ಕರ್ನಾಟಕ

karnataka

ETV Bharat / elections

ಜೈಲಿಗೆ ಹೋಗಿ ಬಂದವರೆಲ್ಲಾ ಚೌಕಿದಾರರಾಗುತ್ತಿದ್ದಾರೆ: ಬಿಜೆಪಿ ಕಾಲೆಳೆದ ಸಿದ್ದರಾಮಯ್ಯ - ವೀರಪ್ಪ ಮೋಯ್ಲಿ

ಚಿಕ್ಕಬಳ್ಳಾಪುರ ಲೋಕಸಭಾ ಅಭ್ಯರ್ಥಿಯ ವೀರಪ್ಪ ಮೋಯ್ಲಿ ಪರ ಮೈತ್ರಿ ಸರ್ಕಾರದ ಮುಖಂಡರಾದ ಸಿದ್ದರಾಮಯ್ಯ ಹಾಗೂ ದೇವೆಗೌಡರು ಮತಯಾಚನೆ ಮಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ

By

Published : Apr 10, 2019, 5:05 AM IST

ಚಿಕ್ಕಬಳ್ಳಾಪುರ: ನರೇಂದ್ರ ಮೋದಿಗೆ ಯಾರು ಚೌಕಿದಾರ್ ಎಂಬ ಹೆಸರನ್ನು ಇಟ್ಟಿಲ್ಲಾ ಅವರಿಗೆ ಅವರೇ ಹೆಸರಿಟ್ಟುಕೊಂಡಿದ್ದಾರೆ. ಆದರೆ ರಾಜ್ಯದಲ್ಲಿ ಜೈಲಿಗೆ ಹೋಗಿಬಂದ ಬಿಜೆಪಿ ನಾಯಕರೂ ಕೂಡ ಚೌಕಿದಾರರಾಗಿದ್ದಾರೆಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಕಾಲೆಳೆದಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಅಭ್ಯರ್ಥಿಯ ಪರ ಪ್ರಚಾರ ಕಾರ್ಯದಲ್ಲಿ ಮಾತನಾಡಿದ ಸಿದ್ದರಾಮಯ್ಯ ನರೇಂದ್ರ ಮೋದಿಗೆ ಯಾರು ಚೌಕಿದಾರ್ ಎಂಬ ಹೆಸರಿಟ್ಟಿಲ್ಲ,ಅವರಿಗವರೆ ಇಟ್ಟುಕೊಂಡಿದ್ದಾರೆ. ಆದರೆ ಬಿಜೆಪಿಯ ಯಡಿಯೂರಪ್ಪ,ಅಮಿತ್ ಶಾ, ಶ್ರೀರಾಮಲು, ಜನಾರ್ದನ ರೆಡ್ಡಿ, ಕಟ್ಟಾ ಸುಭ್ರಮಣ್ಯ ನಾಯ್ಡು ಜೈಲು ಸೇರಿಬಂದಿದ್ದಾರೆ, ಇದೀಗ ಇವರು ಕೂಡ ತಮ್ಮ ಹೆಸರಿನ ಮುಂದೆ ಚೌಕಿದಾರ ಎಂಬ ಹೆಸರು ಸೇರಿಸಿಕೊಂಡಿದ್ದಾರೆಂದು ಬಿಜೆಪಿ ನಾಯಕರನ್ನು ಟೀಕಿಸಿದರು.

ಸಿದ್ದರಾಮಯ್ಯ

ತಾವು ಮುಖ್ಯಮಂತ್ರಿಯಾಗಿದ್ದ ಸಂಧರ್ಭದಲ್ಲಿ ರೈತರ ಪರವಾಗಿ ಸಾಲಮನ್ನಾ ಮಾಡಿಸಲು ಮೋದಿಯ ಬಳಿ ಹೋದರೆ, ಅವರು ಸಾಧ್ಯವಿಲ್ಲಾ ಎಂಬ ಮಾತನ್ನು ಹೇಳಿದ್ದರು. ಈ ವೇಳೆ ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶಟ್ಟರ್ ಸೇರಿದಂತೆ ದಿವಂಗತ ಅನಂತ ಕುಮಾರ್ ಆದರೆ ಬಗ್ಗೆ ತುಟಿಕ್​ ಪಿಟಿಕ್ ಅನ್ನದೇ ಮೂಲೆಯಲ್ಲಿ ಕುಳಿತಿದ್ದರು ಎಂದು ವಾಕ್ ಪ್ರಹಾರ ಮಾಡಿದರು.

ಬಚ್ಚೇಗೌಡ ಜಾತಿ ಲೆಕ್ಕಚಾರ ಮಾಡುತ್ತಿದ್ದಾರೆ.

ಬಚ್ಚೇಗೌಡರು ಏನು ಎಂಬುವುದು ದೇವೆಗೌಡ್ರಿಗೆ ಹಾಗೂ ನನಗೆ ಚೆನ್ನಾಗಿ ಗೋತ್ತಿದೆ. ಜಾತಿ ಲೆಕ್ಕಾಚಾರ ಮಾಡಿ ಮತವನ್ನು ಗಳಿಸಲು ಮುಂದಾಗುತ್ತಿದ್ದಾರೆ. ಆದರೆ ಈ ಕ್ಷೇತ್ರದ ಜನತೆಗೆ ಯಾವೊಂದು ಕೆಲಸವನ್ನು ಮಾಡಿಲ್ಲಾ. ನಮ್ಮನ್ನು ನೋಡಿ ಮತವನ್ನು ಹಾಕಬೇಡಿ, ಮೋದಿಯಯನ್ನು ನೋಡಿ ಮತ ಹಾಕಿ ಎಂದು ತಿಳಿಸುತ್ತಿದ್ದಾರೆ. ಯಾವ ಕಾರಣಕ್ಕೆ ಮೋದಿಗೆ ಮತವನ್ನು ನೋಡಬೇಕು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಈ ಬಾರೀ ವೀರಪ್ಪ ಮೊಯ್ಲಿಗೆ ಮತವನ್ನು ಚಲಾಯಿಸಿದರೆ ದೇವೆಗೌಡರಿಗೆ, ಸ್ಥಳೀಯ ಶಾಸಕ ಸುಧಾಕರ್​ಗೆ ಹಾಗೂ ನನಗೆ ಬಲ ಬರುತ್ತದೆ. ಈ ಬಾರೀ ವೀರಪ್ಪ ಮೋಯ್ಲಿಗೆ ಮತವನ್ನು ನೀಡಿ ಎಂದು ಪ್ರಚಾರ ನಡೆಸಿದರು

ಇದೇ ಸಂದರ್ಭದಲ್ಲಿ ಮಾತನಾಡಿದ ದೇವೇಗೌಡರು ಮೈತ್ರಿ‌ಸರ್ಕಾರದಲ್ಲಿ ಕೆಲವು ಭಿನ್ನಾಭಿಪ್ರಾಯವಿದೆ, ಆದರೆ ಅದನ್ನು ಬದಿಗೊತ್ತಿ ಪ್ರಮಾಣಿಕವಾಗಿ ಎರಡು ಪಕ್ಷಗಳು ದುಡಿದರೆ ವೀರಪ್ಪ ಮೊಯ್ಲಿಯವರನ್ನು ಒಂದೂವರೆ ಲಕ್ಷ ಮತಗಳಿಂದ ಗೆಲ್ಲಿಸಿಕೊಳ್ಳಬಹುದು ಎಂದ ಅವರು ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಆದ್ದರಿಂದ ದೇಶದಲ್ಲಿ ಜಾತ್ಯತೀತ ಶಕ್ತಿಗಳು ಒಂದಾದರೆ ಮಾತ್ರ ದೇಶವನ್ನು ಉಳಿಸಬಹುದು ಎಂದರು.

ABOUT THE AUTHOR

...view details