'ಅನಿಮಲ್' ಸಿನಿಮಾ ಉತ್ತಮ ಪ್ರದರ್ಶನ ಮುಂದುವರಿಸಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರದಲ್ಲಿ ರಣ್ಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್, ಬಾಬಿ ಡಿಯೋಲ್, ತೃಪ್ತಿ ದಿಮ್ರಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದು, ಬಾಕ್ಸ್ ಆಫೀಸ್ ಪ್ರಯಾಣ ಅದ್ಭುತವಾಗಿದೆ. ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್ ಅಂಕಿಅಂಶ 400 ಕೋಟಿ ರೂ ಗಡಿ ಸಮೀಪಿಸಿದೆ.
ಅನಿಮಲ್ ಡಿಸೆಂಬರ್ 1 ರಂದು ತೆರೆಗಪ್ಪಳಿಸಿ, ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಭಾರತದಲ್ಲಿ 400 ಕೋಟಿ ರೂ. ಕ್ಲಬ್‌ಗೆ ಪ್ರವೇಶಿಸಲು ಸಿನಿಮಾ ಸಜ್ಜಾಗಿದೆ. ಚಿತ್ರ ಎರಡನೇ ವಾರವೂ ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿಗಟ್ಟುತ್ತಿದೆ.
Sacnilk.com ಮಾಹಿತಿ ಪ್ರಕಾರ, ಅನಿಮಲ್ ಒಂದು ವಾರದಲ್ಲಿ 337.58 ಕೋಟಿ ರೂ. ಕಲೆಕ್ಷನ್ (ಹಿಂದಿ: 300.81 ಕೋಟಿ ರೂ., ತೆಲುಗು: 33.45 ಕೋಟಿ ರೂ., ತಮಿಳು: 2.73 ಕೋಟಿ ರೂ., ಕನ್ನಡ: 52 ಲಕ್ಷ ರೂ., ಮಲಯಾಳಂ: 7 ಲಕ್ಷ ರೂ.) ಮಾಡಿದೆ. ಭಾನುವಾರದ ಕಲೆಕ್ಷನ್ ಮೂಲಕ ಒಟ್ಟು ಕಲೆಕ್ಷನ್ 398.53 ಕೋಟಿ ರೂ. ಆಗುವ ನಿರೀಕ್ಷಿಯಿದೆ. ವಿಶ್ವಾದ್ಯಂತ 660.89 ಕೋಟಿ ರೂ. ಕಲೆಕ್ಷನ್ ಮಾಡಿದೆ.
ಅನಿಮಲ್ ಎರಡನೇ ವಾರಾಂತ್ಯ 400 ಕೋಟಿ ರೂ.ನ ಕ್ಲಬ್ ಪ್ರವೇಶಿಸಿ, 500 ಕೋಟಿ ರೂ. ಮಾರ್ಗದಲ್ಲಿ ದಾಪುಗಾಲು ಹಾಕಲು ಸಜ್ಜಾಗಿದೆ. ಈ ವರ್ಷ ಮೂರು ಬಾಲಿವುಡ್ ಸಿನಿಮಾಗಳು 500 ಕೋಟಿ ರೂಪಾಯಿಗಳ ಗಡಿ ದಾಟಿವೆ. ಪಠಾಣ್, ಗದರ್ 2 ಮತ್ತು ಜವಾನ್ ಈ ಪಟ್ಟಿಯಲ್ಲಿದೆ. ಪಠಾಣ್ ಮತ್ತು ಜವಾನ್ ಎರಡೂ ಕೂಡ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಮುಖ್ಯಭೂಮಿಕೆಯ ಸಿನಿಮಾಗಳು. ಗದರ್ 2 ಸನ್ನಿ ಡಿಯೋಲ್ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾ. ಹತ್ತನೇ ದಿನಕ್ಕೆ (ಭಾನುವಾರ) 13 ಕೋಟಿ ರೂ.ಗೂ ಹೆಚ್ಚು ಮುಂಗಡ ಟಿಕೆಟ್‌ಗಳು ಮಾರಾಟವಾಗಿವೆ.
ಇದನ್ನೂ ಓದಿ:ರಜನಿಕಾಂತ್ರನ್ನು ಬಿಳಿ ಕೂದಲಿನಲ್ಲಿ ತೋರಿಸಬೇಡಿ ಎಂದಿದ್ದರಂತೆ ಫ್ಯಾನ್ಸ್!
ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದ್ದರೂ ಸಿನಿಮಾ ಹಿಂಸಾತ್ಮಕ ಮತ್ತು ತೀವ್ರ ಲೈಂಗಿಕ ದೃಶ್ಯಗಳನ್ನೊಳಗೊಂಡಿದೆ ಎಂದು ಹಲವರು ಟೀಕಿಸಿದ್ದಾರೆ. ಮೇಘನಾ ಗುಲ್ಜಾರ್ ನಿರ್ದೇಶನದ ಸ್ಯಾಮ್ ಬಹದ್ದೂರ್ ಸಹ ಡಿಸೆಂಬರ್ ಒಂದರಂದೇ ತೆರೆಕಂಡು ಸಾಧಾರಣ ಪ್ರದರ್ಶನ ಕಾಣುತ್ತಿದೆ. ಮೂರು ಗಂಟೆ ಇಪ್ಪತ್ತೊಂದು ನಿಮಿಷಗಳ ಅನಿಮಲ್ ಸಿನಿಮಾ ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಿದೆ.
ಇದನ್ನೂ ಓದಿ:2ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ವಿಕ್ಯಾಟ್ ಜೋಡಿ: ರೊಮ್ಯಾಂಟಿಕ್ ಫೋಟೋ ಪೋಸ್ಟ್