ಕರ್ನಾಟಕ

karnataka

ETV Bharat / entertainment

ನಟಿ ಶೆಹನಾಜ್​ ಗಿಲ್ ಕಂಠದಲ್ಲಿ ತಾರೋನ್ ಕೆ ಶೆಹರ್ ಹಾಡು.. ಅಭಿಮಾನಿಗಳು ಹೀಗಂದ್ರು - ಶೆಹನಾಜ್​ ಗಿಲ್ ಹಾಡು

ನಟಿ ಶೆಹನಾಜ್​ ಗಿಲ್ ತಾರೋನ್ ಕೆ ಶೆಹರ್ ಹಾಡು ಹಾಡಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

actress Shehnaaz Gill sang Taaron Ke Shehar song
ನಟಿ ಶೆಹನಾಜ್​ ಗಿಲ್ ಕಂಠದಲ್ಲಿ ತಾರೋನ್ ಕೆ ಶೆಹರ್ ಹಾಡು

By

Published : Aug 27, 2022, 3:34 PM IST

ಪಂಜಾಬ್‌ನ ಕತ್ರಿನಾ ಕೈಫ್​ ಎಂದು ಜನಪ್ರಿಯರಾಗಿರುವ ಹಿಂದಿ ಬಿಗ್​ಬಾಸ್​​ ಖ್ಯಾತಿಯ​ ನಟಿ ಶೆಹನಾಜ್ ಗಿಲ್ ಅಭಿನಯ, ತುಂಟಾಟ, ನಡೆನುಡಿಯಿಂದ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಬಗೆ ಬಗೆಯ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುತ್ತಾರೆ. ಇದೀಗ ಹಾಡೊಂದನ್ನು ಹಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಅಭಿಮಾನಿಗಳು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.

ನಟಿ ಶೆಹನಾಜ್ ಗಿಲ್ ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಶೆಹನಾಜ್ ತಾರೋನ್ ಕೆ ಶೆಹರ್ ಹಾಡನ್ನು ಹಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಪ್ರತ್ಯೇಕತೆಯ ನಂತರದ ತೀವ್ರವಾದ ಪ್ರೇಮಕಥೆಯನ್ನು ಈ ಹಾಡು ಬಿಂಬಿಸುತ್ತದೆ. 2020ರಲ್ಲಿ ಟಿ-ಸೀರೀಸ್ ಬಿಡುಗಡೆ ಮಾಡಿದ ಈ ಹಾಡನ್ನು ಜಾನಿ ಬರೆದು, ಸಂಯೋಜಿದ್ದಾರೆ. ನೇಹಾ ಕಕ್ಕರ್ ಮತ್ತು ಸನ್ನಿ ಕೌಶಲ್ ಅಭಿನಯಿದ್ದಾರೆ. ನೇಹಾ ಕಕ್ಕರ್ ಮತ್ತು ಜುಬಿನ್ ನೌತಿಯಾಲ್ ಧ್ವನಿ ನೀಡಿದ್ದಾರೆ.

ಶೆಹನಾಜ್ ವಿಡಿಯೋ ಶೇರ್ ಮಾಡುತ್ತಿದ್ದಂತೆ ಕಮೆಂಟ್​ ವಿಭಾಗ ಸದ್ದು ಮಾಡಲು ಆರಂಭಿಸಿತು. ನಿಮ್ಮ ಧ್ವನಿ ಯಾವಾಗಲೂ ನನ್ನ ಹೃದಯ ಸ್ಪರ್ಶಿಸುತ್ತದೆಯೆಂದು ಓರ್ವರು ಹೇಳಿದ್ದರೆ, ಮತ್ತೊಬ್ಬರು ತುಂಬಾ ಹಿತವಾದ ಧ್ವನಿ ಎಂದು ತಿಳಿಸಿದ್ದಾರೆ. ದಿ. ಸಿದ್ಧಾರ್ಥ್ ಶುಕ್ಲಾ ಅವರೊಂದಿಗಿದ್ದ ಪ್ರೀತಿಯನ್ನು ಅಭಿಮಾನಿಗಳು ಈ ಹಾಡಿಗೆ ಹೋಲಿಸಿದ್ದಾರೆ.

ಇದನ್ನೂ ಓದಿ:ಸೆ.2ಕ್ಕೆ ಹೈದರಾಬಾದ್​ನಲ್ಲಿ ಬ್ರಹ್ಮಾಸ್ತ್ರ ಪ್ರೀ ರಿಲೀಸ್ ಈವೆಂಟ್.. ಜೂ. ಎನ್​ಟಿಆರ್ ಭಾಗಿ​

ಸಲ್ಮಾನ್ ಖಾನ್ ಅಭಿನಯದ ಕಬಿ ಈದ್ ಕಬಿ ದೀಪಾವಳಿ ಚಿತ್ರದ ಮೂಲಕ ಶೆಹನಾಜ್ ಬಾಲಿವುಡ್‌ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಇತ್ತೀಚೆಗೆ ಶೆಹನಾಜ್​ರನ್ನು ಚಿತ್ರದಿಂದ ಹೊರಹಾಕಲಾಗಿದೆ ಎಂಬ ವರದಿಗಳನ್ನು ಇತ್ತಿಚೆಗೆ ನಟಿ ತಳ್ಳಿಹಾಕಿದ್ದರು. ಶೆಹನಾಜ್ ಈ ಚಿತ್ರದಲ್ಲಿ ರಾಘವ್ ಜುಯಲ್ ಅವರಿಗೆ ಜೋಡಿಯಾಗಿದ್ದಾರೆ.

ABOUT THE AUTHOR

...view details