ಕರ್ನಾಟಕ

karnataka

ETV Bharat / elections

ಮಾವನ ಪರ ಪ್ರಚಾರಕ್ಕೆ ತೆರಳಿದ ಅಳಿಮಯ್ಯ... ಗ್ರಾಮದೊಳಗೆ ಕಾಲಿಡದಂತೆ ಶಾಸಕನನ್ನೇ ತಡೆದ ಜನ - kannada news paper

ಮಾವನ ಪರ ಮತಯಾಚಿಸಲು ಬಂದಿದ್ದ ಶಾಸಕ ಹರ್ಷವರ್ಧನ್​ಗೆ ಗ್ರಾಮದೊಳಗೆ ಕಾಲಿಡದಂತೆ ಜನ ತಡೆದು ವಾಪಸ್ ಕಳಿಸಿರುವ ಘಟನೆ ನಂಜನಗೂಡು ತಾಲೂಕಿನ ಹುಣಸವಾಳುದಲ್ಲಿ ನಡೆದಿದೆ.

ಶಾಸಕ ಹರ್ಷವರ್ಧನ್ ಗೆ ಗ್ರಮಾಸ್ಥರು ಗ್ರಾಮದೊಳಗೆ ಕಾಲಿಡದಂತೆ ಪಟ್ಟು

By

Published : Apr 9, 2019, 12:17 PM IST

ಮೈಸೂರು:ಚಾಮರಾಜನಗರ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ‌‌. ಶ್ರೀನಿವಾಸ್ ಪ್ರಸಾದ್ ಪರವಾಗಿ ಮತಯಾಚಿಸಲು ಬಂದಿದ್ದ ಶಾಸಕ ಹರ್ಷವರ್ಧನ್ ಅವರನ್ನು ಊರೊಳಗೆ ಕಾಲಿಡದಂತೆ ವಾಪಸ್ ಕಳುಹಿಸಿರುವ ಘಟನೆ ನಂಜನಗೂಡು ತಾಲೂಕಿನ ಹುಣಸವಾಳು ಗ್ರಾಮದಲ್ಲಿ ನಡೆದಿದೆ.

ಶಾಸಕ ಹರ್ಷವರ್ಧನ್ ಗೆ ಜನರು ಘೇರಾವ್​ ಹಾಕಿ ಗ್ರಾಮದೊಳಗೆ ಕಾಲಿಡದಂತೆ ತಡೆದರು

ನಂಜನಗೂಡು ತಾಲೂಕಿನ ಹುಣಸವಾಳು ಗ್ರಾಮಕ್ಕೆ ಶಾಸಕ ಹರ್ಷವರ್ಧನ್, ಅವರ ಮಾವ ಶ್ರೀನಿವಾಸ್ ಪ್ರಸಾದ್ ಪರವಾಗಿ ಮತಯಾಚನೆಗೆ ತೆರಳಿದ್ದರು. ಈ ವೇಳೆ ರೈತ ಸಂಘದ ಮುಖಂಡರೊಂದಿಗೆ ಸೇರಿ ಗ್ರಾಮದೊಳಗೆ ಬಂದು ಮತ ಕೇಳಬೇಡಿ. ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ವಾಪಸ್​ ಹೋಗಿ ಎಂದರು. ಇದರಿಂದ ಕಸಿವಿಸಿಗೊಂಡ ಹರ್ಷವರ್ಧನ್ ರೈತರನ್ನು ಹಾಗೂ ಗ್ರಾಮಸ್ಥರನ್ನು ಸಮಾಧಾನಪಡಿಸಲು ಯತ್ನಿಸಿದರು. ಆದ್ರೆ ಪ್ರಯತ್ನ ಸಫಲವಾಗದೆ ಅಲ್ಲಿಂದ ಕಾಲ್ಕಿತ್ತರು.

ABOUT THE AUTHOR

...view details