ಕರ್ನಾಟಕ

karnataka

ETV Bharat / elections

ಕಲಬುರಗಿಯಲ್ಲಿ ನನ್ ಗೆಲುವು ನಿಶ್ಚಿತ- ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್‌ ವಿಶ್ವಾಸ

ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಕಲಬುರ್ಗಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಪಾದಯಾತ್ರೆ ಕೈಗೊಳ್ಳುವ ಮೂಲಕ ಬಿರುಸಿನ ಪ್ರಚಾರ ಕೈಗೊಂಡರು.

By

Published : Apr 14, 2019, 8:35 PM IST

ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್

ಕಲಬುರಗಿ: ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಕಲಬುರಗಿಯಲ್ಲಿ ಬಿರುಸಿನ ಪ್ರಚಾರ ಕೈಗೊಂಡರು.

ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಪ್ರಚಾರ

ಕಲಬುರ್ಗಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ ಜಾಧವ್, ಸೂಪರ್ ಮಾರ್ಕೆಟ್‌ನಲ್ಲಿ ಪಾದಯಾತ್ರೆ ಕೈಗೊಳ್ಳುವ ಮೂಲಕ ಮತಯಾಚನೆ ಮಾಡಿದರು. ಅಂಗಡಿಗಳಿಗೆ, ಮನೆ, ಬೀದಿ ವ್ಯಾಪಾರಿಗಳ ಬಳಿ ತೆರಳಿ ತಮಗೆ ಮತ ಹಾಕುವಂತೆ ಮನವಿ ಮಾಡಿದರು.

ಪ್ರಚಾರದ ವೇಳೆ ಟೀ ಅಂಗಡಿಯಲ್ಲಿ ಟೀ ಸೇವಿಸಿದ ಜಾಧವ್..
ಬಿರುಸಿನ‌ ಪ್ರಚಾರ ನಡೆಸಿದ ಜಾಧವ್, ಮಾರ್ಗಮಧ್ಯದಲ್ಲಿ ಟೀ ಅಂಗಡಿವೊಂದರಲ್ಲಿ ಚಹಾ ಸೇವಿಸಿದರು. ನಂತರ ಬಂಬೂ ಬಜಾರ್​ವರೆಗೂ ರೋಡ್ ಶೋ ನಡೆಸಿದರು. ಉತ್ತರ ಕ್ಷೇತ್ರದ ಬಿಜೆಪಿ ಮುಖಂಡ ಚಂದು ಪಾಟೀಲ್ ಸೇರಿ ಅನೇಕ ಬಿಜೆಪಿ ಮುಖಂಡರು ಜಾಧವ್​ಗೆ ಸಾಥ್ ನೀಡಿದರು.
ಈ ವೇಳೆ ಮಾತನಾಡಿದ ಉಮೇಶ್ ಜಾಧವ್, ಎಲ್ಲೆಡೆಯೂ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿಯೂ ಬಿಜೆಪಿಗೆ ಜನ ಭರ್ಜರಿ ಬೆಂಬಲ ನೀಡುತ್ತಿದ್ದಾರೆ. ಕಲಬುರಗಿಯಲ್ಲಿ ತಮ್ಮ ಗೆಲುವು ನಿಶ್ಚಿತ, ದೇಶದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗೋದು ಖಚಿತ ಎಂದು ಜಾಧವ್ ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details