ಕರ್ನಾಟಕ

karnataka

ETV Bharat / elections

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2 ಲಕ್ಷ ಹಣ ವಶ - kannada news

ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿಯೇ ಏರಿದೆ. ಇತ್ತ ಹಣದ ಹೋಳೆ ಹರಿದಾಡುತ್ತಿದ್ದು, ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣವನ್ನು ಚುನಾವಣಾ ಅಧಿಕಾರಿಗಳ ವಶಕ್ಕೆ ಪಡೆದಿದ್ದಾರೆ.

ಅಕ್ರಮ ಹಣ ಸಾಗಣಿಕೆ

By

Published : Apr 15, 2019, 11:12 AM IST

ದಾವಣಗೆರೆ/ವಿಜಯಪುರ: ದಾಖಲೆ ಇಲ್ಲದ 64 ಸಾವಿರ ಹಣವನ್ನು ದಾವಣಗೆರೆ ಜಿಲ್ಲೆಯಲ್ಲಿ ಚನ್ನಗಿರಿ ತಾಲೂಕಿನ ಮಾವಿನಕಟ್ಟೆ ಚೆಕ್ ಪೋಸ್ಟ್ ಬಳಿ ವಶಪಡಿಸಿಕೊಳ್ಳಲಾಗಿದೆ.

ಶಿವಮೊಗ್ಗದ ಸುಭಾಷ್ ಎನ್ನುವವರ ಕಾರ್​ನಲ್ಲಿ ಹಣ ಪತ್ತೆಯಾಗಿದ್ದು, ದಾಖಲೆ ಒದಗಿಸುವುದರಲ್ಲಿ ವಿಫಲರಾದ ಹಿನ್ನೆಲೆ ಚುನಾವಣಾ ಅಧಿಕಾರಿ ಬಿ.ರೇವಣ್ಣ ನೇತೃತ್ವದಲ್ಲಿ ಹಣ ವಶಪಡಿಸಿಕೊಳ್ಳಲಾಗಿದೆ.

ವಿಜಯಪುರದಲ್ಲಿಯೂ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1.50 ಲಕ್ಷ ರೂಪಾಯಿ ವಶಕ್ಕೆ ಪಡೆಯಲಾಗಿದೆ. ಇಂಡಿ ತಾಲೂಕಿನ ಶಿರಾಡೋಣ ಚೆಕ್ ಪೋಸ್ಟ್ ಬಳಿ ಮಹಾರಾಷ್ಟ್ರದ ಪರೀತಿವಾಡ ಗ್ರಾಮದ ಮಹಾದೇವ ಮೊರೆ ಎಂಬುವವರ ದಾಖಲೆ ರಹಿತ 1.50 ಲಕ್ಷ ನಗದು ಹಣ ವಶಕ್ಕೆ ಪಡೆಯಲಾಗಿದೆ.

ವಾಹನ ಪರಿಶೀಲನೆ ವೇಳೆ ಹಣ ಪತ್ತೆಯಾಗಿದೆ. ಚಡಚಣ ಪೊಲೀಸರು ಹಾಗೂ ಚುನಾವಣಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ABOUT THE AUTHOR

...view details