ಕರ್ನಾಟಕ

karnataka

ETV Bharat / entertainment

ಬಾಲಿವುಡ್ ಸೂಪರ್​ಸ್ಟಾರ್ ಅಕ್ಷಯ್ ಕುಮಾರ್ ಜನ್ಮದಿನ - ಬಾಲಿವುಡ್​ ಖಿಲಾಡಿಗೆ ಶುಭಾಶಯಗಳ ಮಹಾಪೂರ - etv bharata kannada

55ನೇ ವಸಂತಕ್ಕೆ ಕಾಲಿಟ್ಟ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಗೆ ಚಿತ್ರರಂಗ ಸೇರಿದಂತೆ ಅಭಿಮಾನಿಗಳಿಂದ ಶುಭಾಶಯಗಳ ಸಂದೇಶ ಹರಿದು ಬರುತ್ತಿದೆ.

ಅಕ್ಷಯ್ ಕುಮಾರ್ ಜನ್ಮದಿನ
Akshay Kumar birthday

By

Published : Sep 9, 2022, 2:39 PM IST

Updated : Sep 9, 2022, 2:55 PM IST

ಇಂದು ಬಾಲಿವುಡ್ ಸೂಪರ್​ಸ್ಟಾರ್ ಅಕ್ಷಯ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. 55ನೇ ವಸಂತಕ್ಕೆ ಕಾಲಿಟ್ಟ ಬಹು ಬೇಡಿಕೆ ನಟನಿಗೆ ಚಿತ್ರರಂಗ ಸೇರಿದಂತೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಬಾಲಿವುಡ್​​ ಬಣ್ಣದ ಲೋಕದಲ್ಲಿ ಅಕ್ಷಯ್ ಕುಮಾರ್ ಸಾಧನೆ ಅಪಾರ. ಜೊತೆಗೆ ಸಮಾಜ ಸೇವೆಯಲ್ಲೂ ಮುಂದು ಈ ಬಾಲಿವುಡ್​ನ ಖಿಲಾಡಿ ಅಕ್ಷಯ್​ ಕುಮಾರ್.

ಬಾಲಿವುಡ್​ಗೆ ಎಂಟ್ರಿ: ಅಕ್ಷಯ್​ ಕುಮಾರ್ 1991ರಲ್ಲಿ ಸೌಗಂಧ್ ಚಿತ್ರದ ಮೂಲಕ ಬಾಲಿವುಡ್​​ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟರು. ನಂತರ 1992ರಲ್ಲಿ ಥ್ರಿಲ್ಲರ್ ಚಲನಚಿತ್ರ 'ಖಿಲಾಡಿ'ಯಲ್ಲಿ ನಟಿಸಿದರು. 1994ರಲ್ಲಿ ಮೇ ಖಿಲಾಡಿ ತೂ ಅನಾರಿ ಮತ್ತು ಮೊಹ್ರಾ ಚಿತ್ರಗಳಲ್ಲಿ ಕಾಣಿಸಿಕೊಂಡರು. ನಂತರ 'ಯೆಹ್ ದಿಲ್ಲಗಿ' ರೊಮ್ಯಾಂಟಿಕ್ ಚಿತ್ರದಲ್ಲಿ ಪಾತ್ರ ವಹಿಸಿದರು. ಇವೆಲ್ಲವೂ ಅಕ್ಷಯ್​ ವೃತ್ತಿ ಜೀವನದ ಆರಂಭದ ದಿನಗಳ ಯಶಸ್ಸಿನ ಮೆಟ್ಟಿಲುಗಳು.

ಸೂಪರ್​ಸ್ಟಾರ್ ಅಕ್ಷಯ್ ಕುಮಾರ್ ಜನ್ಮದಿನ

ಸಬಸೆ ಬಡಾ ಖಿಲಾಡಿ, ಖಿಲಾಡಿಯೋಂಕಾ ಖಿಲಾಡಿ, ಧಡ್ಕನ್, ಏಕ್ ರಿಶ್ತಾ, ಹೇರಾ ಫೇರಿ, ಮುಜುಸೆ ಶಾದಿ ಕರೋಗಿ, ಗರಂ ಮಸಾಲಾ, ವಕ್ತ್​ ಸೂಪರ್​ ಹಿಟ್ ಸಿನಿಮಾಗಳು ಸೇರಿ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದು, ಉತ್ತಮ ನಟ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

100 ಕೋಟಿ ಗಡಿ ದಾಟಿದ ಸಿನಿಮಾ: ಇತ್ತೀಚೆಗೆ ಫಿಲ್ಮ್ ವೆಬ್‌ಸೈಟ್​ವೊಂದು ಅಕ್ಷಯ್ ಕುಮಾರ್ ಅವರ ಟಾಪ್​ ಚಿತ್ರಗಳಿಗೆ ಸಂಬಂಧಿಸಿದ ಅಂಕಿ - ಅಂಶಗಳನ್ನು ಬಿಡುಗಡೆ ಮಾಡಿದೆ. 2012 ಮತ್ತು 2019ರ ನಡುವೆ 100 ಕೋಟಿ ಗಡಿ ದಾಟಿದ ಸಿನಿಮಾಗಳ ಪಟ್ಟಿ ಹೀಗಿದೆ - ಗುಡ್ ನ್ಯೂಸ್​, ಹೌಸ್‌ಫುಲ್-4, ಮಿಷನ್ ಮಂಗಲ್, 2.0, ಗೋಲ್ಡ್, ಟಾಯ್ಲೆಟ್ - ಏಕ್ ಪ್ರೇಮ್ ಕಥಾ, ಜಾಲಿ ಎಲ್‌ಎಲ್‌ಬಿ-2, ರುಸ್ತಮ್, ಹೌಸ್‌ಫುಲ್-3, ಏರ್‌ಲಿಫ್ಟ್, ಹಾಲಿಡೇಸ್, ರೌಡಿ ರಾಥೋರ್ ಮತ್ತು ಹೌಸ್‌ಫುಲ್-2. ಇನ್ನೂ ಸೆಪ್ಟೆಂಬರ್ 2 ರಂದು ಗೆ ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​ನಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗಿರುವ 'ಕಟ್‌ಪುಟ್ಲಿ' ಕೂಡ 100 ಕೋಟಿ ಕಲೆಕ್ಷನ್ ಪಟ್ಟಿಯಲ್ಲಿ ಸೇರಲಿದೆಯೆಂದು ನಂಬಲಾಗಿದೆ. 125 ಕೋಟಿ ರೂ.ಗೆ ಸಿನಿಮಾ ಸೇಲ್​ ಆಗಿದೆ ಎಂಬ ಮಾಹಿತಿ ಕೂಡ ಇದೆ.

100 ಕೋಟಿ ಗಡಿ ದಾಟಿದ ಸಿನಿಮಾಗಳು

ತಮ್ಮ ಹುಟ್ಟುಹಬ್ಬದ ಸಲುವಾಗಿ ಅಕ್ಷಯ್​​ ಸಾಮಾಜಿಕ ಜಾಲತಾಣದಲ್ಲಿ ಒಂದು ಸುಂದರ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. 'ವರ್ಷಗಳು ಕಳೆದವು, ಸಮಯ ಕಳೆದಿದೆ, ಆದರೆ ಎಲ್ಲವೂ ಸ್ಥಿರವಾಗಿರುವುದು ಪ್ರತಿ ಜನ್ಮದಿನದಂದು ನಾನು ಅನುಭವಿಸುವ ಕೃತಜ್ಞತೆಯಾಗಿದೆ, ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು' ಎಂದು ಬರೆದಿದ್ದಾರೆ.

ಇದನ್ನೂ ಓದಿ:ಅಕ್ಷಯ್ ಕುಮಾರ್ ಸಿನಿ ಪಯಣದ 100 ಕೋಟಿ ಮೀರಿದ ಸಿನಿಮಾಗಳ ಪಟ್ಟಿ ಬಿಡುಗಡೆ

ಇನ್ನು ಇತ್ತೀಚೆಗೆ ಬಿಡುಗಡೆಯಾದ ಸಿನಿಮಾಗಳು ಸೋಲು ಕಂಡಿದ್ದನ್ನು ತಳ್ಳಿ ಹಾಕುವಂತಿಲ್ಲ. ಮಾರ್ಚ್​ 18ರಂದು ಬಿಡುಗಡೆಯಾದ ಬಚ್ಚನ್​ ಪಾಂಡೆ, ಆ ನಂತರ ಬಂದ ‘ಸಾಮ್ರಾಟ್​ ಪೃಥ್ವಿರಾಜ್​’, ಆಗಸ್ಟ್​ 11ರಂದು ಬಿಡುಗಡೆಯಾದ ‘ರಕ್ಷಾ ಬಂಧನ್​’ ಸಿನಿಮಾಗಳು ಕಲೆಕ್ಷನ್​ ವಿಚಾರದಲ್ಲಿ ನಿರೀಕ್ಷೆ ತಲುಪಿಲ್ಲ. ಇನ್ನೂ ಹಲವು ವಿವಾದಗಳ ನಡುವೆ ಅಕ್ಟೋಬರ್ 24ರಂದು ‘ರಾಮ್ ಸೇತು' ಸಿನಿಮಾ ಕೂಡ ರಿಲೀಸ್ ಆಗಲು ರೆಡಿ ಇದೆ. ಬಾಲಿವುಡ್​ಗೆ ಬಾಯ್ಕಾಟ್​ ಬಿಸಿ ತಗುಲಿದ್ದು, ಸಿನಿಮಾಗಳು ಚಿತ್ರತಂಡದ ನಿರೀಕ್ಷೆಯನ್ನು ಹುಸಿ ಮಾಡುತ್ತಿದೆ. ಆದರೂ ಯಶಸ್ವಿನ ಭರವಸೆಯಲ್ಲೇ ಸಿನಿಮಾಗಳು ಬಿಡುಗಡೆಯಾಗುತ್ತಿವೆ.

ಇದನ್ನೂ ಓದಿ:ವಿಶ್ವಾದ್ಯಂತ ರಣ್​​ಬೀರ್​-ಆಲಿಯಾ ಅಭಿನಯದ 'ಬ್ರಹ್ಮಾಸ್ತ್ರ' ಸಿನಿಮಾ ಬಿಡುಗಡೆ

Last Updated : Sep 9, 2022, 2:55 PM IST

ABOUT THE AUTHOR

...view details