ನವದೆಹಲಿ: ಐಶ್ವರ್ಯಾ ರೈ ಬಚ್ಚನ್ ಬಾಲಿವುಡ್‌ನ ಅತ್ಯಂತ ಸುಂದರ ಮತ್ತು ಜನಪ್ರಿಯ ನಟಿಯರಲ್ಲಿ ಒಬ್ಬರು. ಜನರು ಐಶ್ವರ್ಯಾ ಅವರ ಸೌಂದರ್ಯ ಮತ್ತು ಅಭಿನಯವನ್ನು ಹೊಗಳುವುದು ಮಾತ್ರವಲ್ಲದೇ ಅವರ ಸ್ಟೈಲ್ ಸ್ಟೇಟ್‌ಮೆಂಟ್ ಕೂಡ ಮೆಚ್ಚಿಕೊಳ್ಳುತ್ತಾರೆ. ಇತ್ತೀಚೆಗೆ, ಐಶ್ವರ್ಯಾ ರೈ ಕಾರ್ಯಕ್ರಮವೊಂದರಲ್ಲಿ ಬಿಳಿ ಹೂವಿನ ಉದ್ದನೆಯ ಗೌನ್‌ನಲ್ಲಿ ರಾಣಿಯಂತೆ ಸುಂದರವಾಗಿ ಕಾಣುತ್ತಿದ್ದರು. ಆದರೆ ನಿನ್ನೆ ನಡೆದ ಘಟನೆಯೊಂದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶ್ವೇತ ವರ್ಣದಲ್ಲಿ ರಾಣಿಯಂತೆ ಕಂಗೊಳಿಸುತ್ತಿರುವ ಆಂಟಿ ಐಶ್ವರ್ಯಾ ರೈ ಓದಿ:ಪಂಚಭಾಷಾ ತಾರೆ ಈ ಬೋಲ್ಡ್ ಬ್ಯೂಟಿ: ನೇಹಾ ಶರ್ಮಾ ಫೋಟೋ ಕಂಡು ಪಡ್ಡೆ ಹುಡುಗರ ದಿಲ್ ಖುಷ್
ಈ ವರ್ಷ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಐಶ್ವರ್ಯಾ ರೈ ಬಚ್ಚನ್ ತನ್ನ ಸೌಂದರ್ಯ ಮತ್ತು ಶೈಲಿಯನ್ನು ಪ್ರದರ್ಶಿಸುವ ಯಾವುದೇ ಅವಕಾಶವನ್ನು ಬಿಡಲಿಲ್ಲ. IIFA ಪ್ರಶಸ್ತಿಗಳಿಗೆ ಹೋಗುವ ಮೊದಲು ಐಶ್ವರ್ಯಾ ರೈ ಮುಂಬೈನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗಿಯಾದರು. ಅಲ್ಲಿ ಐಶ್ವರ್ಯಾ ಅವರನ್ನು ನೋಡಲು ಸಾವಿರಾರೂ ಅಭಿಮಾನಿಗಳ ಕಾಯುತ್ತಿರುವುದು ಕಂಡು ಬಂದಿತು. ಈ ವೇಳೆ, ಐಶ್ವರ್ಯಾ ಕೂಡ ಅಭಿಮಾನಿಗಳ ಪ್ರೀತಿಯನ್ನು ಕಂಡು ಬೆರಗಾದರು. ಬಳಿಕ ತಮ್ಮ ಎಲ್ಲ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಓದಿ:ಭಾರತೀಯ ವಸ್ತ್ರಗಳಲ್ಲಿ ಮಾನುಷಿ ಛಿಲ್ಲರ್.. ಮಾಜಿ ವಿಶ್ವ ಸುಂದರಿಯ ಸೊಬಗು
ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ. ಅಭಿಮಾನಿಯೊಬ್ಬರು ಐಶ್ವರ್ಯಾ ರೈಗೆ ಗುಲಾಬಿ ಹೂಗಳನ್ನು ನೀಡಲು ಪ್ರಯತ್ನಿಸುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಭಾರಿ ಜನಸಾಗರದ ನಂತರವೂ ಐಶ್ ತನ್ನ ಅಭಿಮಾನಿಯ ಬಳಿಗೆ ಹೋಗಿ ಗುಲಾಬಿಯನ್ನು ತೆಗೆದುಕೊಂಡರು. ಅಷ್ಟೇ ಅಲ್ಲ, ಐಶ್ವರ್ಯಾ ಅವರಿಗೆ ಧನ್ಯವಾದ ಹೇಳಿ ಫ್ಲೈಯಿಂಗ್ ಕಿಸ್ ಕೂಡ ನೀಡಿದರು. ಐಶ್ವರ್ಯಾ ಅವರ ಈ ಸ್ಟೈಲ್ ಮತ್ತು ಈ ಮಾಧುರ್ಯವನ್ನು ನೋಡಿದ ಜನರು ಆಕೆಗೆ ಹೊಗಳಿಕೆಯ ಸುರಿಮಳೆಯನ್ನೇ ಹರಿಸಿದರು.