ತೂಮಕೂರು:ಕ್ಷೇತ್ರದ ಜನರಿಗೆ ನೀರು ಕೊಡಿ ಅಂದ್ರೆ ಬಿಯರ್ ಕೊಡ್ತಿದ್ದಾರೆ ಸ್ಥಳೀಯ ಜೆಡಿಎಸ್ ಶಾಸಕರು ಎಂದು ಮಾಜಿ ಶಾಸಕ ಸುರೇಶ್ ಗೌಡ ಆರೋಪಿಸಿದ್ದಾರೆ.
ತುಮಕೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಆಭ್ಯರ್ಥಿ ಜಿ.ಎಸ್.ಬಸವರಾಜು ಪರ ಬೃಹತ್ ರೋಡ್ ಶೋ ನಡೆಸಿ ಮತಯಾಚಿಸಿ ಮಾತನಾಡಿದ ಅವರು, ಜಿಲ್ಲೆಯ ಜನರು ನೀರು ಕೇಳಿದ್ರೆ ಇಲ್ಲಿನ ಸ್ಥಳೀಯ ಶಾಸಕರು ಬಿಯರ್ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ತುಮಕೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಆಭ್ಯರ್ಥಿ ಜಿ ಎಸ್ ಬಸವರಾಜು ಬೃಹತ್ ರೋಡ್ ಶೋ ನಾನು ಶಾಸಕನಾಗಿದ್ದ ಅವಧಿಯಲ್ಲಿ ಜಿಲ್ಲೆಗೆ ಹೇಮಾವತಿ ನೀರಿನ ಹಂಚಿಕೆ ವಿಚಾರದಲ್ಲಿ ಸಚಿವ ಹೆಚ್.ಡಿ.ರೇವಣ್ಣ, ದೇವೇಗೌಡರ ವಿರುದ್ಧ ನಿರಂತರ ಹೋರಾಟ ನಡೆಸಿದ್ದೆ. ಅದ್ರೆ ಪ್ರಸ್ತುತ ಗ್ರಾಮಾಂತರ ಕ್ಷೇತ್ರದ ಶಾಸಕ ಗೌರಿಶಂಕರ್ ಯಾವುದೇ ರೀತಿಯಲ್ಲೂ ಹೇಮಾವತಿ ನೀರು ವಿಚಾರವಾಗಿ ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದರು. ಜಿಲ್ಲೆಯಲ್ಲಿ ಮೋದಿ ಪರವಾಗಿ ಅಲೆ ಎದ್ದಿದೆ. ಇದು ನರೇಂದ್ರ ಮೋದಿ ಮತ್ತು ದೇವೇಗೌಡರ ನಡುವಿನ ಕಾಳಗ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ವಿ.ಸೋಮಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹುಚ್ಚಯ್ಯ ಹಾಜರಿದ್ದರು.