ಕನ್ನಡ ಚಿತ್ರರಂಗದಲ್ಲಿ ಕಿರುತೆರೆಯಿಂದ ಸಿನಿ ಜರ್ನಿ ಆರಂಭಿಸಿದ ಚಂದವನದದ ಗೊಂಬೆ ಅದಿತಿ ಪ್ರಭುದೇವ ತಮ್ಮ ಮದುವೆ ಸಂಭ್ರಮದಲ್ಲಿದ್ದಾರೆ. ಅಭಿನಯ, ಫೊಟೋಶೂಟ್ ಜೊತೆಗೆ ನಡೆ-ನುಡಿಯಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ನಟಿ ಅದಿತಿ ಪ್ರಭುದೇವ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಅರಮನೆ ಮೈದಾನದಲ್ಲಿ ಈಗಾಗಲೇ ಅರಶಿಣ ಶಾಸ್ತ್ರ ನಡೆದಿದೆ. ಇಂದು ಮಹೆಂದಿ ಮತ್ತು ವರ ಪೂಜೆ ನಡೆದಿದೆ. ನಾಳೆ ಮದುವೆ ಸಂಭ್ರಮ ಜರುಗಲಿದ್ದು, ಶಾಸ್ತ್ರಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಯಶಸ್ (ಯಶಸ್ವಿ) ಎಂಬ ಉದ್ಯಮಿಯ ಕೈಹಿಡಿಯಲಿದ್ದು, ಮದುವೆ ಶಾಸ್ತ್ರಗಳು ಭರ್ಜರಿಯಾಗಿ ನಡೆಯುತ್ತಿದೆ. ತಂದೆ - ತಾಯಿ ನೋಡಿದ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಈಟಿವಿ ಭಾರತಕ್ಕೆ ಈ ಮೊದಲು ಸ್ವತಃ ನಟಿಯೇ ತಿಳಿಸಿದ್ದರು.