ಕರ್ನಾಟಕ

karnataka

ETV Bharat / entertainment

75ನೇ 'ಎಮ್ಮಿ' ಅವಾರ್ಡ್ಸ್: ಪ್ರತಿಷ್ಠಿತ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟ - 75th Emmy awards

Emmy winners list: 7ನೇ ಎಮ್ಮಿ ಪ್ರಶಸ್ತಿಯ ವಿಜೇತರ ಪಟ್ಟಿ ಇಂತಿದೆ

Emmy winners list
ಎಮ್ಮಿ ವಿಜೇತರ ಪಟ್ಟಿ

By ETV Bharat Karnataka Team

Published : Jan 16, 2024, 5:18 PM IST

ಲಾಸ್ ಏಂಜಲೀಸ್ (ಅಮೆರಿಕ):ಲಾಸ್ ಏಂಜಲೀಸ್‌ನ ಪೀಕಾಕ್ ಥಿಯೇಟರ್‌ನಲ್ಲಿ ನಡೆದ 75ನೇ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭ 'ಎಮ್ಮಿ'ಯಲ್ಲಿ ಹಲವು ವಿಭಾಗಳಲ್ಲಿ ಹಲವು ಚಿತ್ರಗಳು, ಕಲಾವಿದರು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ಕಾರ್ಯಕ್ರಮವನ್ನು 2023ರ ಸೆಪ್ಟೆಂಬರ್​ನಲ್ಲಿ ನಿಗದಿಪಡಿಸಲಾಗಿತ್ತು. ಆದರೆ ಹಾಲಿವುಡ್ ಸ್ಟ್ರೈಕ್‌ ಹಿನ್ನೆಲೆ ಹಿಂದೆ ಸರಿಯಲಾಗಿತ್ತು. ಇದೀಗ ನಡೆಸಿರುವ ಸಮಾರಂಭದಲ್ಲಿ 'ಸಕ್ಸೆಶನ್'​​ ಮತ್ತು 'ದಿ ಬೀರ್'​​ ತಲಾ ಪ್ರಮುಖ ಆರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. 'ಬೀಫ್' ಐದು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

ಎಮ್ಮಿ ವಿಜೇತರ ಪಟ್ಟಿ:

  • ಡ್ರಾಮಾ ಸೀರಿಸ್​ - ಸಕ್ಸೆಶನ್
  • ಕಾಮಿಡಿ ಸೀರಿಸ್​​ - ದಿ ಬೀರ್
  • ಲಿಮಿಟೆಡ್​​ ಅಥವಾ ಆ್ಯಂಥೋಲಾಜಿ ಸೀರಿಸ್​​ - ಬೀಫ್​​
  • ಡ್ರಾಮಾ ಸೀರಿಸ್​ನಲ್ಲಿ ಲೀಡ್​​ ಆ್ಯಕ್ಟರ್​ - ಕೀರನ್ ಕಲ್ಕಿನ್ (ಸಕ್ಸೆಶನ್)
  • ಡ್ರಾಮಾ ಸೀರಿಸ್​ನಲ್ಲಿ ಲೀಡ್ ಆ್ಯಕ್ಟ್ರೆಸ್ - ಸಾರಾ ಸ್ನೂಕ್, (ಸಕ್ಸೆಶನ್)
  • ಕಾಮಿಡಿ ಸೀರಿಸ್​ನಲ್ಲಿ ಲೀಡ್​​ ಆ್ಯಕ್ಟರ್ - ಜೆರ್ಮಿ ಅಲೆನ್ ವೈಟ್ (ದಿ ಬೀರ್​)
  • ಕಾಮಿಡಿ ಸೀರಿಸ್​ನಲ್ಲಿ ಲೀಡ್​​ ಆ್ಯಕ್ಟ್ರೆಸ್ - ಕ್ವಿಂಟಾ ಬ್ರುನ್ಸನ್ (ಅಬಾಟ್ ಎಲಿಮೆಂಟರಿ)
  • ಲಿಮಿಟೆಡ್​​ ಅಥವಾ ಆ್ಯಂಥೋಲಾಜಿ ಸೀರಿಸ್ ಅಥವಾ ಸಿನಿಮಾದಲ್ಲಿ ಲೀಡ್​​ ಆ್ಯಕ್ಟರ್​ - ಸ್ಟೀವನ್ ಯೂನ್ (ಬೀಫ್)
  • ಲಿಮಿಟೆಡ್​​ ಅಥವಾ ಆ್ಯಂಥೋಲಾಜಿ ಸೀರಿಸ್ ಅಥವಾ ಸಿನಿಮಾದಲ್ಲಿ ಲೀಡ್​​ ಆ್ಯಕ್ಟ್ರೆಸ್ - ಅಲಿ ವಾಂಗ್ (ಬೀಫ್)
  • ಡ್ರಾಮಾ ಸೀರಿಸ್​ನಲ್ಲಿ ಪೋಷಕ ನಟ - ಮ್ಯಾಥ್ಯೂ ಮ್ಯಾಕ್‌ಫಾಡೆನ್ (ಸಕ್ಸೆಶನ್)
  • ಡ್ರಾಮಾ ಸೀರಿಸ್​ನಲ್ಲಿ ಪೋಷಕ ನಟಿ - ಜೆನ್ನಿಫರ್ ಕೂಲಿಡ್ಜ್ (ದಿ ವೈಟ್ ಲೋಟಸ್)
  • ಕಾಮಿಡಿ ಸೀರಿಸ್​ನಲ್ಲಿ ಪೋಷಕ ನಟ - ಎಬಾನ್ ಮಾಸ್ - ಬಚ್ರಾಚ್ (ದಿ ಬೀರ್)
  • ಕಾಮಿಡಿ ಸೀರಿಸ್​ನಲ್ಲಿ ಪೋಷಕ ನಟಿ - ಅಯೋ ಎಡೆಬಿರಿ (ದಿ ಬೀರ್)
  • ಲಿಮಿಟೆಡ್​​ ಅಥವಾ ಆ್ಯಂಥೋಲಾಜಿ ಸೀರಿಸ್ ಅಥವಾ ಸಿನಿಮಾದಲ್ಲಿ ಪೋಷಕ ನಟ - ಪೌಲ್ ವಾಲ್ಟರ್ ಹೌಸರ್ (ಬ್ಲ್ಯಾಕ್ ಬರ್ಡ್)
  • ಲಿಮಿಟೆಡ್​​ ಅಥವಾ ಆ್ಯಂಥೋಲಾಜಿ ಸೀರಿಸ್ ಅಥವಾ ಸಿನಿಮಾದಲ್ಲಿ ಪೋಷಕ ನಟಿ - ನೀಸಿ ನ್ಯಾಶ್ (ದಹ್ಮರ್-ಮಾನ್ಸ್ಟರ್: ದಿ ಜೆಫ್ರಿ ದಹ್ಮರ್ ಸ್ಟೋರಿ)
  • ಸ್ಕ್ರಿಪ್ಟೆಡ್ ವೆರೈಟಿ ಸೀರಿಸ್​ - ಲಾಸ್ಟ್ ವೀಕ್​​ ಟುನೈಟ್​​ ವಿತ್​​ ಜಾನ್​​ ಒಲಿವರ್​
  • ಟಾಕ್ ಸೀರಿಸ್​​ - ದಿ ಡೈಲಿ ಶೋ ವಿತ್​​ ಟ್ರೆವರ್ ನೋಹ್
  • ರಿಯಾಲಿಟಿ ಕಾಂಪಿಟೇಶನ್​​ ಪ್ರೋಗ್ರಾಮ್​ - ರುಪೌಲ್ಸ್ ಡ್ರ್ಯಾಗ್ ರೇಸ್
  • ವೆರೈಟಿ ಸ್ಪೆಷಲ್ (ಲೈವ್)- ಎಲ್ಟನ್ ಜಾನ್ ಲೈವ್: ಫೇರ್​​ವೆಲ್​ ಫ್ರಂ ಡಾಡ್ಜರ್ ಸ್ಟೇಡಿಯಂ
  • ಡ್ರಾಮಾ ಸೀರೀಸ್​​​ ನಿರ್ದೇಶಕರು - ಮಾರ್ಕ್ ಮೈಲೋಡ್, ಸಕ್ಸೆಶನ್ (ಕಾನ್ನರ್ಸ್ ವೆಡ್ಡಿಂಗ್)
  • ಕಾಮಿಡಿ ಸೀರೀಸ್​​​ ನಿರ್ದೇಶಕರು - ಕ್ರಿಸ್ಟೋಫರ್ ಸ್ಟೋರರ್, ದಿ ಬೀರ್ (ವಿಮರ್ಶೆ)
  • ಲಿಮಿಟೆಡ್​​ ಅಥವಾ ಆ್ಯಂಥೋಲಾಜಿ ಸೀರಿಸ್ ಅಥವಾ ಸಿನಿಮಾದಲ್ಲಿ ನಿರ್ದೇಶಕರು - ಲೀ ಸಂಗ್ ಜಿನ್, ಬೀಫ್ (ಫಿಗರ್ಸ್ ಆಫ್ ಲೈಟ್) ಇತ್ಯಾದಿ.

ಇದನ್ನೂ ಓದಿ:ಫಿಲ್ಮ್‌ಫೇರ್ ಪ್ರಶಸ್ತಿ 2024: ನಾಮನಿರ್ದೇಶನಗಳ ಪಟ್ಟಿ; 19 ವಿಭಾಗಗಳಲ್ಲಿ 'ಅನಿಮಲ್'​ಗೆ ಸ್ಥಾನ

For All Latest Updates

ABOUT THE AUTHOR

...view details