ಸಿನಿ ಸೆಲಬ್ರಿಟಿಗಳಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಬಹುತೇಕ ಅಭಿಮಾನಿಗಳಿಗೆ ಸಹಜವಾಗಿ ಇರುತ್ತದೆ. ವಿಶೇಷವಾಗಿ ಅವರ ಸಂಭಾವನೆ ಬಗ್ಗೆ ಹೆಚ್ಚು ಕುತೂಹಲ ಹೊಂದಿರುತ್ತಾರೆ. ಅದಕ್ಕೆ ಸಂಬಂಧಿಸಿದ ವಿವರಗಳು ಆಗಾಗ್ಗೆ ಬರುತ್ತಿರುತ್ತವೆ. ಸಾಮಾಜಿಕ ಜಾಲತಾಣದಲ್ಲಿ ಆಯಾ ಹೀರೋಗಳ ರೆಮ್ಯೂನರೇಶನ್ ಕುರಿತು ಹಲವು ರೀತಿಯ ಸುದ್ದಿಗಳು ಹರಿದಾಡುತ್ತವೆ. ಆದರೆ ಅವುಗಳ ಬಗ್ಗೆ ನಾಯಕರು ಮಾತ್ರ ಪ್ರತಿಕ್ರಿಯಿಸಿಸುವುದಿಲ್ಲ. ಆದ್ರೆ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ತಮ್ಮ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ. ದಿನಕ್ಕೆ ತಾವು ತೆಗೆದುಕೊಳ್ಳುವ ಸಂಬಳದ ಮಾಹಿತಿಯನ್ನು ಬಹಿರಂಗವಾಗಿ ಹೇಳಿದ್ದಾರೆ.
ದಿನಕ್ಕೆ 2 ಕೋಟಿ ರೂ. ಸಂಭಾವನೆ: ಇತ್ತೀಚೆಗೆ ಮಚಿಲೀಪಟ್ಟಣದಲ್ಲಿ ನಡೆದ ಜನ ಸೇನಾ ಆವಿರ್ಭಾವ ಸಭೆಯಲ್ಲಿ ಮಾತನಾಡಿದ ನಟ ಪವನ್ ಕಲ್ಯಾಣ್, ಪ್ರಸ್ತುತ ದಿನಕ್ಕೆ ತಾವು 2 ಕೋಟಿ ರೂ. ನಷ್ಟು ಸಂಭಾವನೆ ತೆಗೆದುಕೊಳ್ಳುತ್ತಿರುವುದಾಗಿ ಸ್ಪಷ್ಟಪಡಿಸಿದರು. ಇತ್ತೀಚೆಗೆ ಸಿನಿಮಾವೊಂದಕ್ಕೆ 22 ದಿನಗಳ ಡೇಟ್ಸ್ ಕೊಟ್ಟಿದ್ದು, 44 ಕೋಟಿ ರೂ. ಪಡೆದಿದ್ದಾರೆ. ರಾಜಕೀಯ ಟೀಕೆಗಳಿಗೆ ಉತ್ತರ ಕೊಡುವ ಸಲುವಾಗಿ ಈ ಹೇಳಿಕೆ ಕೊಟ್ಟಿದ್ದಾರೆ. ತಾನು ಹಣಕ್ಕಾಗಿ ಆಸೆ ಪಡುವವನಲ್ಲ ಎಂದು ಕೂಡ ಅವರು ಹೇಳಿದ್ದಾರೆ.
ನಾನು ಹಣ ಮಾಡಲು ಬಂದಿಲ್ಲ:ನಟ ಪವನ್ ಕಲ್ಯಾಣ್ ಅವರು ಜನ ಸೇನಾ ಪಕ್ಷ ಕಟ್ಟಿದಾಗಿನಿಂದ ಅವರ ಸಂಭಾವನೆ ವಿಷಯವಾಗಿ ಟೀಕೆ ಟಿಪ್ಪಣಿ ಕೇಳಿ ಬಂದಿದ್ದವು. ರಾಜಕೀಯವಾಗಿ ಸಾಕಷ್ಟು ಟೀಕೆ ಎದುರಿಸಿದ್ದರು. ಈ ಹಿನ್ನೆಲೆ ನಾನು ಹಣ ಮಾಡಲು ಬಂದಿಲ್ಲ. ನನ್ನ ಬಳಿ ಹಣವಿದೆ. ದಿನಕ್ಕೆ 2 ಕೋಟಿ ರೂಪಾಯಿ ಸಂಪಾದಿಸುತ್ತೇನೆ ಎಂದು ಟೀಕೆ ಮಾಡುವವರಿಗೆ ತಿರುಗೇಟು ಕೊಟ್ಟಿದ್ದಾರೆ.