ಕರ್ನಾಟಕ

karnataka

ETV Bharat / entertainment

ಅಜಯ್​ ದೇವಗನ್​ ಅಭಿನಯದ ದೃಶ್ಯಂ 2 ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸ್​! - ದೃಶ್ಯಂ 2 ಚಿತ್ರ ಬಿಡುಗಡೆ ದಿನಾಂಕ

ಇತ್ತೀಚೆಗೆ ಬಿಡುಗಡೆಯಾದ 'ರನ್‌ವೇ 34' ಚಿತ್ರದಲ್ಲಿ ತಮ್ಮ ಅದ್ಭುತ ನಟನೆಯಿಂದ ಪ್ರೇಕ್ಷಕರನ್ನು ಮೆಚ್ಚಿಸಿದ ನಂತರ ನಟ ಅಜಯ್ ದೇವಗನ್ ತಮ್ಮ ಮತ್ತೊಂದು ಬಹು ನಿರೀಕ್ಷಿತ ಚಿತ್ರದೊಂದಿಗೆ ಬೆಳ್ಳಿತೆರೆಗೆ ಬರಲು ಸಜ್ಜಾಗುತ್ತಿದ್ದಾರೆ. ಮಲಯಾಳಂ, ಕನ್ನಡ, ತೆಲುಗಿನಲ್ಲಿ ಈಗಾಗಲೇ ಸೂಪರ್​ ಹಿಟ್​ ಆಗಿ ಹೊರ ಹೊಮ್ಮಿರುವ ದೃಶ್ಯಂ 2 ಚಿತ್ರ ಈಗ ಹಿಂದಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಅಜಯ್ ದೇವಗನ್ ಮತ್ತು ಟಬು ಅಭಿನಯದ 2015 ರ ದೃಶ್ಯಂ ಚಿತ್ರದ ಮುಂದಿನ ಭಾಗ ಇದಾಗಿದೆ. ಭಾಗ 1 ರಲ್ಲಿ ಏನಾಯಿತು ಎಂಬುದರ ಮುಂದಿನ ಕಥೆಯನ್ನು ದೃಶ್ಯಂ 2ರಲ್ಲಿ ತೋರಿಸಲಾಗುತ್ತದೆ.

Ajay Devgn starrer Drishyam 2 gets a release date, Drishyam 2 movie trailer, Drishyam 2 movie update, ಅಜಯ್ ದೇವಗನ್ ಅಭಿನಯದ ದೃಶ್ಯಂ 2 ಬಿಡುಗಡೆಯ ದಿನಾಂಕ, ದೃಶ್ಯಂ 2 ಚಿತ್ರದ ಟ್ರೈಲರ್, ದೃಶ್ಯಂ 2 ಚಿತ್ರ ಬಿಡುಗಡೆ ದಿನಾಂಕ, ದೃಶ್ಯಂ 2 ಚಿತ್ರದ ಅಪ್​ಡೇಟ್​,
ಅಜಯ್​ ದೇವಗನ್​ ಅಭಿನಯದ ದೃಶ್ಯಂ 2 ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸ್

By

Published : Jun 22, 2022, 7:30 AM IST

ಮುಂಬೈ: 2015 ರಲ್ಲಿ ಬಂದ ಅಜಯ್ ದೇವಗನ್ ಅವರ ಥ್ರಿಲ್ಲರ್ ಮೂವಿ ದೃಶ್ಯಂನ ಮುಂದುವರಿದ ಭಾಗ 2 ರ ಬಗ್ಗೆ ಇಲ್ಲಿಯವರೆಗಿನ ಕೆಲವು ಅಪ್​ಡೇಟ್​ಗಳನ್ನು ತಿಳಿಯೋಣಾ. ಚಿತ್ರದ ಸೀಕ್ವೆಲ್‌ಗಾಗಿ ಬಹಳ ದಿನಗಳಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಚಿತ್ರತಂಡ ಸಿಹಿ ನೀಡಿದೆ. ಚಿತ್ರತಂಡ ಈಗ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು, ಈ ವರ್ಷ ನವೆಂಬರ್‌ನಲ್ಲಿ ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

ಅಜಯ್​ ದೇವಗನ್​ ಅಭಿನಯದ ದೃಶ್ಯಂ 2 ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸ್

ಚಿತ್ರದ ಮೊದಲ ಭಾಗದಲ್ಲಿ ಅಜಯ್ ದೇವಗನ್ ಕುಟುಂಬದ ವ್ಯಕ್ತಿ ವಿಜಯ್ ಸಲಗಾಂವ್ಕರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ದೃಶ್ಯಂನಲ್ಲಿ ಅವರು ತಮ್ಮ ಕುಟುಂಬವನ್ನು ಕಾಪಾಡಲು ಐಜಿಪಿ ಮೀರಾ ದೇಶಮುಖ್ (ಟಬು) ಅವರೊಂದಿಗೆ ಹೋರಾಡುತ್ತಿರುವುದನ್ನು ಕಾಣಬಹುದು. ಅಕ್ಟೋಬರ್ 2ರಂದು ಕಥೆಯ ಬಗ್ಗೆ ಸಾಕಷ್ಟು ಚರ್ಚೆ ಸಹ ನಡೆದಿದೆ. ಅಕ್ಟೋಬರ್ 2 ರಂದು ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಮೀಮ್‌ಗಳನ್ನು ಮಾಡಲಾಗಿತ್ತು.

ಈ ಚಿತ್ರ ಬಿಡುಗಡೆಯಾಗಿ ಏಳು ವರ್ಷಗಳ ನಂತರ ದೃಶ್ಯಂ ಭಾಗ 2 ಚಿತ್ರ ಹೊರ ಬರಲಿದೆ. ಹಿಂದಿನ ಭಾಗದಂತೆ ದೃಶ್ಯಂ 2 ನಲ್ಲಿ ಅಜಯ್ ದೇವಗನ್ ಜೊತೆಗೆ ಟಬು, ಶ್ರಿಯಾ ಸರನ್ ಮತ್ತು ಇಶಿತಾ ದತ್ತಾ ಕೂಡ ಕಾಣಿಸಿಕೊಳ್ಳಲಿದ್ದಾರೆ. ಇವರಲ್ಲದೆ, ಚಿತ್ರದಲ್ಲಿ ಅಕ್ಷಯ್ ಖನ್ನಾ ಮತ್ತು ರಜತ್ ಕಪೂರ್ ಕೂಡ ನಟಿಸಿದ್ದಾರೆ.

ಓದಿ:ದೃಶ್ಯಂ 2 ಸಿನಿಮಾ ಮೂಲಕ ಮತ್ತೆ ಒಂದಾದ ರವಿಚಂದ್ರನ್-ಪಿ.ವಾಸು

ಚಿತ್ರದ ಮೊದಲ ಭಾಗವನ್ನು ನಿಶಿಕಾಂತ್ ಕಾಮತ್ ನಿರ್ದೇಶಿಸಿದ್ದಾರೆ. ಆದರೆ ಅಭಿಷೇಕ್ ಪಾಠಕ್ ಭಾಗ 2 ಅನ್ನು ನಿರ್ದೇಶಿಸುತ್ತಿದ್ದಾರೆ. ಮುಂಬೈ ಮತ್ತು ಗೋವಾದಲ್ಲಿ ದೃಶ್ಯಂ 2 ಚಿತ್ರವನ್ನು ಚಿತ್ರೀಕರಿಸಲಾಗಿದೆ. ಆದರೆ, ಕೊನೆಯ ಶೆಡ್ಯೂಲ್‌ನ ಶೂಟಿಂಗ್ ಹೈದರಾಬಾದ್‌ನಲ್ಲಿ ನಡೆಯುತ್ತಿತ್ತು. ಅದು ಸಹ ಜೂನ 21 (ನಿನ್ನೆ) ಮುಕ್ತಾಯಗೊಂಡಿದೆ. ಈ ನವೆಂಬರ್ 18 ರಂದು ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದಾರೆ.

19 ಫೆಬ್ರವರಿ 2021 ರಂದು OTT ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾದ 'ದೃಶ್ಯಂ 2' ಮಲಯಾಳಂ ಚಲನಚಿತ್ರವಾಗಿದ್ದು, ಈ ಚಿತ್ರವನ್ನು ಹಿಂದಿ ಭಾಷೆಗೆ ರಿಮೇಕ್ ಮಾಡಲಾಗಿದೆ. ಸೌತ್ ಸೂಪರ್ ಸ್ಟಾರ್ ಮೋಹನ್ ಲಾಲ್ ಮಲಯಾಳಂನ 'ದೃಶ್ಯಂ 2' ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದು, ಅವರು ಈ ಪಾತ್ರಕ್ಕಾಗಿ ಹೆಚ್ಚು ಮೆಚ್ಚುಗೆ ಪಡೆದಿದ್ದಾರೆ. ಅದೇ ರೀತಿ ಈ ಚಿತ್ರ ತೆಲುಗು ಮತ್ತು ಕನ್ನಡದಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿದೆ. ತೆಲುಗಿನಲ್ಲಿ ವೆಂಕಟೇಶ್​ ಪ್ರಮುಖ ಪಾತ್ರದಲ್ಲಿ ನಟಿಸಿದ್ರೆ, ಕನ್ನಡದಲ್ಲಿ ಕ್ರೇಜಿಸ್ಟಾರ್​ ರವಿಚಂದ್ರನ್​ ನಟಿಸಿದ್ದು, ಮೆಚ್ಚುಗೆ ಪಡೆದಿದ್ದಾರೆ. ಅಜಯ್​ ದೇವಗನ್ ಅಭಿನಯದ ದೃಶ್ಯಂ 2​ Viacom18 Studios, T-Series ಮತ್ತು Panorama Studios ಬ್ಯಾನರ್‌ಗಳ ಅಡಿಯಲ್ಲಿ ನಿರ್ಮಾಣವಾಗುತ್ತಿದೆ.


ABOUT THE AUTHOR

...view details