ಕರ್ನಾಟಕ

karnataka

ETV Bharat / entertainment

ಭಾರತ ಪಾಕಿಸ್ತಾನ ಪಂದ್ಯ: ಅಹಮದಾಬಾದ್‌ ತಲುಪಿದ ಸಚಿನ್​ ತೆಂಡೂಲ್ಕರ್, ಅನುಷ್ಕಾ ಶರ್ಮಾ, ಅರಿಜಿತ್ ಸಿಂಗ್​ - ವಿಡಿಯೋ! - ಅರಿಜಿತ್ ಸಿಂಗ್

ಭಾರತ ಪಾಕಿಸ್ತಾನ ಪಂದ್ಯ ಹಿನ್ನೆಲೆ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್, ನಟಿ ಅನುಷ್ಕಾ ಶರ್ಮಾ, ಗಾಯಕ ಅರಿಜಿತ್ ಸಿಂಗ್, ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಈಗಾಗಲೇ ಅಹಮದಾಬಾದ್​ ತಲುಪಿದ್ದಾರೆ.

Anushka Sharma, Arijit Singh and Sachin Tendulkar arrive Ahmedabad
ಅಹಮದಾಬಾದ್‌ ತಲುಪಿದ ಸಚಿನ್​ ತೆಂಡೂಲ್ಕರ್, ಅನುಷ್ಕಾ ಶರ್ಮಾ, ಅರಿಜಿತ್ ಸಿಂಗ್

By ETV Bharat Karnataka Team

Published : Oct 14, 2023, 11:18 AM IST

ಇಂದು ಅಕ್ಟೋಬರ್ 14.... ಕ್ರಿಕೆಟ್ ಮಹಾಯುದ್ಧ ನಡೆಯಲಿದೆ. ವಿಶ್ವಕಪ್ 2023ರ 12ನೇ ಪಂದ್ಯ ಇಂದು ಅಹಮದಾಬಾದ್​​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇಂಡೋ ಪಾಕ್​​ ತಂಡಗಳು ಮೈದಾನದಲ್ಲಿ ಮುಖಾಮುಖಿ ಆಗಲಿದೆ. ಎರಡೂ ತಂಡಗಳು ಭರ್ಜರಿ ಪೈಪೋಟಿ ನಡೆಸಲಿವೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಪಂದ್ಯ ಆರಂಭಗೊಳ್ಳಲಿದ್ದು, ಈಗಾಗಲೇ ಕ್ರಿಕೆಟ್​ ಪ್ರಿಯರು ಸೇರಿದಂತೆ ಗಣ್ಯರು ಮೈದಾನದತ್ತ ಆಗಮಿಸಲು ಆರಂಭಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ಪ್ರತಿಯೊಬ್ಬರ ಗಮನ ಇಂದಿನ ಪಂದ್ಯದ ಮೇಲಿದ್ದು, ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋಗಳು ವೈರಲ್ ಆಗುತ್ತಿವೆ.

ಇಂದಿನ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲು ಟೀಂ ಇಂಡಿಯಾ ಫುಲ್ ಫಾರ್ಮ್​​​ನಲ್ಲಿದೆ. ದೇಶಾದ್ಯಂತ ಟೀಂ ಇಂಡಿಯಾಕ್ಕೆ ಆಶೀರ್ವಾದ ಸಿಗುತ್ತಿದೆ. ಎಲ್ಲೆಡೆ ಪೂಜೆ, ಹೋಮ ಹವನ ನಡೆಸಲಾಗುತ್ತಿದೆ. ಭಾರತ ಗೆಲ್ಲಲು ಪ್ರತಿಯೊಬ್ಬ ಪ್ರಜೆ ಪ್ರಾರ್ಥನೆ ಮಾಡುತ್ತಿದ್ದಾರೆ. ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರು ಕ್ರಿಕೆಟ್​​ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಪತ್ನಿ, ಬಾಲಿವುಡ್​​ ನಟಿ ಅನುಷ್ಕಾ ಶರ್ಮಾ ಜೊತೆಗಿನ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇಂದಿನ ಪಂದ್ಯಕ್ಕೆ ಟೀಮ್ ಇಂಡಿಯಾಗೆ ಆಲ್ ದಿ ಬೆಸ್ಟ್ ಎಂದು ತಿಳಿಸಿದ್ದಾರೆ.

ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಬಾಲಿವುಡ್​​ ಬಹುಬೇಡಿಕೆ ನಟಿ ಅನುಷ್ಕಾ ಶರ್ಮಾ ಕಾಣಿಸಿಕೊಂಡಿದ್ದಾರೆ. ಕಂಪ್ಲೀಟ್​ ಬ್ಲ್ಯಾಕ್​ ಡ್ರೆಸ್​​ನಲ್ಲಿ ಕಂಗೊಳಿಸುತ್ತಿದ್ದ ನಟಿಯ ವಿಡಿಯೋವನ್ನು ಪಾಪರಾಜಿಗಳು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ದೃಶ್ಯ ಸಖತ್​ ವೈರಲ್​ ಆಗುತ್ತಿದೆ. ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಕೂಡ ಅಹಮದಾಬಾದ್ ತಲುಪಿ, ಟೀಮ್ ಇಂಡಿಯಾಗೆ ಶುಭ ಹಾರೈಸಿದ್ದಾರೆ. ಭಾರತ-ಪಾಕ್ ಪಂದ್ಯಕ್ಕೂ ಮುನ್ನ ನಡೆಯಲಿರುವ ಸಮಾರಂಭದಲ್ಲಿ ಗಾಯಕ ಅರಿಜಿತ್ ಸಿಂಗ್​​ ತಮ್ಮ ಗಾಯನದಿಂದ ಮೋಡಿ ಮಾಡಲಿದ್ದಾರೆ. ಗಾಯಕ ಕೂಡ ಅಹಮದಾಬಾದ್ ತಲುಪಿದ್ದು, ಇವರೆಲ್ಲರ ಫೋಟೋ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಇದನ್ನೂ ಓದಿ:Salaar VS Dunki: ಒಂದೇ ದಿನ ಶಾರುಖ್​​ - ಪ್ರಭಾಸ್ ಸಿನಿಮಾ ರಿಲೀಸ್​​; ಬಾಕ್ಸ್ ಆಫೀಸ್​ ಪೈಪೋಟಿ ಪಕ್ಕಾ!

ಕ್ರಿಕೆಟ್ ವಿಶ್ವಕಪ್ 2023ರ ಭಾರತ ಮತ್ತು ಪಾಕಿಸ್ತಾನದ ಮೊದಲ ಪಂದ್ಯ ಇಂದು ಮಧ್ಯಾಹ್ನ 2 ಗಂಟೆಗೆ ಆರಂಭ ಆಗಲಿದೆ. ಕಾನ್ಪುರ ಮತ್ತು ಉತ್ತರಾಖಂಡದಲ್ಲಿ ಟೀಂ ಇಂಡಿಯಾ ಗೆಲುವಿಗಾಗಿ ಹೋಮ ಹವನ ನಡೆಸಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋಗಳು ವೈರಲ್​ ಆಗಿವೆ. ದೇಶದ ಹಲವೆಡೆ ಪೂಜೆ, ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ದೇಶವಾಸಿಗಳು ಟೀಂ ಇಂಡಿಯಾಗೆ ಶುಭ ಹಾರೈಸುತ್ತಿದ್ದಾರೆ. ಈಟಿವಿ ಭಾರತ ಪರವಾಗಿಯೂ ಇಂದಿನ ಮಹತ್ವದ ಪಂದ್ಯಕ್ಕೆ ಟೀಂ ಇಂಡಿಯಾಗೆ ಶುಭ ಹಾರೈಕೆಗಳು.

ಇದನ್ನೂ ಓದಿ:''ವಿಕಲತೆ ಮೆಟ್ಟಿ ನಿಂತು ಅದ್ಭುತ ಸಾಧನೆ ಮಾಡಿರುವ ನಿಮಗೆ ನಾವು ಚಿರಋಣಿ'': ಅಶ್ವಿನಿ ಪುನೀತ್ ರಾಜಕುಮಾರ್

ABOUT THE AUTHOR

...view details