ಬಾಲಿವುಡ್ ಸೂಪರ್ಸ್ಟಾರ್ ಅಕ್ಷಯ್ ಕುಮಾರ್ ಅವರ ಬಹುನಿರೀಕ್ಷಿತ ಸೈಕಲಾಜಿಕಲ್ ಥ್ರಿಲ್ಲರ್ ಕಟ್‌ಪುಟ್ಲಿ ಸಿನಿಮಾ ಸೆಪ್ಟೆಂಬರ್ 2ರಂದು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ.
ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸಿರುವ ಅಕ್ಷಯ್ ಕುಮಾರ್, ತಮ್ಮ ಟ್ವಿಟರ್ ಪೇಜ್ನಲ್ಲಿ ಟೀಸರ್ ಶೇರ್ ಮಾಡಿ, ಕಟ್‌ಪುಟ್ಲಿ ಸಿನಿಮಾ ಬಿಡುಗಡೆ ದಿನಾಂಕ ಮತ್ತು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. "ಈ ಆಟ ಶಕ್ತಿಯದ್ದಲ್ಲ, ಇದು ಮೈಂಡ್ ಗೇಮ್. ಈ ಮೈಂಡ್ ಗೇಮ್ನಲ್ಲಿ ನಾನು ಮತ್ತು ನೀವು..ಎಲ್ಲರೂ" ಎಂದು ಬರೆದು ಸಿನಿಮಾ ಸೆಪ್ಟೆಂಬರ್ 2 ರಂದು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ. ಕಟ್‌ಪುಟ್ಲಿ ಸಿನಿಮಾ ಟ್ರೈಲರ್ ನಾಳೆ ಬಿಡುಗಡೆಯಾಗಲಿದೆ.