ಕರ್ನಾಟಕ

karnataka

ETV Bharat / elections

ಐಟಿ ದಾಳಿಗೆ ಹೆದರುವುದಿಲ್ಲ, ಇದು ರಾಜಕೀಯ ಪ್ರೇರಿತ: ಸಚಿವ ಪುಟ್ಟರಾಜು ಪುತ್ರ - mysore

ಸಚಿವ ಪುಟ್ಟರಾಜು ಮನೆ ಮೇಲೆ ಐಟಿ ದಾಳಿ ನಂತರ ಅವರ ಅಪಾರ್ಟ್​ಮೆಂಟ್ ಮೇಲೆ ದಾಳಿ ನಡೆದಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್​​ ನೀಡಲಾಗಿದೆ.

ಸಚಿವ ಪುಟ್ಟರಾಜು ಮಗ ಶಿವರಾಜು

By

Published : Apr 11, 2019, 7:15 PM IST

ಮೈಸೂರು:ಐಟಿ ಅಧಿಕಾರಿಗಳಿಗೆ ನಮ್ಮ ಮನೆಯಲ್ಲಿ ಒಂದು ಪೇಪರ್ ಸಹ ಸಿಕ್ಕಿಲ್ಲ. ಸಚಿವ ಸಿ.ಎಸ್.ಪುಟ್ಟರಾಜು ಪುತ್ರ ಶಿವರಾಜ್ ಈಟಿವಿ ಭಾರತ್​ಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟನೆ.

ಮೈಸೂರಿನ ಸಂಕಲ್ಪ ಅಪಾರ್ಟ್​ಮೆಂಟ್​ನಲ್ಲಿರುವ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಮಗನ ಮನೆಯ ಮೇಲೆ ಐಟಿ ಅಧಿಕಾರಿಗಳು ಹಾಗೂ ಚುನಾವಣಾ ಅಧಿಕಾರಿಗಳ 15 ಜನರ ತಂಡ ದಾಳಿ ಮಾಡಿದೆ.

ಸಚಿವ ಪುಟ್ಟರಾಜು ಮಗ ಶಿವರಾಜು

ದಾಳಿಯಲ್ಲಿ ಅಪಾರ್ಟ್​ಮೆಂಟ್​ನಲ್ಲಿ ಏನೂ ಸಿಕ್ಕಿಲ್ಲ. ಇದೊಂದು ರಾಜಕೀಯ ಪ್ರೇರಿತ ದಾಳಿಯಾಗಿದ್ದು, ಇಂತಹ ದಾಳಿಗಳು ನಡೆದ ಮೇಲೆ ಹೆಚ್ಚಿನ ಅಂತರದಿಂದ ಗೆಲ್ಲುತ್ತೇವೆ ಎಂದು ಸಚಿವರ ಮಗ ಶಿವರಾಜ್ ಪುಟ್ಟರಾಜು ಹೇಳಿದ್ದಾರೆ.

ನಮ್ಮ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದಾಗ ನಮ್ಮ ಮನೆಯಲ್ಲಿ ಕೆಲಸದ ಆಳುಗಳಿದ್ದರು. ವಿಷಯ ತಿಳಿದು ನನ್ನ ಹೆಂಡತಿ ಮತ್ತು ತಾಯಿ ಅಲ್ಲಿಗೆ ಬಂದಿದ್ದಾರೆ. ನಾನು ಬಂದ ನಂತರ 25ನೇ ತಾರೀಖು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನಿಡಿದ್ದಾರೆ. ಇದಕ್ಕೆಲ್ಲ ನಾವು ಹೆದರುವುದಿಲ್ಲ. ಇನ್ನು ಉಳಿದಿರುವ ಬೆಂಗಳೂರಿನ ಮನೆಯ ಮೇಲೂ ದಾಳಿ ಮಾಡಲಿ ಎಂದು ಶಿವರಾಜ್ ಈಟಿವಿ ಭಾರತ್ ಜೊತೆ ಹೇಳಿಕೊಂಡರು.

ABOUT THE AUTHOR

...view details