ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಅವರ ಪತಿ, ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಮತ್ತೊಮ್ಮೆ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ದಂಪತಿ ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಬಹಳ ದಿನಗಳ ನಂತರ ಈ ಜೋಡಿ ಜೊತೆಯಾಗಿ ಪಾಪ್ಗಳ ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ. ಸದ್ಯ ಇವರಿಬ್ಬರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳು ಕೂಡ ಈ ಸುಂದರ ದೃಶ್ಯಕ್ಕೆ ಪ್ರೀತಿಯ ಸುರಿಮಳೆಗೈದಿದ್ದಾರೆ.
ಏರ್ಪೋರ್ಟ್ ಲುಕ್ನಲ್ಲಿ ಅನುಷ್ಕಾ ವೈಟ್ ಟಿ- ಶರ್ಟ್ಗೆ ನೀಲಿ ಬಣ್ಣದ ಜಾಕೆಟ್ನೊಂದಿಗೆ ಬ್ಲ್ಯಾಕ್ ಕಾರ್ಗೋ ಪ್ಯಾಂಟ್ ಧರಿಸಿದ್ದರು. ಅದಕ್ಕೆ ಹೊಂದಿಕೆಯಾಗುವಂತೆ ಬಿಳಿ ಬಣ್ಣದ ಸ್ನೀಕರ್ಸ್ ಮತ್ತು ಬ್ಲ್ಯಾಕ್ ಸನ್ಗ್ಲಾಸ್ನೊಂದಿಗೆ ತಮ್ಮ ನೋಟವನ್ನು ಬೀರಿದರು. ಇನ್ನು ವಿರಾಟ್ ಕೊಹ್ಲಿ ಕಂಪ್ಲೀಟ್ ಬಿಳಿ ಬಣ್ಣದ ದಿರಿಸಿನಲ್ಲಿ ಕಾಣಿಸಿಕೊಂಡರು. ವೈಟ್ ಟಿ- ಶರ್ಟ್, ಪ್ಯಾಂಟ್ ಮತ್ತು ವೈಟ್ ಸ್ನೀಕರ್ಸ್ನೊಂದಿಗೆ ಹ್ಯಾಂಡ್ಸಮ್ ಆಗಿ ಕಂಡರು.
ವಿರಾಟ್ ಮತ್ತು ಅನುಷ್ಕಾ ಇಬ್ಬರೂ ತಮ್ಮ ಕ್ಷೇತ್ರದಲ್ಲಿ ಸಾಧನೆಗೈದು, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅಭಿಮಾನಿಗಳು ಈ ಜೋಡಿಯ ಸುದ್ದಿ, ಫೋಟೋಗಳಿಗಾಗಿ ಕಾದು ಕುಳಿತಿರುತ್ತಾರೆ. ಅದರಂತೆ ಇದೀಗ ವಿಮಾನ ನಿಲ್ದಾಣದಲ್ಲಿ ವಿರುಷ್ಕಾ ದಂಪತಿ ಕಾಣಿಸಿಕೊಂಡಿರುವ ವಿಡಿಯೋ ಮತ್ತು ಫೋಟೋಗಳು ಫ್ಯಾನ್ಸ್ ಗಮನ ಸೆಳೆದಿವೆ.