ಕರ್ನಾಟಕ

karnataka

ETV Bharat / entertainment

ಮಹಾರಾಷ್ಟ್ರ ಸಿಎಂ ಭೇಟಿ ಮಾಡಿದ ನಟ ರಾಮ್​​ ಚರಣ್​​ ಕುಟುಂಬ - Maharashtra CM Eknath Shinde

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ರಾಮ್​​ ಚರಣ್ ಭೇಟಿಯಾಗಿದ್ದಾರೆ.

Actor Ram Charan's family with Maharashtra CM Eknath Shinde
ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಜೊತೆ ನಟ ರಾಮ್​​ ಚರಣ್​​ ಕುಟುಂಬ

By ETV Bharat Karnataka Team

Published : Dec 23, 2023, 11:00 AM IST

Updated : Dec 23, 2023, 11:33 AM IST

ವಿಶ್ವ ಪ್ರತಿಷ್ಟಿತ 'ಆಸ್ಕರ್' ಪ್ರಶಸ್ತಿ ವಿಜೇತ ಸಿನಿಮಾ 'ಆರ್​ಆರ್​ಆರ್​' ಖ್ಯಾತಿಯ ನಟ ರಾಮ್ ಚರಣ್ ಕಳೆದ ಕೆಲ ದಿನಗಳಿಂದ ಮುಂಬೈನಲ್ಲಿದ್ದಾರೆ. ಕೆಲ ದಿನಗಳ ಹಿಂದೆ ಮುಂಬೈನಲ್ಲಿ ಪತ್ನಿ, ಪುತ್ರಿಯನ್ನು ಬರಮಾಡಿಕೊಳ್ಳುತ್ತಿರುವ ವಿಡಿಯೋ ವೈರಲ್​ ಆಗಿತ್ತು. ಬಳಿಕ ಮಹಾಲಕ್ಷ್ಮಿ ಸನ್ನಿಧಿಯಲ್ಲಿ ಮಡದಿ, ಮಗಳೊಂದಿಗೆ ಕಾಣಿಸಿಕೊಂಡಿದ್ದರು.

ಶುಕ್ರವಾರದಂದು ರಾಜಕೀಯ ಗಣ್ಯರನ್ನು ಭೇಟಿಯಾಗಿರುವ ಫೋಟೋ ಹಂಚಿಕೊಂಡು ಗಮನ ಸೆಳೆದಿದ್ದಾರೆ. ಹೌದು, ನಿನ್ನೆ ನಟ ರಾಮ್​ ಚರಣ್​​ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಅವರ ಕುಟುಂಬದೊಂದಿಗೆ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಸೂಪರ್​ ಸ್ಟಾರ್ ರಾಮ್​ ಚರಣ್​​ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ. ''ಆತ್ಮೀಯ ಗೌರವಾನ್ವಿತ ಮುಖ್ಯಮಂತ್ರಿ ಗಾರು, ಶ್ರೀಕಾಂತ್ ಶಿಂಧೆ ಗಾರು ಮತ್ತು ಮಹಾರಾಷ್ಟ್ರದ ಜನತೆ, ನಿಮ್ಮ ಅಸಾಧಾರಣ ಆತಿಥ್ಯ ಮತ್ತು ಪ್ರೀತಿಗಾಗಿ ನಾವು ಹೃತ್ಪೂರ್ವಕ ಕೃತಜ್ಞತೆ ವ್ಯಕ್ತಪಡಿಸುತ್ತೇವೆ'' ಎಂದು ಬರೆದುಕೊಂಡಿದ್ದಾರೆ. ಸಿಎಂ ಏಕನಾಥ್ ಶಿಂಧೆ ಕುಟುಂಬದೊಂದಿಗೆ ರಾಮ್​​ ಚರಣ್​ ಮತ್ತು ಪತ್ನಿ ಉಪಾಸನಾ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಶೇರ್ ಮಾಡಿರುವ ಫೋಟೋದಲ್ಲಿ, ರಾಮ್ ಚರಣ್ ಪತ್ನಿ ಉಪಾಸನಾ ಅವರ ಜೊತೆ ಇದ್ದು, ಮುಖ್ಯಮಂತ್ರಿ ಅವರೊಂದಿಗೆ ಹೃತ್ಪೂರ್ವಕ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿರುವುದನ್ನು ಕಾಣಬಹುದು. ಆರ್​ಆರ್​ಆರ್​ ಸ್ಟಾರ್ ಬ್ಲ್ಯಾಕ್​ ಪ್ಯಾಂಟ್‌, ಬ್ಲ್ಯೂ ಡೆನಿಮ್ ಶರ್ಟ್ ಧರಿಸಿ ಕ್ಯಾಶುವಲ್​ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಉಪಾಸನಾ ವೈಟ್​​ ಡ್ರೆಸ್​ನಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.

ರಾಮ್​​​ ಚರಣ್​ ಫೋಟೋ ಹಂಚಿಕೊಳ್ಳುತ್ತಿದ್ದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಪ್ರತಿಕ್ರಿಯೆ ಕೊಡಲಾರಂಭಿಸಿದ್ದಾರೆ. ಫೈಯರ್, ರೆಡ್​ ಹಾರ್ಟ್ ಎಮೋಜಿಗಳೊಂದಿಗೆ ಮೆಚ್ಚಿನ ನಟನಿಗೆ ಪ್ರೀತಿಯ ಧಾರೆಯೆರೆಯುತ್ತಿದ್ದಾರೆ. ಅಭಿಮಾನಿಯೊಬ್ಬರು "ನಮ್ಮ ಐಡಲ್​​ ಆರ್‌ಸಿ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವರು, "ನನ್ನ ಮೆಚ್ಚಿನ ವ್ಯಕ್ತಿ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:'ಸಲಾರ್' ಸಿನಿಮಾದಲ್ಲಿ ಕನ್ನಡಿಗರ ದರ್ಬಾರ್; ಹೊಂಬಾಳೆ ಫಿಲ್ಮ್ಸ್​ಗೆ ದೊಡ್ಡ ಗೆಲುವು

ರಾಮ್ ಚರಣ್ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಗೇಮ್ ಚೇಂಜರ್'. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದೆ. ಸಾಹಸ ಸಿನಿಮಾದಲ್ಲಿ ಆರ್​ಆರ್​ಆರ್​ ನಟನೊಂದಿಗೆ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಶಂಕರ್ ನಿರ್ದೇಶನದ ಸಿನಿಮಾ ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಆರ್​ಆರ್​ಆರ್ ಚಿತ್ರದಲ್ಲಿ ಅಮೋಘ ಅಭಿನಯದ ಮೂಲಕ ಗಮನ ಸೆಳೆದಿರುವ ನಟ ರಾಮ್​​ ಚರಣ್​ ಅವರ ಮುಂದಿನ ಚಿತ್ರಗಲ ಮೇಲೆ ಪ್ರೇಕ್ಷಕರ ನಿರೀಕ್ಷೆ ಸಾಕಷ್ಟಿದೆ.

ಇದನ್ನೂ ಓದಿ:ಮೊದಲ ದಿನವೇ 175 ಕೋಟಿ ಗಳಿಸಿದ 'ಸಲಾರ್​'; ಬಾಕ್ಸ್ ಆಫೀಸ್ ದಾಖಲೆ ಉಡೀಸ್​!

Last Updated : Dec 23, 2023, 11:33 AM IST

ABOUT THE AUTHOR

...view details