ಬಾಲಿವುಡ್ ನಟ ರಣವೀರ್ ಸಿಂಗ್ ಕೆಲವೊಮ್ಮೆ ಸಿನೆಮಾಗಳಿಗಾಗಿ, ಮತ್ತೆ ಕೆಲವು ಬಾರಿ ವಿಭಿನ್ನ ಫ್ಯಾಶನ್ ಸೆನ್ಸ್‌ಗೋಸ್ಕರ ಸುದ್ದಿಲೋಕದಲ್ಲಿ ಸದ್ದು ಮಾಡುತ್ತಾರೆ. ಆದ್ರೆ, ಈ ಸಲ ಇವರು ನಗ್ನ ಫೋಟೋಶೂಟ್ ಮೂಲಕ ನೆಟ್ಟಿಗರು ಹೌಹಾರುವಂತೆ ಮಾಡಿದ್ದಾರೆ. ಹೌದು, ಮ್ಯಾಗಜೀನ್ ಫೋಟೋಶೂಟ್ಗಾಗಿ ರಣವೀರ್ ಬೆತ್ತಲಾಗಿದ್ದು, ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಈ ಚಿತ್ರಗಳನ್ನು ನೋಡಿದ ರಣವೀರ್ ಅಭಿಮಾನಿಗಳು, ಇದಕ್ಕೆಲ್ಲ ಪತ್ನಿ ದೀಪಿಕಾ ಅನುಮತಿ ಕೊಟ್ಟಿದ್ದಾರೆಯೇ? ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬರು ರಣವೀರ್ ಸಿಂಗ್ ಸೂಪರ್ ಹಾಟ್ ಆಗಿ ಕಾಣ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಅವತಾರ ನೋಡಿದ ಕೆಲವರಂತೂ ಆಕ್ರೋಶದ ಕಾಮೆಂಟ್‌ಗಳನ್ನೂ ಮಾಡುತ್ತಿದ್ದಾರೆ. ಇನ್ನೂ ಹಲವರು ಬಾಲಿವುಡ್‌ನಲ್ಲಿ ಕೊಳಕು ಹೆಚ್ಚುತ್ತಿದೆ ಎಂದು ಕಿಡಿ ಕಾರಿದ್ದಾರೆ.