ಕರ್ನಾಟಕ

karnataka

By

Published : Nov 12, 2022, 4:14 PM IST

ETV Bharat / entertainment

ಹೆಣ್ಣು ಮಗುವಿಗೆ ಜನ್ಮ ನೀಡಿದ ಬಿಪಾಶಾ ಬಸು.. ತಂದೆಯಾದ ಖುಷಿಯಲ್ಲಿ ಕರಣ್ ಸಿಂಗ್ ಗ್ರೋವರ್

2016ರಲ್ಲಿ ದಾಂಪತ್ಯ ಜೀವನ ಆರಂಭಿಸಿದ ನಟಿ ಬಿಪಾಶಾ ಬಸು ಮತ್ತು ನಟ ಕರಣ್ ಸಿಂಗ್ ಗ್ರೋವರ್ ಪೋಷಕರಾಗಿ ಬಡ್ತಿ ಪಡೆದಿದ್ದಾರೆ.

baby girl for Bipasha Basu
ಬಿಪಾಶಾ ಬಸುಗೆ ಹೆಣ್ಣು ಮಗು

ಬಾಲಿವುಡ್​ನಿಂದ ಮತ್ತೊಂದು ಶುಭ ಸುದ್ದಿ ಬಂದಿದೆ. ನವೆಂಬರ್​ 6ರಂದು ಆಲಿಯಾ ಭಟ್​ ಹೆಣ್ಣು ಮಗುವಿಗೆ ಜನ್ಮ ನೀಡಿ ತಾಯಿಯಾಗಿರುವ ಕುರಿತು ಸಂತಸ ಹಂಚಿಕೊಂಡಿದ್ದರು. ಇದೀಗ ನಟಿ ಬಿಪಾಶಾ ಬಸು ಮತ್ತು ನಟ ಕರಣ್ ಸಿಂಗ್ ಗ್ರೋವರ್ ಪೋಷಕರಾಗಿ ಬಡ್ತಿ ಪಡೆದಿದ್ದಾರೆ. 2016ರಲ್ಲಿ ವೈವಾಹಿಕ ಜೀವನ ಆರಂಭಿಸಿದ ನಟಿ ಬಿಪಾಶಾ ಬಸು ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಕುಟುಂಬಸ್ಥರಲ್ಲಿ, ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ.

ಪೋಷಕರಾಗಿ ಭಡ್ತಿ ಪಡೆದ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್

ಕೆಲ ದಿನಗಳಿಂದ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಬಾಲಿವುಡ್​ ನಟಿ ಹಲವು ಬಾರಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡು ಸಂಭ್ರಮಿಸಿದ್ದರು. ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಮೊದಲ ಮಗುವಿನ ಆಗಮನಕ್ಕೆ ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಇತ್ತೀಚೆಗೆ ಸೀಮಂತ ಶಾಸ್ತ್ರವೂ ನಡೆದಿತ್ತು.

ಇದನ್ನೂ ಓದಿ:ಮಾದಕ ನಟಿ ಬಿಪಾಶಾ ಬಸು ಸೀಮಂತ.. ಭಾವುಕಳಾದ ಪತ್ನಿಗೆ ಪ್ರೀತಿಯ ಮಳೆ ಸುರಿಸಿದ ಪತಿ ಕರಣ್

ಬಿಪಾಶಾರಿಗೆ ಮಗುವಾಗುತ್ತಿದ್ದಂತೆಯೇ ಅವರ ಆತ್ಮೀಯರು, ಸಂಬಂಧಿಕರು, ಚಿತ್ರರಂಗದವರು ಸೇರಿದಂತೆ ಅಭಿಮಾನಿಗಳು ಶುಭಾಶಯ ಕೋರಲು ಆರಂಭಿಸಿದ್ದಾರೆ. ಬಿಪಾಶಾ ಇಷ್ಟಪಟ್ಟಂತೆ ಅವರಿಗೆ ಹೆಣ್ಣ ಮಗುವೇ ಆಗಿದೆ ಎಂದು ಹಲವರು ಸಂಭ್ರಮಿಸಿದ್ದಾರೆ. ಸದ್ಯ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಇದನ್ನೂ ಓದಿ:ಆಸ್ಪತ್ರೆಯಿಂದ ಆಲಿಯಾ ಡಿಸ್ಚಾರ್ಜ್​​.. ಮಗುವನ್ನು ಸ್ವಾಗತಿಸಲು ಮನೆಯಲ್ಲಿ ಭರ್ಜರಿ ತಯಾರಿ

ABOUT THE AUTHOR

...view details