ಖ್ಯಾತ ಸಿನಿಮಾ ನಿರ್ದೇಶಕ ಪ್ರದೀಪ್ ಸರ್ಕಾರ್(68) ಇಂದು ವಿಧಿವಶರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಡಯಾಲಿಸಿಸ್ಗೆ ಒಳಗಾಗುತ್ತಿದ್ದರು. ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಸರ್ಕಾರ್ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಪರಿಣೀತಾ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನೀಡಿ ಹೆಸರುವಾಸಿಯಾಗಿದ್ದ ಸರ್ಕಾರ್ ಅಗಲಿಕೆಗೆ ಚಿತ್ರಲೋಕದ ಗಣ್ಯರು ಕಂಬನಿ ಮಿಡಿದಿದ್ದಾರೆ.
ಸರ್ಕಾರ್ ಯಶಸ್ವಿ ಸಿನಿಮಾಗಳಿವು..: ಪ್ರದೀಪ್ ಸರ್ಕಾರ್ ನಿರ್ದೇಶಿಸಿದ ಸಿನಿಮಾಗಳು ಬ್ಲಾಕ್ಬಸ್ಟರ್ ಸಕ್ಸಸ್ ಕಂಡಿವೆ. 2005 ರಲ್ಲಿ ಬಿಡುಗಡೆಯಾದ 'ಪರಿಣೀತಾ' ಸೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಸೈಫ್ ಅಲಿ ಖಾನ್, ವಿದ್ಯಾ ಬಾಲನ್, ಸಂಜಯ್ ದತ್ ಸೇರಿದಂತೆ ಅನೇಕ ತಾರೆಯರು ಅಭಿನಯಿಸಿದ್ದರು. ಈ ಸಿನಿಮಾಗಾಗಿ ಸರ್ಕಾರ್ ಅವರಿಗೆ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿಯು ಲಭಿಸಿದೆ. ಲವ್ ಸ್ಟೋರಿ ಥೀಮ್ ಇಟ್ಟುಕೊಂಡಿದ್ದ ಸಿನಿಮಾ ಪ್ರೇಕ್ಷಕರ ಮನಸ್ಸು ಗೆದ್ದಿತ್ತು.
ಅದಾದ ನಂತರ ಸರ್ಕಾರ್ ನಿರ್ದೇಶನದಲ್ಲಿ ಮೂಡಿಬಂದ ಲಾಗಾ ಚುನಾರಿ ಮೇ ದಾಂಗ್ (2007), ಲಫಂಗೆ ಪರಿಂದೆ (2010), ಮಾರ್ಡಾನಿ (2014) ಮತ್ತು ಹೆಲಿಕಾಪ್ಟರ್ ಈಲಾ (2018) ಎಲ್ಲವೂ ಯಶಸ್ವಿಯಾಗಿತ್ತು. 2020 ರಲ್ಲಿ ಬಿಡುಗಡೆಯಾದ ವೆಬ್ ಸೀರೀಸ್ 'ಡುರಂಗ' ಸರ್ಕಾರ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ಕೊನೆಯ ಚಿತ್ರವಾಗಿದೆ. ಇದರಲ್ಲಿ ಗುಲ್ಶನ್ ದೇವಯ್ಯ ಮತ್ತು ದ್ರಷ್ಟಿ ಧಾಮಿ ನಟಿಸಿದ್ದಾರೆ. ಅಲ್ಲದೇ ಸರ್ಕಾರ್ ಅವರಿಗೆ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಇದನ್ನೂ ಓದಿ:ಜೂಮೆ ಜೋ ಪಠಾಣ್ ಹಾಡಿಗೆ ಮೈ ಕುಣಿಸಿದ ಇರ್ಫಾನ್ ಪಠಾಣ್ ಪುತ್ರ.. ವಿಡಿಯೋ ಮೆಚ್ಚಿದ ಎಸ್ಆರ್ಕೆ