ಬಾಲಿವುಡ್ ಜೋಡಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್, ಮುಂಬೈನ ಏರ್‌ಪೋರ್ಟ್ ಲೌಂಜ್‌ನಲ್ಲಿ ಆಲಿಯಾ ಭಟ್ ಜೊತೆ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆಲಿಯಾ ಲೌಂಜ್‌ಗೆ ಪ್ರವೇಶಿಸುತ್ತಿದ್ದಂತೆ ವಿಕ್ಕಿಯನ್ನು ತಬ್ಬಿಕೊಂಡಿರುವ ದೃಶ್ಯ ವೈರಲ್ ವಿಡಿಯೋದಲ್ಲಿದೆ. ನಂತರ, ಆಲಿಯಾ, ಕತ್ರಿನಾ ಮತ್ತು ವಿಕ್ಕಿ ಟೇಬಲ್ ಸುತ್ತಲೂ ಕುಳಿತು ಪರಸ್ಪರ ಹರಟೆ ಹೊಡೆಯುತ್ತಿರುವುದನ್ನು ಕಾಣಬಹುದು.
ಇನ್‌ಸ್ಟಾಗ್ರಾಮ್‌ನಲ್ಲಿ ಪಾಪರಾಜಿಗಳು ಹಂಚಿಕೊಂಡ ಈ ವೀಡಿಯೊದಲ್ಲಿ, ಬಾಲಿವುಡ್ ದಂಪತಿ ವಿಕ್ಕಿ ಮತ್ತು ಕತ್ರಿನಾ ಬ್ಲ್ಯಾಕ್ ಡ್ರೆಸ್ನಲ್ಲಿ ಕಂಡಿದ್ದಾರೆ. ಆಲಿಯಾ ವರ್ಣರಂಜಿತ ಕ್ರೋಚೆಟ್ ಟಾಪ್‌ನಲ್ಲಿ ಕಂಗೊಳಿಸಿದ್ದಾರೆ. ವೀಡಿಯೊಗೆ ಪ್ರತಿಕ್ರಿಯಿಸಿದ ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು, "ಮೂವರು ಕುಳಿತುಕೊಂಡು ರಣಬೀರ್ ಕಪೂರ್ ಬಗ್ಗೆ ಚರ್ಚಿಸುತ್ತಿದ್ದಾರೆ" ಎಂದು ಹೇಳಿದ್ದಾರೆ. ಮತ್ತೊಬ್ಬರು, "ಆಲಿಯಾ ಅವರೇ ರಣಬೀರ್ ಹೇಗಿದ್ದಾರೆ ಹೇಳಿ" ಎಂದು ಕೇಳಿದ್ದಾರೆ.
ಗುರುವಾರದಂದು ಆಲಿಯಾ ಭಟ್, ಸಾಹೊ ಪೌಲೊದಲ್ಲಿ ನಡೆಯುತ್ತಿರುವ ನೆಟ್ಫ್ಲಿಕ್ಸ್ ಟುಡುಮ್ 2023ರಲ್ಲಿ ಭಾಗಿಯಾಗಲು ಬ್ರೆಜಿಲ್‌ಗೆ ತೆರಳಿದರು. ಇದೇ ವೇಳೆ ಮುಂಬೈ ಏರ್ಪೋರ್ಟ್ನಲ್ಲಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಕಾಣಿಸಿಕೊಂಡರು. ‘ಜರಾ ಹಟ್ಕೆ ಜರಾ ಬಚ್ಕೆ’ಯ ಯಶಸ್ಸಿನ ಪ್ರಚಾರ ಮತ್ತು ಸಂಭ್ರಮಾಚರಣೆಯಲ್ಲಿ ನಿರತರಾಗಿರುವ ವಿಕ್ಕಿ, ಪತ್ನಿ ಕತ್ರಿನಾ ಜೊತೆ ನಿನ್ನೆ ಬಹಿರಂಗಪಡಿಸದ ಸ್ಥಳಕ್ಕೆ ತೆರಳಿದ್ದಾರೆ.
ಇದನ್ನೂ ಓದಿ:Al Pacino: 29ರ ಹರೆಯದ ಗೆಳತಿ ಜೊತೆ ಡೇಟಿಂಗ್.. 83ರ ವಯಸ್ಸಿಗೆ ತಂದೆಯಾದ ಹಾಲಿವುಡ್ ನಟ ಅಲ್ ಪಚಿನೋ