ಕರ್ನಾಟಕ

karnataka

ETV Bharat / elections

'ಇಸ್ ಬಾರ್ ಕಿಸ್ ಕೀ ಸರ್ಕಾರ್' ಭವಿಷ್ಯಕ್ಕೆ ಕೋಟಿ ಆಫರ್... ಜ್ಯೋತಿಷಿಗಳಿಗೆ ಒಪನ್​ ಚಾಲೇಂಜ್​​ - kannada news

ಭವಿಷ್ಯ ನುಡಿಯೋ ಜ್ಯೋತಿಷಿಗಳಿಗೆ ಕರ್ನಾಟಕ ವಿಚಾರ ವೇದಿಕೆ ಭರ್ಜರಿ ಆಫರ್ ಕೊಟ್ಟಿದೆ. ಯಾರು ಗೆಲ್ತಾರೆ ಯಾರು ಸೋಲ್ತಾರೆ ಅನ್ನೋದನ್ನ ಸರಿಯಾಗಿ ಹೇಳಿದ್ರೆ ಒಂದು 1 ಕೋಟಿ ರೂ ಹಣ ನೀಡುವುದಾಗಿ ತಿಳಿಸಿದೆ.

ಕರ್ನಾಟಕ ವಿಚಾರ ವೇದಿಕೆಯ ನರಸಿಂಹ ಮೂರ್ತಿ

By

Published : May 12, 2019, 3:36 AM IST

ಬೆಂಗಳೂರು :ದೇಶದಲ್ಲಿ ಲೋಕಸಭಾ ಚುನಾವಣಾ ಬಿಸಿ ಜೋರಾಗಿದೆ. 'ಇಸ್ ಬಾರ್ ಕಿಸ್ ಕೀ ಸರ್ಕಾರ್' ಅನ್ನೋದು ಎಲ್ಲರ ಕುತೂಹಲವಾಗಿದೆ. ಕೆಲ ಜ್ಯೋತಿಷಿಗಳು ಭವಿಷ್ಯವನ್ನೂ ನುಡಿಯುತ್ತಿದ್ದಾರೆ. ಹೀಗಿರಬೇಕಾದರೆ ಪಕ್ಕಾ ಭವಿಷ್ಯ ನುಡಿದ ಜ್ಯೋತಿಷಿಗೆ 1 ಕೋಟಿ ಬಹುಮಾನ ನೀಡೋ ಆಫರ್ ಇಡಲಾಗಿದ್ದು, ಜ್ಯೋತಿಷಿಗಳಿಗೆ ಪಂಥಾಹ್ವಾನ ಕಳುಹಿಸಲಾಗಿದೆ.

ಸದ್ಯ ದೇಶದಲ್ಲಿ ಚುನಾವಣೆ ಬಿಟ್ಟರೆ ಬೇರೆ ಯಾವುದೇ ವಿಷಯ ಕೇಳಿ ಬರುತ್ತಿಲ್ಲ. ಯಾರು ಗೆಲ್ತಾರೆ? ಯಾರು ಸೋಲ್ತಾರೆ ? ಅನ್ನೋ ಲೆಕ್ಕಾಚಾರ ಜೋರಾಗೇ ನಡೀತಿದೆ. ಕೆಲವರು ಬೆಟ್ಟಿಂಗ್​ಗೆ ಇಳಿದ್ರೆ ಮತ್ತೆ ಕೆಲವರು ಜ್ಯೋತಿಷಿಗಳ ಭವಿಷ್ಯದ ಮೊರೆ ಹೋಗ್ತಿದ್ದಾರೆ. ಜ್ಯೋತಿಷಿಗಳಂತೂ ಪುಂಕಾನುಫುಂಕವಾಗಿ ಭವಿಷ್ಯ ನುಡಿಯುತ್ತಿದ್ದಾರೆ.

ಸದ್ಯ ಹೀಗೆ ಭವಿಷ್ಯ ನುಡಿಯೋ ಜ್ಯೋತಿಷಿಗಳಿಗೆ ಕರ್ನಾಟಕ ವಿಚಾರ ವೇದಿಕೆ ಭರ್ಜರಿ ಆಫರ್ ಒಂದನ್ನ ನೀಡಿದೆ. ಯಾರು ಗೆಲ್ತಾರೆ ಯಾರು ಸೋಲ್ತಾರೆ ಅನ್ನೋದನ್ನ ಸರಿಯಾಗಿ ಹೇಳಿದ್ರೆ ಒಂದು 1 ಕೋಟಿ ರೂ ನೀಡೋದಾಗಿ ಘೋಷಿಸಿದೆ.

ಕರ್ನಾಟಕ ವಿಚಾರ ವೇದಿಕೆಯ ನರಸಿಂಹ ಮೂರ್ತಿ

ಗೆಲ್ಲಲು ಇರೋ ಕಂಡೀಷನ್ಸ್

1) ಗೆಲ್ಲೋ ವ್ಯಕ್ತಿ ಹೆಸರು ಹೇಳಬೇಕು. 2) ಗೆಲುವಿನ ಅಂತರ ಸರಿಯಾದ ನಂಬರ್ ಸಹಿತ ಹೇಳಬೇಕು. 3) ಸೋಲಿನ ಅಂತರವನ್ನೂ ಭವಿಷ್ಯ ನುಡಿಯಬೇಕು.4) ಮೇ 20 ಭವಿಷ್ಯ ನುಡಿಯಲು ಕೊನೆಯ ದಿನ. 5) ಭವಿಷ್ಯ ಸುಳ್ಳಾದ್ರೆ ವಿಚಾರ ವೇದಿಕೆಗೆ 1ರೂ ಡಂಡ ಕಟ್ಟಬೇಕು. ಇನ್ನು ಈ ರೀತಿ ಭವಿಷ್ಯ ನುಡಿಯೋರಿಗೆ ಕೆಲ ಟ್ರರ್ಮ್ಸ್ ಅಂಡ್ ಕಂಡೀಷನ್ಸ್​​ಗಳನ್ನೂ ಹಾಕಲಾಗಿದೆ.

543 ಕ್ಷೇತ್ರಗಳ ಪೈಕಿ ಒಂದನ್ನ ಆಯ್ಕೆ ಮಾಡಿಕೊಂಡು ಅದ್ರಲ್ಲಿ ಯಾರು ಗೆಲ್ತಾರೆ. ಎಷ್ಟು ಅಂತರದಿಂದ ಗೆಲ್ತಾರೆ. ಸೋತವರು ಎಷ್ಟು ಮತಗಳಿಂದ ಸೋಲ್ತಾರೆ ಅನ್ನೋದನ್ನ ಶೀಲ್ಡ್ ಕವರ್ ನಲ್ಲಿ ಬರೆದು ಕರ್ನಾಟಕ ವಿಚಾರ ವೇದಿಕೆಗೆ ಜ್ಯೋತಿಷಿಗಳು ಸಲ್ಲಿಸಬೇಕು. ಒಂದು ವೇಳೆ ಅವರ ನುಡಿದ ಭವಿಷ್ಯ ಸತ್ಯವಾದ್ರೆ ಕರ್ನಾಟಕ ವಿಚಾರ ವೇದಿಕೆ 1 ಕೋಟಿ ರೂ ನೀಡಲಿದೆ. ಇಲ್ಲವೇ ಸುಳ್ಳಾದ್ರೆ ಜ್ಯೋತಿಷಿ ವಿಚಾರ ವೇದಿಕೆಗೆ 1 ರೂ ದಂಡ ಕಟ್ಟಬೇಕಾಗುತ್ತೆ.

ಸೋಲಿನ ಅಂತರ ಸರಿಯಾಗಿ ಹೇಳುವ ಜ್ಯೋತಿಷಿಗಳಿದ್ರೆ ಭವಿಷ್ಯ ನುಡಿಯಲಿ ಎಂದು ಕರ್ನಾಟಕ ವಿಚಾರ ವೇದಿಕೆಯ ನರಸಿಂಹ ಮೂರ್ತಿ ಛಾಲೆಂಜ್ ಹಾಕಿದ್ದಾರೆ. ಒಟ್ಟಿನಲ್ಲಿ ವೇದಿಕೆ ಒಂದು ಕೋಟಿ ಆಫರ್ ನೀಡಿದೆ, ಆದ್ರೆ ಸೋಲಿನ ಅಂತರ ಸಹಿತ ಗೆಲುವಿನ ಅಂತರವನ್ನ ಒಂದಂಕಿಯೂ ಮಿಸ್ ಆಗದಂತೆ ಹೇಳೋ ಜ್ಯೋತಿಷಿ ಇದ್ದಾರಾ ? ಅನ್ನೋದಷ್ಟೇ ಕಾದುನೋಡಬೇಕು.

ABOUT THE AUTHOR

...view details