ಹೈದರಾಬಾದ್:ಬಹುಭಾಷಾ ನಟಿಯಾಗಿ ಮಿಂಚುತ್ತಿರುವ ಕನ್ನಡತಿ, ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅವರನ್ನು ಒಂದೇ ಪದದಲ್ಲಿ ಹಾಡಿ ಹೊಗಳಿರುವ ನಟ ಅಮಿತಾಬ್ ಬಚ್ಚನ್ ಪೋಸ್ಟ್ವೊಂದನ್ನು ಹರಿಬಿಟ್ಟಿದ್ದಾರೆ. 'ಗುಡ್‌ಬೈ' ಚಿತ್ರದ ಸೆಟ್‌ಗಳಿಂದ ಕಳೆದ ಬುಧವಾರ ರಾತ್ರಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಫೋಟೋ ಹಂಚಿಕೊಂಡಿದ್ದು ಸದ್ಯ ಅಭಿಮಾನಿಗಳು ತರಹೇವಾರಿಯಾಗಿ ಕಾಮೆಂಟ್ ಮಾಡಲಾರಂಭಿಸಿದ್ದಾರೆ.
ಫೋಟೋ ಜೊತೆಗೆ ಬಿಗ್ಬಿ ಅಮಿತಾಬ್ ಬಚ್ಚನ್ 'ಪುಷ್ಪ' ಎಂದು ಬರೆದುಕೊಂಡಿದ್ದನ್ನು ಅಭಿಮಾನಿಗಳು ಗಮನಿಸಿದ್ದಾರೆ. ಅಲ್ಲದೆ 'ಸರ್, ಇವರು ಶ್ರೀವಲ್ಲಿ.. ಪುಷ್ಪ ಅಲ್ಲ' ಎಂದು ಕಾಮೆಂಟ್ ಹಾಕಿದ್ದಾರೆ. ಚಿತ್ರದ ಬಗ್ಗೆ ಸ್ವತಃ ರಶ್ಮಿಕಾ ಮಂದಣ್ಣ ಕೂಡ 'ಸರ್, ನಾವು ತಲೆಬಾಗುವುದಿಲ್ಲ' ಎಂದು ತಮಾಷೆಯ ಕಾಮೆಂಟ್ ಮಾಡಿದ್ದಾರೆ. ಇವರಿಬ್ಬರ ಕಾಮೆಂಟ್ ಚಾಟ್ಗಳು ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಟಾಲಿವುಡ್‌ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ: ದಿ ರೈಸ್’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಶ್ರೀವಲ್ಲಿ' ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಿಡುಗಡೆಯಾಗಿ ಭರ್ಜರಿ ಯಶಸ್ಸು ಗಳಿಸಿದ ಚಿತ್ರ ಇದಾಗಿದ್ದು, ಹಣ ಗಳಿಕೆಯಲ್ಲಿಯೂ ದಾಖಲೆ ಬರೆಯಿತು. ಪುಷ್ಪರಾಜ್ ಆಗಿ ಕಾಣಿಸಿಕೊಂಡಿದ್ದ ಅಲ್ಲು ಅರ್ಜುನ್ ಅವರ ಬಾಡಿ ಲಾಂಗ್ವೇಜ್ ಮತ್ತು ಮ್ಯಾನರಿಸಂ ಭಾರಿ ಸದ್ದು ಮಾಡಿತ್ತು. ಹಾಗೇ, ಅವರ ‘ತಗ್ಗೆದೆ ಲೇ’ ಡೈಲಾಗ್ ಕೂಡ ಪಾಪ್ಯುಲರ್ ಆಗಿದ್ದು, ಕ್ರಿಕೆಟ್ ತಾರೆಯರು ಸೇರಿದಂತೆ ಹಲವರು ಇದನ್ನು ಅನುಕರಣೆ ಮಾಡಿ ಪೋಸ್ಟ್ ಹಾಕಿಕೊಂಡಿದ್ದರು.