ಬಾಲಿವುಡ್ನ ನಟ ರಣ್ಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್ ಸಖತ್ ಫೇಮಸ್ ದಂಪತಿ. ವೃತ್ತಿಜೀವನದಲ್ಲಿ ಸಾಕಷ್ಟು ಹೆಸರು ಮಾಡಿರುವ ಈ ದಂಪತಿಯ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಸಾಕಷ್ಟು ಕಾತುರದಿಂದ ಇರುತ್ತಾರೆ. ಜೂನ್ 27 ರಂದು ಈ ದಂಪತಿ ತಾವು ಶೀಘ್ರದಲ್ಲೇ ಪೋಷಕರಾಗುತ್ತಿದ್ದೇವೆ ಎಂದು ಘೋಷಿಸಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು.
ಇತ್ತೀಚೆಗೆ ನಟಿ ಆಲಿಯಾ ಭಟ್ ಕಿಡ್ಸ್ ವೇರ್ ಬ್ರ್ಯಾಂಡ್ ಒಂದರ ಜಾಹೀರಾತಿನಲ್ಲಿ ಕೆಲಸ ಮಾಡಿದ್ದಾರೆ. ಆಲಿಯಾ ಈ ಜಾಹೀರಾತಿನ ಕೆಲ ನೋಟಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆಲಿಯಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿರುವ ಫೋಟೋ ಒಂದರಲ್ಲಿ ಹಸಿರು ಮತ್ತು ಬೂದು ಬಣ್ಣದ ಟೀ ಶರ್ಟ್ ಧರಿಸಿರುವ ಮಗು ಸ್ವಲ್ಪ ರಣಬೀರ್ ಕಪೂರ್ನಂತೆ ಕಾಣುತ್ತದೆ.
ಅಭಿಮಾನಿಗಳು ಆಲಿಯಾ ಭಟ್ ಅವರ ಪೋಸ್ಟ್ ಅನ್ನು ನೋಡಿ ಕಾಂಪ್ಲಿಮೆಂಟ್ಸ್ಗಳ ಮಳೆ ಸುರಿಸಿದ್ದಾರೆ. ಈ ಮಗು ರಣಬೀರ್ನಂತೆಯೇ ಕಾಣುತ್ತದೆ ಎಂದು ಓರ್ವರು ಬರೆದಿದ್ದಾರೆ, ಒಂದು ಕ್ಷಣಕ್ಕೆ ರಣಬೀರ್ ಕಪೂರ್ ಎಂದೇ ಭಾಸವಾಗುತ್ತದೆ ಎಂದು ಒಬ್ಬರು ಬರೆದಿದ್ದಾರೆ. ಆಲಿಯಾ ಈ ಮಗು ರಣಬೀರ್ ಕಪೂರ್ ತರಹ ಇದೆ ಎಂದು ನಿಮಗೆ ಅನಿಸುತ್ತಿಲ್ಲವೇ ಎಂದು ಮತ್ತೋರ್ವ ಅಭಿಮಾನಿ ಬರೆದಿದ್ದಾರೆ.
ಇದನ್ನೂ ಓದಿ:ಸಡಿಲವಾದ ಉಡುಪಿನಲ್ಲಿ ಕಾಣಿಸಿಕೊಂಡ ಕತ್ರಿನಾ ಕೈಫ್.. ಮತ್ತೆ ಹರಡಿದ ಪ್ರೆಗ್ನೆನ್ಸಿ ವದಂತಿ
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮೊದಲ ಬಾರಿಗೆ ದೊಡ್ಡ ಪರದೆಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಜೋಡಿಯ 'ಬ್ರಹ್ಮಾಸ್ತ್ರ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರ ಇದೇ ವರ್ಷ ಸೆಪ್ಟೆಂಬರ್ 9 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ರಣಬೀರ್ ಮತ್ತು ಆಲಿಯಾ ಈ ಚಿತ್ರದಿಂದ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದ್ದಾರೆ. ಇನ್ನೂ ಇತ್ತೀಚೆಗೆ ಬಿಡುಗಡೆಯಾದ ರಣಬೀರ್ ಕಪೂರ್ ಅವರ ಚಿತ್ರ 'ಶಂಶೇರಾ' ಬಾಕ್ಸ್ ಆಫೀಸ್ನಲ್ಲಿ ದಾಖಲೆ ಬರೆದಿದೆ.