ಚಾಮರಾಜನಗರ : ಯಳಂದೂರು ಪಟ್ಟಣ ಪಂಚಾಯತ್‌ನ 11 ಸ್ಥಾನಗಳಲ್ಲಿ ಕಾಂಗ್ರೆಸ್ ಬರೋಬ್ಬರಿ 10 ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದು ಗದ್ದುಗೆ ಹಿಡಿದಿದೆ. ಇಲ್ಲಿ ಬಿಜೆಪಿ ಕೇವಲ 1 ಸ್ಥಾನವನ್ನಷ್ಟೇ ಗೆದ್ದುಕೊಂಡಿದೆ. 3ನೇ ವಾರ್ಡಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಸಮಬಲ ಪಡೆದಾಗ ಲಾಟರಿ ಮೂಲಕ ಕಾಂಗ್ರೆಸ್ ಅಭ್ಯರ್ಥಿಯನ್ನು ವಿಜಯೀ ಎಂದು ಘೋಷಣೆ ಮಾಡಲಾಯಿತು.
ಯಳಂದೂರು ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಗೆ ಬರಲಿದ್ದು, ಬಿಎಸ್‌ಪಿ ಹಾಗೂ ಜೆಡಿಎಸ್ ಶೂನ್ಯ ಸುತ್ತಿದೆ. ಗಮನಾರ್ಹ ಅಂಶವೆಂದರೆ ಲೋಕಸಭೆ ಚುನಾವಣೆಯಲ್ಲಿ ಯಳಂದೂರು ಪಟ್ಟಣ ಬಿಜೆಪಿಗೆ ಲೀಡ್ ಕೊಟ್ಟಿತ್ತು.
ಯಳಂದೂರು ಪಟ್ಟಣ ಪಂಚಾಯತ್
- ಒಟ್ಟು ವಾರ್ಡ್‌ಗಳು- 11
- ಕಾಂಗ್ರೆಸ್- 10
- ಬಿಜೆಪಿ- 1
ಗುಂಡ್ಲುಪೇಟೆ ಪುರಸಭೆಯ 23 ಸ್ಥಾನಗಳಲ್ಲಿ ಬಿಜೆಪಿ 13 ವಾರ್ಡ್‌ಗಳನ್ನು ಗೆಲ್ಲುವ ಮೂಲಕ ಸರಳ ಬಹುಮತ ಪಡೆದುಕೊಂಡಿದೆ. ಎರಡನೇ ವಾರ್ಡ್‌ನಿಂದ ಎಸ್‌ಡಿಪಿಐ ಅಭ್ಯರ್ಥಿ ರಾಜ್‌ಗೋಪಾಲ್ ಗೆಲ್ಲುವ ಮೂಲಕ ಗುಂಡ್ಲುಪೇಟೆ ಪುರಸಭೆಯಲ್ಲಿ ಖಾತೆ ತೆರೆದಿದೆ. ಬಿಜೆಪಿ ಶಾಸಕ ಸಿ.ಎಸ್.ನಿರಂಜನಕುಮಾರ್ ಪುರಸಭೆಯಲ್ಲಿ ಕಮಲ ಅರಳಿಸುವ ಮೂಲಕ ಪ್ರತಿಷ್ಟೆ ಉಳಿಸಿಕೊಂಡಿದ್ದಾರೆ.