಮಂಗಳವಾರದಂದು ಹಾಡು ಬಿಡುಗಡೆ ಆಗೋದು ಬಹುತೇಕ ಖಚಿತ ಎಂದು ವರದಿಗಳು ಸೂಚಿಸಿವೆ.

ಇದನ್ನೂ ಓದಿ:Chandramukhi 2: ಬಹುನಿರೀಕ್ಷಿತ 'ಚಂದ್ರಮುಖಿ 2' ಚಿತ್ರದ 'ಸ್ವಾಗತಾಂಜಲಿ' ಹಾಡು ಬಿಡುಗಡೆ

ಸೆಪ್ಟೆಂಬರ್​ 7 ರಂದು ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣಲಿದೆ. ಜುಲೈ 10 ರಿಂದ ಪ್ರಚಾರ ಪ್ರಾರಂಭವಾಗಿದೆ. ಚಿತ್ರದ ಕುರಿತು ಅಪ್​ಡೇಟ್ಸ್​ ಕೊಡುತ್ತಾ, ಜವಾನ್​ ಟ್ರೆಂಡಿಂಗ್​ನಲ್ಲಿದೆ. ಇತ್ತೀಚೆಗಷ್ಟೇ ಪೋಸ್ಟರ್ ಅನಾವರಣಗೊಳಿಸಲಾಗಿತ್ತು. ನಿನ್ನೆ ​ಜಿಂದಾ ಬಂದಾ ಹಾಡಿನ ಮೇಕಿಂಗ್​ ವಿಡಿಯೋ ಅನಾವರಣಗೊಳಿಸುವ ಮೂಲಕ ಜನರ ಗಮನ ಸೆಳೆದಿದ್ದಾರೆ. ಇದರಲ್ಲಿ ಸೌತ್​ ಸ್ಟಾರ್ ಡೈರೆಕ್ಟರ್​ ಅಟ್ಲೀ, ಸೂಪರ್​ ಸ್ಟಾರ್ ಶಾರುಖ್​ ಖಾನ್​ ಅವರ ಪ್ರೀತಿಯ ಕ್ಷಣಗಳು ಅಭಿಮಾನಿಗಳ ಮನ ಮುಟ್ಟಿದೆ.

ಇದನ್ನೂ ಓದಿ:ಜಿಂದಾ ಬಂದಾ ಮೇಕಿಂಗ್​ ವಿಡಿಯೋ: ಎಸ್​ಆರ್​ಕೆ ಅಪ್ಪಿಕೊಂಡ ಅಟ್ಲೀ - ಸೌತ್​, ಬಾಲಿವುಡ್​ ಕಾಂಬೋದಲ್ಲಿ 'ಜವಾನ್​​' ರೆಡಿ

ಜವಾನ್​ ಸಿನಿಮಾ ಮಾಸ್​ ಆ್ಯಕ್ಷನ್​​​ ಸೀನ್​ಗಳಿಂದ ಸಮೃದ್ಧವಾಗಿದೆ ಎಂದು ಹೇಳಲಾಗಿದೆ. ಎಸ್​​ಆರ್​ಕೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡರೆ, ದೀಪಿಕಾ ಪಡುಕೋಣೆ ಅತಿಥಿ ಪಾತ್ರ ವಹಿಸಿದ್ದಾರೆ. ನಯನತಾರಾ ಮತ್ತು ವಿಜಯ್​ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರೆ, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ, ಸುನೀಲ್​​ ಗರೋವರ್​​, ಯೋಗಿ ಬಾಬು, ರಿಧಿ ಕೂಡ ನಟಿಸಿದ್ದಾರೆ.

ABOUT THE AUTHOR

...view details