ಕರ್ನಾಟಕ

karnataka

ETV Bharat / entertainment

'RRR' ಸ್ಟಾರ್ ಪುತ್ರಿಗೆ 'KKK' ಹೆಸರು: 'ಮೆಗಾ​ ಪ್ರಿನ್ಸೆಸ್'​​​ ಹೆಸರಲ್ಲಿದೆ ವಿಶೇಷತೆ! - ಆರ್​ಆರ್​ಆರ್​ ಸ್ಟಾರ್​ ರಾಮ್​ಚರಣ್​

ನಟ ರಾಮ್​ಚರಣ್​ ಮತ್ತು ಉಪಾಸನಾ ಕಾಮಿನೇನಿ ದಂಪತಿಯ ಪುತ್ರಿಗೆ 'ಕ್ಲಿಂ ಕಾರ ಕೊನಿಡೇಲಾ' ಎಂದು ನಾಮಕರಣ ಮಾಡಲಾಗಿದೆ.

klin kaara konidela
ಮೆಗಾ​ ಪ್ರಿನ್ಸೆಸ್

By

Published : Jun 30, 2023, 5:58 PM IST

Updated : Jul 1, 2023, 4:45 PM IST

ಆರ್​ಆರ್​ಆರ್​ ಸ್ಟಾರ್​ ರಾಮ್​ಚರಣ್​ ಮತ್ತು ಉಪಾಸನಾ ಕಾಮಿನೇನಿ ದಂಪತಿ ಮದುವೆಯಾದ 11 ವರ್ಷಗಳ ಬಳಿಕ ಪೋಷಕರಾಗಿದ್ದಾರೆ. ಜೂನ್​ 20ರ ರಾತ್ರಿ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗಾಗಲೇ ಸ್ಟಾರ್ ದಂಪತಿಯ ಇಡೀ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಇಂದು ಮಗುವಿನ ನಾಮಕರಣ ಕೂಡ ಅದ್ದೂರಿಯಾಗಿ ನಡೆದಿದೆ. ರಾಮ್ ಚರಣ್ ಮತ್ತು ಉಪಾಸನಾ ದಂಪತಿಯ ಮಗುವಿಗೆ 'ಕ್ಲಿಂ ಕಾರ ಕೊನಿಡೇಲಾ' ಎಂದು ಹೆಸರಿಡಲಾಗಿದೆ.

ಮೆಗಾ ಪ್ರಿನ್ಸೆಸ್ ಹೆಸರಲ್ಲಿದೆ ವಿಶೇಷತೆ:​'ಕ್ಲಿಂ​ ಕಾರ ಕೊನಿಡೇಲಾ' ಹೆಸರು ಕೇಳುವಾಗ ವಿದೇಶಿ ಹೆಸರಿನಂತೆ ಭಾಸವಾಗುತ್ತದೆ. ಆದರೆ ಈ ಹೆಸರಿನ ಹಿಂದೆ ಒಂದು ವಿಶೇಷ ಅರ್ಥವಿದೆ. 'ಕ್ಲಿಂ​ ಕಾರ' ಎಂಬ ಹೆಸರನ್ನು ಲಲಿತಾ ಸಹಸ್ರನಾಮದಿಂದ ತೆಗೆದುಕೊಂಡಿದ್ದಾರಂತೆ. ಈ ವಿಚಾರವನ್ನು ಸ್ವತಃ ಉಪಾಸನಾ ಕಾಮಿನೇನಿ ಸೋಷಿಯಲ್​ ಮೀಡಿಯಾಲ್ಲಿ ಹಂಚಿಕೊಂಡಿದ್ದಾರೆ.

"ಕ್ಲಿಂ​ ಕಾರ ಹೆಸರು ಆಧ್ಯಾತ್ಮಿಕ ಜಾಗೃತಿಯನ್ನು ತರುವ ಪರಿವರ್ತಕ ಹಾಗೂ ಶುದ್ಧೀಕರಿಸುವ ಶಕ್ತಿಯನ್ನು ಸೂಚಿಸುತ್ತದೆ" ಎಂದು ಹೇಳಿದ್ದಾರೆ. ಜೊತೆಗೆ ಮಗುವಿನ ಅಜ್ಜ- ಅಜ್ಜಿಯರಿಗೆ ಧನ್ಯವಾದದ ಪ್ರೀತಿಯನ್ನು ಅರ್ಪಿಸಿದ್ದಾರೆ. ರಾಮ್​ಚರಣ್​- ಉಪಾಸನಾ ಕುಟುಂಬದ ಎಲ್ಲರೂ ಕೂಡ ಮಗುವಿನ ನಾಮಕರಣ ಕಾರ್ಯಕ್ರಮದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಮೆಗಾ ಪ್ರಿನ್ಸೆಸ್​ಗೆ ಮೆಗಾ ಕುಟುಂಬದ ಅಭಿಮಾನಿಗಳು ಪ್ರೀತಿಯ ಸುರಿಮಳೆಗೈದಿದ್ದಾರೆ. ಸದ್ಯ 'ಕ್ಲಿಂ ಕಾರ ಕೊನಿಡೇಲಾ' ಹೆಸರು ಟ್ರೆಂಡಿಂಗ್​ನಲ್ಲಿದೆ.

ರಾಮ್​ಚರಣ್​ ಮತ್ತು ಉಪಾಸನಾ ದಂಪತಿ ಮಗುವಿಗೆ ಉದ್ಯಮಿ ಮುಖೇಶ್​ ಅಂಬಾನಿ ಕುಟುಂಬ ಚಿನ್ನದ ತೊಟ್ಟಿಲು ನೀಡಿದ್ದಾರೆ ಎನ್ನಲಾಗಿತ್ತು. ಅಲ್ಲದೇ ಅದೇ ತೊಟ್ಟಿಲಿನಲ್ಲಿ ಮಗುವಿನ ನಾಮಕರಣ ಕೂಡ ಮಾಡಲಾಗಿದೆ ಎಂದು ಹೇಳಲಾಗಿತ್ತು. ಆದರೆ ಈ ಸುದ್ದಿ ಕೇವಲ ವದಂತಿ ಎಂಬುದಾಗಿ ರಾಮ್​ಚರಣ್​ ಮತ್ತು ತಂಡ ಸ್ಪಷ್ಟನೆ ನೀಡಿದ್ದಾರೆ. ಪ್ರಜ್ವಲ ಫೌಂಡೇಶನ್ ಸಿದ್ಧಪಡಿಸಿದ ಮರದ ತೊಟ್ಟಿಲಿನಲ್ಲೇ ಮೆಗಾ ಪ್ರಿನ್ಸೆಸ್​ ನಾಮಕರಣ ನಡೆದಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:ವಿಡಿಯೋ: ತಂದೆಯಾದ ಖುಷಿ ವ್ಯಕ್ತಪಡಿಸಿ​, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ರಾಮ್‌ ಚರಣ್

ಪ್ರಜ್ವಲ ಫೌಂಡೇಶನ್​ನಿಂದ ತೊಟ್ಟಿಲು ಉಡುಗೊರೆ: ಗರ್ಭಾವಸ್ಥೆಯ ಕ್ಷಣಗಳನ್ನು ಆನಂದಿಸುತ್ತಿರುವಾಗಲೇ ಈ ಜೋಡಿಗೆ ವಿಶೇಷ ಉಡುಗೊರೆಯೊಂದು ಸಿಕ್ಕಿತ್ತು. ಹುಟ್ಟುವ ಮಗುವಿಗೆ ಪ್ರಜ್ವಲ ಫೌಂಡೇಶನ್ ಸುಂದರವಾದ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿತ್ತು. ಉಪಾಸನಾ ಈ ತೊಟ್ಟಿಲಿನ ಮಹತ್ವವನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಲೈಂಗಿಕ ಕಳ್ಳಸಾಗಣೆ ಕೂಪದಿಂದ ಹೊರಬಂದ ಮಹಿಳೆಯರಿಗೆ ಆಶ್ರಯ ನೀಡುವ ಪ್ರಜ್ವಲ ಫೌಂಡೇಶನ್​ ಈ ತೊಟ್ಟಿಲನ್ನು ತಮಗೆ ಉಡುಗೊರೆಯಾಗಿ ನೀಡಿದೆ ಎಂದು ಹೇಳಿದ್ದರು.

ಅಲ್ಲಿರುವ ಕೆಲವು ಮಹಿಳೆಯರೇ ಈ ಸುಂದರ ತೊಟ್ಟಿಲನ್ನು ಸಿದ್ಧಪಡಿಸಿದ್ದಾರೆ. ಅವರು ತಯಾರಿಸಿದ ಈ ತೊಟ್ಟಿಲಿಗೆ ಹೆಚ್ಚಿನ ಮಹತ್ವ ಇದೆ ಎಂದು ನಾನು ಭಾವಿಸುತ್ತೇನೆ ಅಂತಾ ಹೇಳಿಕೊಂಡಿದ್ದರು. "ಅತೀ ಶೀಘ್ರದಲ್ಲೇ ನಾವು ಮೂವರಾಗುತ್ತಿದ್ದೇವೆ. ನನ್ನ ಮಗುವಿಗೆ ನಿಮ್ಮ ಕೈಯಿಂದ ನೀಡಿದ ತೊಟ್ಟಿಲು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ. ಇದು ಧೈರ್ಯ, ಶಕ್ತಿ, ಸ್ವಾಭಿಮಾನ ಮತ್ತು ಭರವಸೆಯ ಸಂಕೇತವಾಗಿ ನನ್ನ ಮಗುವಿನ ನೆನಪಿನಲ್ಲಿ ಉಳಿಯುತ್ತದೆ. ನಮ್ಮ ಸುಂದರ ಪ್ರಯಾಣದ ಅವಿಭಾಜ್ಯ ಅಂಗವಾಗಿರುವ ಪ್ರಜ್ವಲ ಫೌಂಡೇಶನ್‌ಗೆ ವಿಶೇಷ ಧನ್ಯವಾದಗಳು" ಎಂದು ತೊಟ್ಟಿಲಿನ ಫೋಟೋ ಹಂಚಿಕೊಂಡ ಉಪಾಸನಾ ಕ್ಯಾಪ್ಶನ್​ ಬರೆದಿದ್ದರು.

ಇದನ್ನೂ ಓದಿ:ಇಂದು ಆರ್​ಆರ್​ಆರ್​ ಸ್ಟಾರ್​ ರಾಮ್​ ಚರಣ್​ ಮಗಳ ನಾಮಕರಣ.. ಎಲ್ಲಿ ಗೊತ್ತಾ?

Last Updated : Jul 1, 2023, 4:45 PM IST

ABOUT THE AUTHOR

...view details