ಮನುಷ್ಯ ತಮ್ಮವರೊಂದಿಗೆ ಸದಾ ನಗು ನಗುತ್ತಾ ಸಂತೋಷಕರ ಜೀವನ ಸಾಗಿಸಬೇಕೆಂದು ಸಹಜವಾಗಿ ಹೆಚ್ಚಿನವರು ಹೇಳುತ್ತಾರೆ. ಯಾರೊಬ್ಬರ ಮೊಗದಲ್ಲಿ ನಗು ಮೂಡಿಸುವ ವಿಚಾರದಲ್ಲಿ ಏಪ್ರಿಲ್ ಫೂಲ್ ದಿನವನ್ನು ಹೇಗೆ ತಾನೆ ನಿರ್ಲಕ್ಷಿಸಲು ಸಾಧ್ಯ ಹೇಳಿ. ವಾಸ್ತವವಾಗಿ, ಈ ದಿನದಂದು ಜನರು ತಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ತಮಾಷೆ ಮಾಡುವ ಮೂಲಕ ಆನಂದಿಸುತ್ತಾರೆ. ಹೀಗಿರುವಾಗ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಹಿಂದೆ ಸರಿಯುತ್ತಾರಾ?, ಕಂಡಿತ ಇಲ್ಲ. ಅಕ್ಷಯ್ ಕುಮಾರ್ ಸಾಮಾಜಿಕ ಮಾಧ್ಯಮದಲ್ಲಿ ತಮಾಷೆಯ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ತಮ್ಮ ತಂಡದೊಂದಿಗೆ ತಮಾಷೆ ಮಾಡೋದನ್ನು ನೀವು ನೋಡಬಹುದು
ಇಂದು ನಟ ಅಕ್ಷಯ್ ಕುಮಾರ್ ಅವರು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಕೆಲ ತಮಾಷೆಗಳು ಇಲ್ಲಿವೆ, ಹೇಗನಿಸಿತು ಹೇಳಿ ಎಂದು ಏಪ್ರಿಲ್ ಫೂಲ್ ಡೇ ಎಂಬ ಹ್ಯಾಶ್ ಟ್ಯಾಗ್ನೊಂದಿಗೆ ಬರೆದುಕೊಂಡಿದ್ದಾರೆ. ತಮ್ಮ ಬಟ್ಟೆ ಬ್ರಾಂಡ್ Force IXನ ಸಹ ಸಂಸ್ಥಾಪಕ ಮನೀಶ್ ಮಂಧಾನ ಅವರೊಂದಿಗೆ ತಮಾಷೆ ಮಾಡಿದ್ದಾರೆ. ನಟನ ಪಾದಗಳು ನೆಲದ ಮೇಲೆ ದೃಢವಾಗಿದ್ದವು. ಮನೀಶ್ ಮಂಧಾನ ಅವರಿಗೆ ನಟನನ್ನು ಎತ್ತುವುದು ಅತ್ಯಂತ ಕಷ್ಟಕರವಾಗಿತ್ತು. ಆದಾಗ್ಯೂ, ಅಕ್ಷಯ್ ಕುಮಾರ್ ಮನೀಷ್ ಅವರನ್ನು ಸುಲಭವಾಗಿ ಎತ್ತಿದರು. ಮನೀಶ್ ಮಂಧಾನ ಬೆನ್ನ ಹಿಂದೆ ಮತ್ತೋರ್ವರು ನಿಂತು ಅಕ್ಷಯ್ ಅವರಿಗೆ ಸಹಾಯ ಮಾಡಿದ ಹಿನ್ನೆಲೆ ಮನೀಷ್ ಅವರನ್ನು ಸುಲಭವಾಗಿ ಎತ್ತಲು ಸಾಧ್ಯವಾಯಿತು. ಕೆಲ ಸಮಯದ ಬಳಿಕ ಈ ವಿಚಾರ ಮನೀಷ್ ಅವರಿಗೆ ತಿಳಿದು, ಎಲ್ಲರೂ ನಗೆಗಡಲಲ್ಲಿ ತೇಲಿದರು.
ನಟ ಅಕ್ಷಯ್ ಕುಮಾರ್ ಶೇರ್ ಮಾಡಿರುವ ಈ ವಿಡಿಯೋವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಅಭಿಮಾನಿಗಳ ಜೊತೆಗೆ, ನಟಿ ನೂಪುರ್ ಸನೋನ್ ಕೂಡ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. ಬಹಳ ಚೆನ್ನಾಗಿದೆ ಎಂದು ಬರೆದಿದ್ದಾರೆ.