ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಗಂಧದ ಗುಡಿ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಈ ಚಿತ್ರವನ್ನು ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ, ಮೋಹಕ ತಾರೆ ರಮ್ಯಾ, ಕಿರಿಕ್ ಪಾರ್ಟಿ ರಕ್ಷಿತ್ ಶೆಟ್ಟಿ, ನೆನಪಿರಲಿ ಪ್ರೇಮ್, ಕಾಂತಾರ ರಿಷಬ್ ಶೆಟ್ಟಿ, ಅಭಿಷೇಕ್ ಅಂಬರೀಶ್ ಹೀಗೆ ಕನ್ನಡ ಚಿತ್ರರಂಗದ ಬಹುತೇಕ ತಾರೆಯರು ನೋಡಿ ಮೆಚ್ಚಿಕೊಂಡಿದ್ದಾರೆ. ಇದೀಗ ಶಿವಮೊಗ್ಗದಲ್ಲಿ 'ಮಾದೇವ' ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ನಟ ವಿನೋದ್ ಪ್ರಭಾಕರ್ ಅವರು ತಮ್ಮ ಇಡೀ ಚಿತ್ರ ತಂಡದೊಂದಿಗೆ "ಗಂಧದ ಗುಡಿ" ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
'ಗಂಧದ ಗುಡಿ' ವೀಕ್ಷಿಸಿದ ಮಾದೇವ ಚಿತ್ರತಂಡ ಗಂಧದ ಗುಡಿ ಚಿತ್ರವನ್ನು ಬಿಡುಗಡೆಯ ದಿನದಂದೇ ಮೊದಲ ಶೋ ವೀಕ್ಷಿಸಬೇಕೆಂದುಕೊಂಡಿದ್ದೆ. ಚಿತ್ರೀಕರಣದ ನಿಮಿತ್ತ ಅಕ್ಟೋಬರ್ 27ರಂದು ಶಿವಮೊಗ್ಗಕ್ಕೆ ಬಂದೆ. ಇದೀಗ ನಾನು ಈ ಚಿತ್ರವನ್ನು "ಮಾದೇವ" ಚಿತ್ರತಂಡದ 120 ಸದಸ್ಯರೊಡನೆ ನೋಡಿದೆ. ಮನಸ್ಸಿಗೆ ಹತ್ತಿರವಾದ ಚಿತ್ರವಿದು. ಪುನೀತ್ ಸರ್ ಚಿತ್ರದುದ್ದಕ್ಕೂ ನೀಡಿರುವ ಸಂದೇಶಗಳು ನನ್ನ ಮನಸ್ಸಿನಲ್ಲಿ ಹಾಗೇ ಇದೆ. ಅಮೋಘವರ್ಷ ಅವರ ನಿರ್ದೇಶನ ಬಹಳ ಅಮೋಘವಾಗಿದೆ. ನನ್ನ ತಂದೆ ಪ್ರಭಾಕರ್ ಅವರು ಅಣ್ಣವ್ರ ಜೊತೆ ಆ "ಗಂಧದ ಗುಡಿ"ಯಲ್ಲಿ ನಟಿಸಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲು ಇಷ್ಟ ಪಡುತ್ತೇನೆ ಎಂದರು.
'ಗಂಧದ ಗುಡಿ' ವೀಕ್ಷಿಸಿದ ಮಾದೇವ ಚಿತ್ರತಂಡ ಇದನ್ನೂ ಓದಿ:ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿರುವ ಪವರ್ ಸ್ಟಾರ್ ಕನಸಿನ ಚಿತ್ರ
ಇಂತಹ ಉತ್ತಮ ಚಿತ್ರ ನಿರ್ಮಿಸಿರುವ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರಿಗೆ ಅಭಿನಂದನೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ನೋಡುವ ಅದ್ಭುತ ಚಿತ್ರವಿದು ಎಂದು ವಿನೋದ್ ಪ್ರಭಾಕರ್ ಅಭಿಪ್ರಾಯ ವ್ಯಕ್ತಪಡಿಸಿದರು.