ಕರ್ನಾಟಕ

karnataka

ETV Bharat / entertainment

2ನೇ ಮಗುವಿನ ನಿರೀಕ್ಷೆಯಲ್ಲಿ ವಿರುಷ್ಕಾ ಜೋಡಿ? ಕುತೂಹಲಕ್ಕೆ ಕಾರಣವಾದ ಈ ವಿಡಿಯೋ - ಅನುಷ್ಕಾ ಶರ್ಮಾ ಪ್ರೆಗ್ನೆಂಟ್

Anushka Sharma's Pregnancy speculations: 'ವಿರುಷ್ಕಾ' ಜೋಡಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ವದಂತಿ ಹರಡಿದೆ.

Virushka couple
ವಿರುಷ್ಕಾ ಜೋಡಿ

By ETV Bharat Karnataka Team

Published : Nov 10, 2023, 9:56 AM IST

Updated : Nov 10, 2023, 10:03 AM IST

ಬಾಲಿವುಡ್​​ ನಟಿ ಅನುಷ್ಕಾ ಶರ್ಮಾ ಎರಡನೇ ಮಗುವಿಗೆ ತಾಯಿಯಾಗುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದೆ. ಈ ಸುದ್ದಿಯನ್ನು ತಾರಾ ದಂಪತಿ ಖಚಿತಪಡಿಸಿಲ್ಲ. ಆದ್ರೀಗ ವಿರುಷ್ಕಾ ಜೋಡಿಯ ವಿಡಿಯೋವೊಂದು ಆನ್​​ಲೈನ್​ನಲ್ಲಿ ಕಾಡ್ಗಿಚ್ಚಿನಂತೆ ವೈರಲ್​ ಆಗಿದೆ. ಇದರಲ್ಲಿ ಅನುಷ್ಕಾ ಶರ್ಮಾ ಪ್ರೆಗ್ನೆಂಟ್​ ಎಂಬುದು ನೆಟ್ಟಿಗರ ಗುಮಾನಿ.

ಹಿಂದಿ ಚಿತ್ರರಂಗದ ಜನಪ್ರಿಯ ಅಭಿನೇತ್ರಿ ಅನುಷ್ಕಾ ಶರ್ಮಾ ಅವರು ಪತಿ, ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರೊಂದಿಗೆ ಬೆಂಗಳೂರಿನಲ್ಲಿ ನಡೆದು ಹೋಗುತ್ತಿರುವ ವಿಡಿಯೋ ಇದಾಗಿದೆ. ಫ್ರಾಕ್​​ ಹೋಲುವ ಸಡಿಲ ಕಪ್ಪುಡುಗೆ ಧರಿಸಿದ್ದು, ಬೇಬಿ ಬಂಪ್​​​​​ನಂತೆ ಗೋಚರಿಸಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು, ನೆಟ್ಟಿಗರು ಅನುಷ್ಕಾ ಶರ್ಮಾ ಗರ್ಭಿಣಿಯೇ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರಿನಿಂದ ಪವರ್​ಫುಲ್​ ಕಪಲ್​ನ ವಿಡಿಯೋ ವೈರಲ್​​ ಆಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು ಇವರ ಬಗ್ಗೆ ತಿಳಿದುಕೊಳ್ಳಲು ಕಾತರರಾಗಿರುತ್ತಾರೆ. ಅದರಂತೆ, ಸದ್ಯ ವೈರಲ್​ ಆಗಿರುವ ವಿಡಿಯೋ ಕೂಡ ಹೆಚ್ಚಿನ ಸಂಖ್ಯೆಯ ಫ್ಯಾನ್ಸ್, ನೆಟ್ಟಿಗರ ಗಮನ ಸೆಳೆದಿದೆ.

ವಿರಾಟ್​ ಕೊಹ್ಲಿ ಬೂದು ಬಣ್ಣದ ಟೀ ಶರ್ಟ್, ಬೀಜ್ ಪ್ಯಾಂಟ್, ವೈಟ್​​ ಶೂಸ್, ಗ್ಲಾಸ್, ಕ್ಯಾಪ್​​ ಧರಿಸಿ ಎಂದಿನಂತೆ ಸಿಂಪ್ಲಿ ಸ್ಟೈಲಿಶ್​​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅನುಷ್ಕಾ ಶರ್ಮಾ ಲಾಂಗ್​​ ಸ್ಲೀವ್ಸ್​​ ಇರುವ ಬ್ಲ್ಯಾಕ್​​ ಲೂಸ್ ಫ್ರಾಕ್​​​, ಫ್ಯಾಟ್​ ಸ್ಲಿಪ್ಪರ್​​ ಧರಿಸಿದ್ದರು. ನಾಜೂಕಿನಿಂದ ಹೆಜ್ಜೆ ಇಡುತ್ತಿದ್ದ ನಟಿಯ ಮೊಗ ಕಂಗೊಳಿಸುತ್ತಿತ್ತು. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುವ ನೆಟ್ಟಿಗರು ವಿರುಷ್ಕಾ ಜೋಡಿ ಶೀಘ್ರದಲ್ಲೇ ಮತ್ತೊಂದು ಮಗುವನ್ನು ಸ್ವಾಗತಿಸಲಿದ್ದಾರೆ ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ:ಬಹುನಿರೀಕ್ಷಿತ 'ಸಲಾರ್​' ಚಿತ್ರದ ಟ್ರೇಲರ್​ ಬಿಡುಗಡೆಗೆ ಮುಹೂರ್ತ ಫಿಕ್ಸ್​

ವರದಿಗಳ ಪ್ರಕಾರ, ಒಂದೆರಡು ವಾರಗಳ ಹಿಂದೆ ಮುಂಬೈನ ಮೆಟರ್ನಿಟಿ ಕ್ಲಿನಿಕ್​ (ಹೆರಿಗೆ ಆಸ್ಪತ್ರೆ) ಹೊರಗೆ ವಿರುಷ್ಕಾ ಜೋಡಿಯನ್ನು ಪಾಪರಾಜಿಗಳು ಗುರುತಿಸಿದ್ದರು. ಅನುಷ್ಕಾ ಮತ್ತು ವಿರಾಟ್ ಯಾವಾಗಲೂ ತಮ್ಮ ಖಾಸಗಿ ಜೀವನದ ಬಗ್ಗೆ ಹೆಚ್ಚು ಜಾಗರೂಕರಾಗಿರುತ್ತಾರೆ. ಸೂಕ್ತ ಸಮಯದಲ್ಲಿ ಸೂಕ್ತ ವಿಷಯಗಳನ್ನಷ್ಟೇ ಹಂಚಿಕೊಳ್ಳುತ್ತಾರೆ. ಸರಿಯಾದ ಸಮಯದಲ್ಲಿ ಅಧಿಕೃತ ಘೋಷಣೆ ಮಾಡುವ ಭರವಸೆ ನೀಡುವ ಮೂಲಕ ದಂಪತಿಗಳು ಪಾಪರಾಜಿಗಳ ಬಳಿ ಫೋಟೋ, ವಿಡಿಯೋ ಕ್ಲಿಕ್ಕಿಸದಂತೆ ವಿನಂತಿಸಿದ್ದಾರೆ ಎಂದು ಕೂಡ ವರದಿಯಾಗಿದೆ. ಜನಪ್ರಿಯ ದಂಪತಿ ಎರಡನೇ ಮಗುವಿನ ಫೋಷಕರಾಗುತ್ತಿರುವ ವಿಚಾರವನ್ನು ಹೇಗೆ ಘೋಷಿಸುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಸದ್ಯ ವಾಮಿಕಾ ಎಂಬ ಏಕೈಕ ಪುತ್ರಿಯ ಪೋಷಕರಿವರು.

ಇದನ್ನೂ ಓದಿ:ಸಲ್ಮಾನ್ ಖಾನ್​​ ನಡೆಸಿಕೊಡುವ ಬಿಗ್​ ಬಾಸ್​ಗೆ ಕತ್ರಿನಾ ಕೈಫ್ ಎಂಟ್ರಿ: ಟೈಗರ್​ 3 ಪ್ರಮೋಶನ್

ಅನುಷ್ಕಾ ಶರ್ಮಾ ಕಳೆದ ಕೆಲ ಸಮಯದಿಂದ ಸಿನಿಮಾಗಳಿಂದ ದೂರವೇ ಉಳಿದಿದ್ದಾರೆ. ಮೊದಲ ಗರ್ಭಧಾರಣೆ ವಿಚಾರ ಘೋಷಿಸಿದಾಗಿನಿಂದ ಯಾವುದೇ ಚಿತ್ರಗಳು ಬಿಡುಗಡೆ ಆಗಿಲ್ಲ. ಚಕ್ಡಾ ಎಕ್ಸ್‌ಪ್ರೆಸ್‌ ಸಿನಿಮಾ ಬಿಡುಗಡೆ ಆಗಬೇಕಷ್ಟೇ. ಐದು ವರ್ಷಗಳ ವಿರಾಮದ ನಂತರ ಬಿಗ್​ ಸ್ಕ್ರೀನ್​ಗೆ ಚಕ್ಡಾ ಎಕ್ಸ್‌ಪ್ರೆಸ್‌ ಮೂಲಕ ಮರಳುತ್ತಿದ್ದಾರೆ. ಎರಡನೇ ಮಗು ವಿಚಾರ ಅಧಿಕೃತವಾದರೆ, ಮತ್ತಷ್ಟು ಸಮಯ ವಿರಾಮ ಪಡೆಯಲಿದ್ದಾರೆ.

Last Updated : Nov 10, 2023, 10:03 AM IST

ABOUT THE AUTHOR

...view details