ಕರ್ನಾಟಕ

karnataka

ETV Bharat / entertainment

ಬಾಲಕ ಆತ್ಮಹತ್ಯೆ: ಅಪ್ರಾಪ್ತನ ಜೀವ ತೆಗೆದ ಟ್ರೋಲ್​,​ ಟೀಕಿಸುವ ಮುನ್ನ ಒಮ್ಮೆ ಯೋಚಿಸಿ - ಟ್ರೋಲ್ ಆತ್ಮಹತ್ಯೆ

ರೀಲ್ಸ್​ಗೆ ನೆಗೆಟಿವ್​ ಕಾಮೆಂಟ್ಸ್ ಸ್ವೀಕರಿಸಿದ ಪ್ರಾಂಶು ಎಂಬ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ.

boy suicide
ಟ್ರೋಲ್​ಗೆ ಬಾಲಕ ಆತ್ಮಹತ್ಯೆ

By ETV Bharat Karnataka Team

Published : Nov 26, 2023, 5:22 PM IST

ಮಧ್ಯಪ್ರದೇಶದ ಉಜ್ಜಯಿನಿ ಮೂಲದ 16ರ ಬಾಲಕನೋರ್ವ ಟ್ರೋಲ್ಸ್​​ನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ತನ್ನ ರೀಲ್ಸ್​ಗೆ ತೀವ್ರತರನಾದ ಕಾಮೆಂಟ್​ಗಳನ್ನು ಸ್ವೀಕರಿಸಿದ ಪ್ರಾಂಶು ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದಾನೆ. ನವೆಂಬರ್ 21 ರಂದು ಮನೆಯಲ್ಲಿ ಒಬ್ಬನೇ ಇದ್ದ ವೇಳೆ ತನ್ನ ಪ್ರಾಣ ಕಳೆದುಕೊಂಡಿದ್ದಾನೆ.

ಪ್ರಾಂಶು ಯಾದವ್ ಸೋಷಿಯಲ್​ ಮೀಡಿಯಾ ಇನ್​​ಫ್ಲುಯೆನ್ಸರ್ ಆಗಿ ಗುರುತಿಸಿಕೊಂಡಿದ್ದ. ಮೇಕ್ಅಪ್ ಮತ್ತು ಸೌಂದರ್ಯ ವಿಷಯದ ಸಲುವಾಗಿ ನೆಟ್ಟಿಗರ ಗಮನ ಪ್ರಾಂಶು ಕಡೆ ಹೋಗಿತ್ತು. ದೀಪಾವಳಿ ರೀಲ್ಸ್ ವಿಡಿಯೋದಲ್ಲಿ, ಸೀರೆ ಧರಿಸಿ ಕಾಣಿಸಿಕೊಂಡಿದ್ದ. ಹಾಗಾಗಿ ಬಹಳ ನೆಗೆಟಿವ್, ಹೇಟ್​ ಕಾಮೆಂಟ್‌ಗಳು ಬಂದಿದ್ದು, ಪರಿಣಾಮ ಕೊನೆಯುಸಿರೆಳೆದಿದ್ದಾನೆ ಎಂದು ವರದಿಯಾಗಿದೆ.

ಪೊಲೀಸರು ಮೃತನ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್, ವಾಟ್ಸಾಪ್ ಮತ್ತು ಫೇಸ್‌ಬುಕ್ ಖಾತೆಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಆದಾಗ್ಯೂ, ಆತ್ಮಹತ್ಯೆಗೆ ಇದೇ ಕಾರಣವಿರಬಹುದೆಂದು ಹೇಳಲಾಗಿರುವ ಟ್ರೋಲ್ ಅಥವಾ ಹೇಟ್ ಕಾಮೆಂಟ್ಸ್​​ಗೆ ಸಂಬಂಧಿಸಿರುವ ಯಾವುದೇ ಸ್ಟ್ರಾಂಗ್​ ಸಾಕ್ಷಿಗಳಿಲ್ಲ. ಈ ಘಟನೆ ನಾಗಜಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಪೊಲೀಸರು, ಟ್ರೋಲಿಂಗ್ ಮತ್ತು ಅಪ್ರಾಪ್ತರ ದುರಂತ ಸಾವಿನ ನಡುವಿನ ಸಂಭಾವ್ಯ ಸಂಬಂಧದ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಅಧಿಕಾರಿಗಳು ಬಾಲಕನ ಇನ್‌ಸ್ಟಾಗ್ರಾಮ್ ರೀಲ್‌ಗಳಲ್ಲಿನ ಕಾಮೆಂಟ್‌ಗಳು ಸೇರಿದಂತೆ ಇತರೆ ಸಾಕ್ಷಿಗಳ ಪರಿಶೀಲನೆಯಲ್ಲಿದ್ದಾರೆ.

ಇದನ್ನೂ ಓದಿ:ತ್ರಿಶಾ, ಚಿರಂಜೀವಿ, ಖುಷ್ಬೂ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾದ ಮನ್ಸೂರ್ ಅಲಿ ಖಾನ್

ಪೊಲೀಸ್ ಅಧಿಕಾರಿ ಮಾತನಾಡಿ, ಸಾಮಾಜಿಕ ಮಾಧ್ಯಮದಲ್ಲಿ ಗುರುತಿಸಿಕೊಂಡಿರುವವರು ಕ್ರಾಸ್​​ ಡ್ರೆಸ್ಸಿಂಗ್ (ಹುಡುಗರು ಹುಡುಗಿಯರಂತೆ ವೇಷ ಧರಿಸುವುದು) ವಿಚಾರವಾಗಿ ವಿವಿಧ ವೇದಿಕೆಗಳಲ್ಲಿ ಬೆದರಿಕೆಗಳನ್ನು ಸ್ವೀಕರಿಸುತ್ತಾರೆ, ಜೊತೆಗೆ ಸಲಿಂಗಕಾಮಿ ಸಂಬಂಧಿತ ಟೀಕೆ ಎದುರಿಸುತ್ತಾರೆ. ಅಂತಿಮವಾಗಿ ಖಿನ್ನತೆಗೆ ಕಾರಣವಾಗಿ ಜೀವನವನ್ನು ತೆಗೆದುಕೊಳ್ಳುವ ನಿರ್ಧಾರಕ್ಕೆ ಬರುತ್ತಾರೆಂದು ವಿವಿಧ ವರದಿಗಳು ಸೂಚಿಸಿವೆ. ಅಲ್ಲದೇ ಮೃತನ ತಾಯಿ, ಮಗ ಮುಂದಿನ ಪರೀಕ್ಷೆಗೆ ಓದುವ ಸಲುವಾಗಿ ಆ ದಿನ ತನ್ನ ಟ್ಯೂಷನ್​ಗೂ ಹೋಗಿರಲಿಲ್ಲ. ಬೆಳಗ್ಗೆ 10 ಗಂಟೆಗೆ ಮಗನೊಂದಿಗೆ ಮಾತನಾಡಿದ್ದೇ ಕೊನೆಯ ಸಂಭಾಷಣೆ ಎಂದು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಪಂಜಾಬಿ ಗಾಯಕ ಗಿಪ್ಪಿ ಗ್ರೆವಾಲ್ ಬಂಗಲೆ ಮೇಲೆ ಗುಂಡಿನ ದಾಳಿ: ಸಲ್ಮಾನ್​ ಖಾನ್‌ಗೆ ಲಾರೆನ್ಸ್ ಬಿಷ್ಣೋಯ್ ಎಚ್ಚರಿಕೆ

ಮೇಡ್ ಇನ್ ಹೆವೆನ್ ವೆಬ್ ಸರಣಿಯ ನಟಿ ತ್ರಿನೇತ್ರ ಹಲ್ದಾರ್ ಗುಮ್ಮರಾಜು ಅವರು ಈ ಸಾವಿನ ಬಗ್ಗೆ ಪೋಸ್ಟ್ ಶೇರ್ ಮಾಡಿ ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ. ಮೃತನ ಪೋಸ್ಟ್‌ಗಳ ಕಾಮೆಂಟ್ ವಿಭಾಗವು 4,000ಕ್ಕೂ ಹೆಚ್ಚು ಟೀಕೆಗಳಿಂದ (homophobic remarks) ತುಂಬಿದೆ, ಇದು ಬಾಲಕ ತನ್ನ ಜೀವ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಪ್ರಭಾವ ಬೀರಿದೆ ಎಂದು ಆರೋಪಿಸಿದ್ದಾರೆ. ತ್ರಿನೇತ್ರ ಅವರು ಟ್ರೋಲ್‌ಗಳನ್ನು ಈ ಬಗ್ಗೆ ಪ್ರಶ್ನಿಸಿದ್ದಾರೆ. ಈಗ ತೃಪ್ತಿಯೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಜೊತೆಗೆ ಎಲ್​ಜಿಬಿಟಿಕ್ಯೂ ಸಮುದಾಯದ ಹಲವು ಸದಸ್ಯರು ಕೂಡ ಬಾಲಕನ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಟ್ರೋಲ್​ ವಿಚಾರವಾಗಿ ಅಸಮಾಧಾನ ಹೊರಹಾಕಿದ್ದಾರೆ.

ABOUT THE AUTHOR

...view details