ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಸಿರುವ ಕಾಂತಾರ ಸಿನಿಮಾ ನಿನ್ನೆಯಷ್ಟೇ ಬಿಡುಗಡೆ ಅಗಿ ಭಾರಿ ಮೆಚ್ಚುಗೆ ಗಳಿಸುತ್ತಿದೆ. ಸಾಕಷ್ಟು ಸಿನಿರಂಗದವರು ಕೂಡ ಸಿನಿಮಾ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದೀಗ ಬಾಹುಬಲಿ ಖ್ಯಾತಿಯ ಡಾರ್ಲಿಂಗ್ ಪ್ರಭಾಸ್ ಸಹ ಈ ಚಿತ್ರವನ್ನು ನೋಡಿ ಪ್ರಶಂಸೆ ಮಾಡಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಪ್ರಭಾಸ್, 'ಕಾಂತಾರ ಚಿತ್ರ ನೋಡಿ ಬಹಳ ಎಂಜಾಯ್ ಮಾಡಿದೆ. ಅದರಲ್ಲೂ ಕ್ಲೈಮ್ಯಾಕ್ಸ್ ಅದ್ಭುತವಾಗಿತ್ತು. ಇಂಥದ್ದೊಂದು ಚಿತ್ರವನ್ನು ಕಟ್ಟಿಕೊಟ್ಟ ಚಿತ್ರತಂಡಕ್ಕೆ ಶುಭವಾಗಲಿ ಮತ್ತು ಚಿತ್ರಕ ದೊಡ್ಡ ಯಶಸ್ಸು ಗಳಿಸಲಿ' ಎಂದು ಹಾರೈಸಿದ್ದಾರೆ.
'ಕೆಜಿಎಫ್', 'ಯುವರತ್ನ' ಮುಂತಾದ ಹಿಟ್ ಚಿತ್ರಗಳನ್ನು ನಿರ್ಮಿಸಿರುವ ವಿಜಯ್ ಕುಮಾರ್ ಕಿರಗಂದೂರು ‘ಕಾಂತಾರ’ ಚಿತ್ರವನ್ನು ತಮ್ಮ ಹೊಂಬಾಳೆ ಫಿಲ್ಮ್ಸ್ ಮೂಲಕ ನಿರ್ಮಿಸಿದ್ದಾರೆ. ಅದರ ಜೊತೆಗೆ ಪ್ರಭಾಸ್ ಅಭಿನಯದ 'ಸಲಾರ್' ಎಂಬ ಪ್ಯಾನ್ ಇಂಡಿಯಾ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಪ್ರಗತಿಯಲ್ಲಿದ್ದು, ಮುಂದಿನ ವರ್ಷ ಬಿಡುಗಡೆಯಾಗಲಿದೆ.