ಗದಗ: ಜಾಹಿರಾತಿನಲ್ಲಿ ದೇಶದ ಬಾವುಟ ಬಳಸಿ ಬಿಜೆಪಿ ಭಾರತಿಯ ಸಂವಿಧಾನಕ್ಕೆ ಅಪಚಾರ ಮಾಡಿದೆ, ಇದು ಕಾನೂನು ಬಾಹಿರ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಮಾತನಾಡಿ, ಬಿಜೆಪಿ ನೀಡಿರುವ ಜಾಹಿರಾತಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪಾಟೀಲ್, ಬಿಜೆಪಿ ದೇಶದ ಬಾವುಟವನ್ನು ಜಾಹಿರಾತಿನಲ್ಲಿ ಪ್ರಚಾರಕ್ಕೆ ಬಳಸಿಕೊಂಡಿದೆ. ಇದು ಸಂವಿಧಾನಕ್ಕೆ ಮಾಡಿದ ಅಪಚಾರ, ಕಾನೂನು ಬಾಹಿರ, ನೀತಿಸಂಹಿತೆ ಹಾಗೂ ರಾಷ್ಟ್ರೀಯ ಧ್ವಜನೀತಿ ಸಂಹಿತೆ ಉಲ್ಲಂಘನೆ. ಎಲ್ಲಿ ರಾಷ್ಟ್ರೀಯ ಧ್ವಜವನ್ನು ಉಪಯೋಗಿಸಬಹುದು ಅಂತ ಅದರದ್ದೇ ನೀತಿ ತಿಳಿಸುತ್ತದೆ.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ರಾಜಕೀಯಕ್ಕಾಗಿ ರಾಷ್ಟ್ರೀಯ ಧ್ವಜವನ್ನು ಉಪಯೋಗಿಸಿರೋದು ಕಾನೂನು ಬಾಹಿರ. ಈ ಜಾಹಿರಾತನ್ನು ಪ್ರಚಾರ ಮಾಡಿದ ಎಲ್ಲರಿಗೂ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ಚುನಾವಣಾ ಆಯುಕ್ತರು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಕುರಿತು ಪಕ್ಷದಿಂದ ಲಿಖಿತ ದೂರೂ ಕೊಡ್ತೇವೆ ಎಂದರು.
20 ಹಾಗೂ 21 ಕ್ಕೆ ರೋಡ್ ಶೋ ಮತ್ತು ಸಾರ್ವಜನಿಕ ಸಭೆ ಹಮ್ಮಿಕೊಂಡಿದ್ದೇವೆ, ಗ್ರಾಮೀಣ ಬದುಕಿನಲ್ಲಿ ಛಲತೊಟ್ಟು ಹೋರಾಡಿದ ಡಿ.ಆರ್.ಪಾಟೀಲ್ ರನ್ನ ಗೆಲ್ಲಿಸ್ತೇವೆ ಅಂತ ಜನ ಹೇಳಿದ್ದಾರೆ. ಸಿದ್ದರಾಮಯ್ಯನವರ ಜನಪರ ಕಾರ್ಯಕ್ರಮಗಳನ್ನು ಗಮನಿಸಿ ಜನರು ಬೆಂಬಲಿಸ್ತಿದ್ದಾರೆ.
ನಿನ್ನೆ ನಡೆದ ಕಾರ್ಯಕ್ರಮದಲ್ಲಿನ ಜನಸ್ಪಂದನೆ ಪಕ್ಷಕ್ಕೆ ದೊಡ್ಡ ಶಕ್ತಿ ತಂದಿದೆ. ಡಿ ಆರ್ ಪಾಟೀಲ್ ಅವರ ವ್ಯಕ್ತಿತ್ವ ಹಾಗೂ ಕಾಂಗ್ರೆಸ್ನ ನ್ಯಾಯ ಹಾಗೂ ಋಣಮುಕ್ತ ರೈತ ಕಾರ್ಯಕ್ರಮಗಳನ್ನು ನೋಡಿ ಜನ ನಮ್ಮನ್ನು ಆಶೀರ್ವದಿಸಲಿದ್ದಾರೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ರು.