ಚಿಕ್ಕೋಡಿ: ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಸಂಸದ ಪ್ರಕಾಶ್ ಹುಕ್ಕೇರಿ ಕ್ಷೇತ್ರವಾರು ಪ್ರವಾಸ ಮಾಡಿ ನಂತರ ಕೊನೆ ಕ್ಷಣದಲ್ಲಿ ಮತದಾನ ಮಾಡಿದ್ದಾರೆ.
ಕೊನೆ ಕ್ಷಣದಲ್ಲಿ ಮತ ಚಲಾಯಿಸಿದ ಪ್ರಕಾಶ್ ಹುಕ್ಕೇರಿ
ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಕೊನೆ ಕ್ಷಣದಲ್ಲಿ ಮತದಾನ ಮಾಡಿದ್ದಾರೆ.
ಕೊನೆ ಕ್ಷಣದಲ್ಲಿ ಮತ ಚಲಾಯಿಸಿದ ಪ್ರಕಾಶ ಹುಕ್ಕೇರಿ
ತಾಲೂಕಿನ ಎಕ್ಸಂಬಾ ಗ್ರಾಮದ ಸರ್ಕಾರಿ ಕನ್ನಡ ಹೆಣ್ಣುಮಕ್ಕಳ ಶಾಲೆಯಲ್ಲಿ ಸಂಜೆ 5:45ಕ್ಕೆ ಮತ ಚಲಾಯಿಸಿದ್ದಾರೆ.
ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷ ಬಿಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರ ನಿರ್ಧಾರ ಪಕ್ಷದ ಹಿರಿಯ ಮುಖಂಡರಿಗೆ ಬಿಟ್ಟ ವಿಚಾರ. ರಮೇಶ್ ಜಾರಕಿಹೋಳಿ ನಾನು ಉತ್ತಮ ಸ್ನೇಹಿತರು. ಅವರು ಕಾಂಗ್ರೆಸ್ ಪಕ್ಷದಲ್ಲಿ ಇರುತ್ತಾರೆ. ಅವರಲ್ಲಿರುವಂತಹ ಅಸಮಾಧಾನ ಹೈಕಮಾಂಡ್ ಬಗೆಹರಿಸುತ್ತೆ ಎಂದು ಹೇಳಿದರು.