ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳ ಕಣ್ಣಿಗೆ ಕಾಣಿಸಿಕೊಂಡಿದ್ದರು. ವಿಹಾರಕ್ಕೆಂದು ವಿದೇಶಕ್ಕೆ ತೆರಳುತ್ತಿದ್ದ ವೇಳೆ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದರು. ಇದೀಗ ಬಾರ್ಬಡೋಸ್ಗೆ ತೆರಳಿರುವ ಸ್ಟಾರ್ ದಂಪತಿ ಪ್ರವಾಸದ ಸುಂದರ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರು ನಗು ಮುಖದಿಂದ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ಸ್ಟಾದಲ್ಲಿ 256 ಮಿಲಿಯನ್ ಫಾಲೋವರ್ಸ್ ಸಂಪಾದಿಸಿರುವ ವಿರಾಟ್ ಕೊಹ್ಲಿ ಅವರು ಪತ್ನಿ ಜೊತೆಗಿನ ಸುಂದರ ಚಿತ್ರವನ್ನು ಶೇರ್ ಮಾಡಿದ್ದಾರೆ. ಈ ಫೋಟೋವು ಕೆರಿಬಿಯನ್ನ ಬಾರ್ಬಡೋಸ್ನಲ್ಲಿರುವ ಕೆಫೆಯೊಂದರಲ್ಲಿ ತೆಗೆದದ್ದಾಗಿದೆ. ವಿರಾಟ್ ಬಿಳಿ ಬಣ್ಣದ ಡಿಸೈನ್ ಶಾರ್ಟ್ಸ್ ಮತ್ತು ಬ್ಲ್ಯಾಕ್ ಟಿ - ಶರ್ಟ್ ಜೊತೆ ಕ್ಯಾಪಿ ಧರಿಸಿದ್ದಾರೆ. ಅನುಷ್ಕಾ ತಿಳಿ ಹಸಿರು ಬಣ್ಣದ ಶಾರ್ಟ್ ಡ್ರೆಸ್ ಹಾಕಿಕೊಂಡಿದ್ದಾರೆ. ಇವರಿಬ್ಬರ ಫೋಟೋಗಳು 30 ಲಕ್ಷಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ.
ಈ ಮೆಮೊರೇಬಲ್ ಮತ್ತು ಅದ್ಭುತ ಫೋಟೋ ಹಂಚಿಕೊಂಡಿರುವ ವಿರಾಟ್, 'ಬಾರ್ಬಡೋಸ್ನ ಅಲಾಮರ್ ಕೆಫೆಗೆ ಬರಬೇಕು. ನಾವು ಕೆಲವು ಅತ್ಯುತ್ತಮ ಭಕ್ಷ್ಯಗಳನ್ನು ತಿಂದು ರುಚಿ ನೋಡಿದ್ದೇವೆ' ಎಂದು ಕ್ಯಾಪ್ಶನ್ ಬರೆದಿದ್ದಾರೆ. ಈ ತಾರಾ ಜೋಡಿಯ ಫೋಟೋದ ಮೇಲೆ ಅಭಿಮಾನಿಗಳು ಪ್ರೀತಿಯ ಸುರಿಮಳೆಯನ್ನೇ ಹರಿಸಿದ್ದಾರೆ. ನೆಟ್ಟಿಗರೊಬ್ಬರು, "ಕಿಂಗ್ ಕ್ವೀನ್ ಹಾರ್ಟ್ ಬೀಟ್" ಎಂದು ಬರೆದಿದ್ದಾರೆ. ಮತ್ತೊಬ್ಬರು, "ಓ ಮೈ ವಿರುಷ್ಕಾ" ಎಂದು ಪ್ರತಿಕ್ರಿಯಿಸಿದ್ದಾರೆ. ಅಭಿಮಾನಿಯೊಬ್ಬರು, "ಅತ್ಯುತ್ತಮ ಜೋಡಿ" ಎಂದು ಕಮೆಂಟ್ ಮಾಡಿದ್ದಾರೆ.